ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

Written By:

ಜಗತ್ತಿನ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ವಿಶ್ವದ ಗಣ್ಯವ್ಯಕ್ತಿಗಳಲ್ಲೊಬ್ಬರು. ಇವರ ಭದ್ರತೆಯ ವಿಷಯದಲ್ಲಿ ಎಷ್ಟು ಕಟ್ಟೆಚ್ಚರವನ್ನು ವಹಿಸಿದ್ದಾರೆ ಎಂಬುದನ್ನು ಕುರಿತೇ ಇಂದಿನ ಲೇಖನವನ್ನು ಸಿದ್ಧಪಡಿಸಲಾಗಿದೆ. ಒಬಾಮಾರ ಭದ್ರತೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಲಾಗಿದೆ. ಅವರು ಬಳಸುತ್ತಿರುವ ಬ್ಲ್ಯಾಕ್‌ಬೆರ್ರಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಹೇಗೆ ಅಳವಡಿಸಲಾಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ತಿಳಿದುಕೊಳ್ಳಬಹುದಾಗಿದೆ.

(ಇದನ್ನೂ ಓದಿ: ಮೊಬೈಲ್ ಬಿಲ್ ಕಡಿಮೆಮಾಡಲು ಇಲ್ಲಿದೆ 8 ಟ್ರಿಕ್ಸ್)

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

ಶ್ವೇತಭವನದ ಒಳಗೆ ಮತ್ತು ಹೊರಗೆ ಫೋನ್ ಭದ್ರತೆಯನ್ನು ತುಂಬಾ ಬಿಗಿಗೊಳಿಸಲಾಗಿದ್ದು ಅವರ ಭದ್ರತೆಯ ವಿಷಯದಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಲಾಗಿದೆ.

• ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ಬರಾಕ್ ಒಬಾಮಾ ತಮ್ಮ ಫೋನ್‌ಗೆ ಪಾಸ್‌ಕೋಡ್ ಅನ್ನು ಅಳವಡಿಸಿದ್ದು ಇದು ವೃತ್ತಿಪರ ಹ್ಯಾಕರ್‌ಗಳಿಂದ ಅವರನ್ನು ರಕ್ಷಿಸುತ್ತದೆ. ಇವರು ಭದ್ರವಾದ ಗುಪ್ತಚರ ವಿಭಾಗಗಳನ್ನು ಹೊಂದಿದ್ದು ಹಗಲು ರಾತ್ರಿ ಬಿಗಿ ಭದ್ರತೆಯನ್ನು ಈ ವಿಭಾಗ ಒಬಾಮಾರಿಗೆ ಒದಗಿಸುತ್ತಿದೆ.

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

•ಒಬಾಮಾ ಕೆಲವು ವರ್ಷಗಳಿಂದ ಬ್ಲ್ಯಾಕ್‌ಬೆರ್ರಿಯನ್ನು ಬಳಸುತ್ತಿದ್ದು ಅಮೇರಿಕಾದ ಅಧ್ಯಕ್ಷರಾದ ನಂತರ ಭದ್ರತಾ ಉದ್ದೇಶಕ್ಕಾಗಿ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್‌ಎಸ್‌ಎ) ನಿರ್ಮಿಸಿದ ಸೆಕ್ಯೂರ್ ಸೆಕ್ಟೆರಾ ಎಡ್ಜ್ ಫೋನ್ ಅನ್ನು ಬಳಸುತ್ತಿದ್ದಾರೆ.

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

•ಹ್ಯಾಕರ್‌ಗಳಿಂದ ಒಬಾಮಾ ಫೋನ್ ಅನ್ನು ರಕ್ಷಿಸುವುದಕ್ಕಾಗಿ ಬ್ಲ್ಯಾಕ್‌ಬೆರ್ರಿಯನ್ನು ಅವರು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಇದರಲ್ಲಿ ಯಾವುದೇ ಗೇಮ್ಸ್‌ಗಳಿಲ್ಲ ಸೆಲ್ಫಿ ಕ್ಯಾಮೆರಾ ಅಂತೆಯೇ ಸಂದೇಶ ಫಂಕ್ಷನ್ ಇಲ್ಲ. ಆದರೂ ಮಹತ್ತರವಾದ ಎನ್‌ಕ್ರಿಪ್ಶನ್ ಫೀಚರ್ ಅನ್ನು ಫೋನ್ ಒಳಗೊಂಡಿದೆ.

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

•ಇದೇ ಮಾದರಿಯ ಎನ್‌ಕ್ರಿಪ್ಶನ್ ಫೋನ್ ಅನ್ನು ಹೊಂದಿರುವ ಕೇವಲ 10 ವ್ಯಕ್ತಿಗಳಿಗೆ ಮಾತ್ರ ಕರೆಮಾಡಬಹುದಾಗಿದೆ. ಅವರ ಮಾಧ್ಯಮ ಸೆಕ್ರೆಟರಿ, ಪತ್ನಿ ಮತ್ತು ಕುಟುಂಬದ ಕೆಲವು ಸದಸ್ಯರಿಗೆ ಮಾತ್ರ ಇವರು ಫೋನ್ ಮಾಡಬಹುದಾಗಿದೆ.

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

•ಇನ್ನು ಮೂಲಗಳ ಪ್ರಕಾರ ಭದ್ರ ಸಂಪರ್ಕವನ್ನು ಬಳಸಿ ಬ್ಲ್ಯಾಕ್‌ಬೆರ್ರಿಯನ್ನು ಸಂಪರ್ಕಪಡಿಸಬಹುದಾಗಿದೆ. ಡಿವೈಸ್‌ನ ಇಎಮ್ಇಐ ಸಂಖ್ಯೆಯನ್ನು ಮರೆಮಾಡಲು ಈ ಭದ್ರತೆಯನ್ನು ಬಳಸುತ್ತಿದ್ದು ಇದರಿಂದ ಫೋನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ.

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

•ವಾಶಿಂಗ್ಟನ್‌ ಜೊತೆಗೆ ಈ ಭದ್ರ ಸ್ಯಾಟಲೈಟ್ ಲಿಂಕ್ ಅನ್ನು ಸಂಪರ್ಕಪಡಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೂಡ ಈ ಭದ್ರ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

English summary
This article tells about Obama's India visit: Barack Obama is the most tech-savvy US President till date.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot