ಹೆಸರಿಗೆ ಇದು ನಥಿಂಗ್ ಫೋನ್, ಆದ್ರೆ ಇದ್ರಲ್ಲಿದೆ ಸಮ್‌ಥಿಂಗ್, ಸಮ್‌ಥಿಂಗ್!

|

ಸದ್ಯ ಮೊಬೈಲ್‌ ಮಾರುಕಟ್ಟೆಯಲ್ಲಿ ಪೈಪೋಟಿ ಅಧಿಕವಾಗಿದ್ದು, ಪ್ರಮುಖ ಲೀಡಿಂಗ್ ಸಂಸ್ಥೆಗಳು ಆಕರ್ಷಕ ಫೋನ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಅದಾಗ್ಯೂ, ಇನ್ನು ಕೆಲವು ಸಂಸ್ಥೆಗಳು ಸಹ ನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಿಟ್ಟಿನಲ್ಲಿ 'ನಥಿಂಗ್ ಫೋನ್' (Nothing Phone) ಪ್ರಸ್ತುತ ಸದ್ದು ಮಾಡುತ್ತಿದ್ದು, ಆನ್‌ಲೈನ್‌ ಪ್ಲಾಟ್‌ಫಾರ್ಮ್ ನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೆಸರಿಗೆ ಇದು ನಥಿಂಗ್ ಫೋನ್, ಆದ್ರೆ ಇದ್ರಲ್ಲಿದೆ ಸಮ್‌ಥಿಂಗ್, ಸಮ್‌ಥಿಂಗ್!

ಹೌದು, ನಥಿಂಗ್ ಫೋನ್ (Nothing Phone 1) ಇದೇ ಜುಲೈ 16 ರಂದು ಗ್ಲೋಬಲ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹಾಗೆಯೇ ದೈತ್ಯ ಇ ಕಾಮರ್ಸ್ ತಾಣ ಫ್ಲಿಕ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದ್ದು, ಈಗಾಗಲೇ ಪ್ರೀ ಬುಕಿಂಗ್ ಬಗ್ಗೆ ಮಾಹಿತಿ ಕಾಣಿಸಿದೆ. ಕೆಲವೊಂದು ಫೀಚರ್ಸ್‌ಗಳ ಬಗ್ಗೆಯು ಮಾಹಿತಿ ಲೀಕ್ ಮಾಡಿದೆ. ನಥಿಂಗ್ ಫೋನ್ ಸಮ್‌ಥಿಂಗ್ (something) ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೇ ನಥಿಂಗ್ ಫೋನಿನ ಕೆಲವು ಸಮ್‌ಥಿಂಗ್ ಸಂಗತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಟಿಪ್‌ಸ್ಟಾರ್ ಮುಖೇಶ್ ಶರ್ಮಾ ಟ್ವಿಟ್ ಪ್ರಕಾರ ಈ ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ ಪ್ರಿ ಬುಕಿಂಗ್‌ಗೆ ಲಭ್ಯ ಆಗಲಿದೆ. ಈ ಫೋನಿನ ಪ್ರಿ ಬುಕಿಂಗ್ ಮೊತ್ತ 2000ರೂ. ಆಗಿರಲಿದೆ ಎನ್ನಲಾಗಿದೆ. ಆಸಕ್ತ ಖರೀದಿದಾರರು ಫೋನ್‌ನ ಸಂಪೂರ್ಣ ಪಾವತಿಯನ್ನು ಮಾಡಲು ಮುಂದಾದಾಗ ಈ ಪೂರ್ವ ಬುಕಿಂಗ್ ಮೊತ್ತವನ್ನು ಫೋನ್‌ನ ಬೆಲೆಯಿಂದ ಕಡಿತಗೊಳಿಸಲಾಗುತ್ತದೆ.

ಟಿಪ್‌ಸ್ಟಾರ್ ಮುಖೇಶ್ ಶರ್ಮಾ ಹಂಚಿಕೊಂಡ ಪ್ರಿ ಬುಕಿಂಗ್ ಸ್ಕ್ರೀನ್‌ಶಾಟ್‌ ನಂತೆ ದೇಶದಲ್ಲಿ ಈ ಫೋನ್ ಭಿನ್ನ ವೇರಿಯಂಟ್‌ ಆಯ್ಕೆಗಲ್ಲಿ ಲಗ್ಗೆ ಇಡಲಿದೆ. ಇನ್ನು ಈ ನಥಿಂಗ್ ಫೋನ್ ಬಿಡುಗಡೆಗೊಂಡ ಒಂದು ವಾರದೊಳಗೆ, ಅಂದರೇ ಜುಲೈ 18 ರಿಂದ ಸೇಲ್ ಪ್ರಾರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಹೆಸರಿಗೆ ಇದು ನಥಿಂಗ್ ಫೋನ್, ಆದ್ರೆ ಇದ್ರಲ್ಲಿದೆ ಸಮ್‌ಥಿಂಗ್, ಸಮ್‌ಥಿಂಗ್!

ಹಾಗೆಯೇ ಮುಂಬರುವ ನಥಿಂಗ್ ಫೋನ್ (1) ಫೋನಿನ ಫೀಚರ್ಸ್‌ಗಳ ಬಗ್ಗೆ ನೋಡುವುದಾರೆ, ಇದು 6.55 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, ಈ ಫೋನಿನ ಡಿಸ್‌ಪ್ಲೇಯು 2400 × 1080 ಪಿಕ್ಸೆಲ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಹಾಗೆಯೇ ಇದು 90Hz ನ ಸ್ಕ್ರೀನ್ ರಿಫ್ರೆಶ್ ದರದೊಂದಿಗೆ ಎಂಟ್ರಿ ಕೊಡಲಿದೆ. ಇದರೊಂದಿಗೆ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 7 Gen 1 (Qualcomm Snapdragon 7 Gen 1) ಚಿಪ್‌ಸೆಟ್‌ ಪ್ರೊಸೆಸರ್‌ದ ನಿಂದ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಅಡ್ರೆನೊ GPU ಸಪೋರ್ಟ್‌ ಸಹ ಪಡೆದಿರುವ ನಿರೀಕ್ಷೆಯಿದೆ.

ಇದರೊಂದಿಗೆ ಈ ಫೋನ್ 8 GB RAM ಮತ್ತು 128 GB ಯ ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿರುವ ಸಾಧ್ಯತೆಗಳಿದ್ದು, ಇದಕ್ಕೂ ಹೆಚ್ಚಿನ ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ಹೆಚ್ಚುವರಿ ಸ್ಟೋರೇಜ್‌ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಒಳಗೊಂಡಿರಲಿದೆ. ಇದು ಆಂಡ್ರಾಯ್ಡ್ 12 ಆಧಾರಿತ ನಥಿಂಗ್ ಓಎಸ್‌ನಲ್ಲಿ ಕಾರ್ಯ ನಿರ್ವಹಿಸಲು ಸಲಹೆ ನೀಡಿದೆ. ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದ್ದು, ಅದಕ್ಕೆ ಪೂರಕವಾಗಿ 45W ವೈರ್ಡ್ ಚಾರ್ಜಿಂಗ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದೆ. ಇನ್ನು ಈ ಫೋನಿನ ಕ್ಯಾಮೆರಾದ ಬಗ್ಗೆ ವಿವರಗಳು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

Best Mobiles in India

English summary
Nothing Phone (1) Available for Pre-Booking on Flipkart: Everything you need to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X