Just In
- 7 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 8 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 10 hrs ago
ಭಾರತದಲ್ಲಿ ಒನ್‌ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 12 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್ಲೈನ್ನಲ್ಲಿ ಡಿಸ್ಕೌಂಟ್ ಬೆಲೆಗೆ ಸಿಗಲಿವೆ ಈ ಸ್ಮಾರ್ಟ್‌ಫೋನ್‌ಗಳು!
ಪ್ರಸ್ತುತ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಕೂಡ ಒಂದು ಪ್ರಮುಖ ಮಾರುಕಟ್ಟೆಯಾಗಿ ಬದಲಾಗಿದೆ. ಬೆರಳ ತುದಿಯಲ್ಲಿಯೇ ನಿಮಗಿಷ್ಟವಾದ ವಸ್ತುವನ್ನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಗೆ ಬರುವಂತೆ ಮಾಡಬಹುದು. ಸದ್ಯ ಆನ್‌ಲೈನ್ ಮಳಿಗೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ರಿಯಲ್‌ಮಿ.ಕಾಮ್ ಮತ್ತು ಮಿ.ಕಾಮ್ ಆನ್‌ಲೈನ್ ನಲ್ಲಿ ಕೆಲವೊಂದು ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ನೀಡಲಾಗ್ತಿದ್ದು. ನಿಮಗಿಷ್ಟದ ಫೋನ್‌ಗಳನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೌದು, ವಾರದ ಕೊನೆಯ ದಿನ ಇಲ್ಲವೇ ತಿಂಗಳ ಕೊನೆವಾರದಲ್ಲಿ ಹಾಗೂ ಹಬ್ಬ ಹರಿದಿನ ಸೇರಿದಂತೆ ಕೆಲವೊಂದು ವಿಶೇಷ ದಿನಗಳಲ್ಲಿ ಆನ್‌ಲೈನ್ ಮಾರಾಟ ಮಳಿಗೆಗಳಲ್ಲಿ ಕೆಲ ವಸ್ತುಗಳಿಗೆ ರಿಯಾಯಿತಿ ದರವನ್ನ ನಿಗಧಿ ಮಾಡಲಾಗಿರುತ್ತೆ. ಸದ್ಯ ಇದೀಗ ಅಮೆಜಾನ್, ಫ್ಲಿಪ್‌ಕಾರ್ಟ್,ರಿಯಲ್‌ಮಿ.ಕಾಮ್ ಮತ್ತು ಮಿ.ಕಾಮ್ ಆನ್‌ಲೈನ್ನಲ್ಲಿ ಕೆಲ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ರಿಯಾಯಿತಿ ದರ ಘೋಷಿಸಿದ್ದು, ಗ್ರಾಹಕರಿಗೆ ಉತ್ತಮ ಸುವರ್ಣಾವಕಾಶವನ್ನ ನೀಡಲಾಗಿದೆ. ಅಷ್ಟಕ್ಕೂ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ

ಒನ್‌ಪ್ಲಸ್ 7 ಪ್ರೊ
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಸದ್ಯ ಅಮೆಜಾನ್.ಕಾಂನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ವರ್ಷಾಂತ್ಯದ ಹಿನ್ನೆಲೆಯಲ್ಲಿ ಅಮೆಜಾನ್.ಕಾಂ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದರವನ್ನ ನಿಗಧಿ ಮಾಡಿದ್ದು. ಸದ್ಯ ಈ ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಬೆಲೆ 42,999 ರೂ.ಆಗಿದ್ದು, ಇದೀಗ 10,000 ರೂಗಳ ವರೆಗೂ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7-ಇಂಚಿನ ಅಮೋಲೆಡ್ ಕ್ಯೂಎಚ್‌ಡಿ ಡಿಸ್‌ಪ್ಲೇ ಯನ್ನ ಹೊಂದಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ಯನ್ನ ಒಳಗೊಂಡಿದೆ.

ರೆಡ್‌ಮಿ ನೋಟ್ 7 ಪ್ರೊ
ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್ ಸಹ ಆನ್‌ಲೈನ್ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಬೆಲೆ 15,999ರೂ ಆಗಿದ್ದು ಸದ್ಯ 6,000ರೂ ಗಳ ರಿಯಾಯಿತಿ ಕೇವಲ 9,999 ರೂ.ಗೆ ಈ ಸ್ಮಾರ್ಟ್‌ಫೋನ್ ಅನ್ನ ನೀವು ಖರೀದಿಸಬಹುದಾಗಿದೆ. ಅಲ್ಲದೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದ್ದು. ಯಾವುದೇ ಸ್ಮಾರ್ಟ್‌ಫೋನ್ ಅನ್ನ ಎಕ್ಸ್‌ಚೇಂಜ್ ಮಾಡಿದ್ರೆ 1,000 ರೂ.ಗಳ ರಿಯಾಯಿತಿ ಪಡೆದು ಈ ಸ್ಮಾರ್ಟ್‌ಫೋನ್ ಅನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.3 ಇಂಚಿನ ಬೆಝೆಲ್ ಲೆಸ್ ಡಿಸ್‌ಪ್ಲೇ ಯನ್ನ ಹೊಂದಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 675 ಅಕ್ಟಾ ಕೋರ್ ಪ್ರೊಸೆಸರ್ ಅನ್ನ ಒಳಗೊಂಡಿದೆ.

ರಿಯಲ್‌ಮಿ 5 ಪ್ರೊ
ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್ ಪ್ರಸ್ತುತ 13,999 ರೂ ಬೆಲೆಯನ್ನ ಹೊಂದಿದ್ದು ಆನ್‌ಲೈನ್ ಶಾಪಿಂಗ್ ಮಾಡಿದ್ರೆ ರಿಯಾಯಿತಿ ದರದಲ್ಲಿ ಕೇವಲ 11,999 ರೂಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ 6GB RAM ಮತ್ತು 64GB ಸಂಗ್ರಹ ಸಾಮರ್ಥ್ಯದ ರಿಯಲ್‌ಮಿ 5 ಪ್ರೊ 14,999 ರೂಗಳಿಗೆ ಲಭ್ಯವಾಗಲಿದೆ. ಜೊತೆಗೆ 8GB RAMಮತ್ತು 128GB ಸ್ಟೋರೇಜ್ ಸಾಮರ್ಥ್ಯದ ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್ 16,999 ರೂಗಳಿಗೆ ಲಭ್ಯವಾಗಲಿದ್ದು. ಎಲ್ಲಾ ಮಾದರಿಯ ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ 2000ರೂ ರಿಯಾಯಿತಿ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 712 ಅಕ್ಟಾ ಕೋರ್ 2.3GHz ಪ್ರೊಸೆಸರ್ ಒಳಗೊಂಡಿದೆ.

ಒನ್‌ಪ್ಲಸ್ 7T
ಒನ್‌ಪ್ಲಸ್ 7T ಸ್ಮಾರ್ಟ್‌ಫೋನ್ ಅಮೆಜಾನ್.ಕಾಮ್ ಆನ್‌ಲೈನ್ ಶಾಪಿಂಗ್ ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದ್ದು, 37,999ರೂ ಬೆಲೆ ಸ್ಮಾರ್ಟಫೋನ್ ಇದೀಗ ಕೇವಲ 34,999ರೂಗಳಿಗೆ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.55-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್ ಅನ್ನ ಒಳಗೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಖರೀದಿಗೆ ಅಮೆಜಾನ್.ಕಾಂನಲ್ಲಿ 12 ತಿಂಗಳವರೆಗೆ ನೋ ಕಾಸ್ಟ್ EMI ಅವಕಾಶವನ್ನು ಸಹ ನೀಡಲಾಗಿದೆ.

ರೆಡ್ಮಿ ಕೆ 20 ಪ್ರೊ
ರೆಡ್ಮಿ ಕೆ 20 ಪ್ರೊ ಸ್ಮಾರ್ಟ್‌ಫೋನ್ ಪ್ರಸ್ತುತ ಮಾರುಕಟ್ಟೆ ಬೆಲೆ 27,999 ರೂ ಆಗಿದ್ದು, ಆನ್‌ಲೈನ್ ಮಳಿಗೆಗಳಲ್ಲಿ 3,000 ರೂಗಳ ವರೆಗೂ ರಿಯಾಯಿತಿ ದೊರೆಯಲಿದ್ದು 24,999 ರೂಗಳಿಗೆ ಈ ಸ್ಮಾರ್ಟ್‌ಫೋನ್ ಅನ್ನ ಖರೀದಿಸಬಹುದು. 6GBRAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಹಾಗೂ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ವೇರಿಂಯೆಂಟ್ ಆಯ್ಕೆಯ ಸ್ಮಾರ್ಟ್‌ಫೋನ್ ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.39 ಇಂಚಿನ ಅಮೊಲೇಡ್ ಡಿಸ್‌ಪ್ಲೇ ಯನ್ನ ಹೊಂದಿದ್ದು ಕ್ವಾಲಕಾಮ್ ಸ್ನಾಪ್‌ಡ್ರಾಗನ್ 855 ಆಕ್ಟಾ ಕೋರ್ ಪ್ರೊಸೆಸರ್ ಒಳಗೊಂಡಿದೆ, ಆಂಡ್ರಾಯ್ಡ್ ಪೈ 9.0 ಒಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ರಿಯಲ್‌ಮಿ 3I
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿರೋ ರಿಯಲ್‌ಮಿ 3I ಸ್ಮಾರ್ಟ್‌ಫೋನ್ ರಿಯಲ್‌ಮಿ.ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 7,999ರೂ ಮಾರುಕಟ್ಟೆ ಬೆಲೆಯನ್ನ ಹೊಂದಿದ್ದು ಆನ್‌ಲೈನ್ ಮಳಿಗೆಗಳಲ್ಲಿ 1,000 ರೂ ರಿಯಾಯಿತಿಯೊಂದಿಗೆ ಕೇವಲ 6,999 ರೂಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.20 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು ಮೀಡಿಯಾ ಟೆಕ್ ಹಿಲಿಯೊ ಪಿ 60 ಪ್ರೊಸೆಸರ್ ಅನ್ನ ಒಳಗೊಂಡಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190