EV ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಜಿಯೋ-ಬಿಪಿ

|

ಭಾರತದ ಪ್ರಮುಖ ರಿಯಲ್ ಎಸ್ಟೇಟ್‌ ಡೆವಲಪರ್‌ಗಳಾದ ಒಮ್ಯಾಕ್ಸ್‌ ಇಂದು ಜಿಯೋ ಬಿಪಿ (Jio-bp) ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್‌, ಘಾಜಿಯಾಬಾದ್, ನ್ಯೂ ಚಂಡೀಗಢ, ಲೂಧಿಯಾನ, ಪಟಿಯಾಲ, ಅಮೃತಸರ, ಜೈಪುರ, ಸೋನಿಪತ್ತ ಮತ್ತು ಬಹಾದುರ್‌ಗಢದಲ್ಲಿ ಹಂತ ಹಂತವಾಗಿ ಒಮ್ಯಾಕ್ಸ್‌ ಸ್ಥಳದಲ್ಲಿ ಇವಿ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ಮೂಲಸೌಕರ್ಯವನ್ನು ಜಿಯೋ ಬಿಪಿ (Jio-bp) ಸ್ಥಾಪಿಸಲಿದೆ.

EV ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಜಿಯೋ-ಬಿಪಿ

ವಾಣಿಜ್ಯ ಸ್ಥಳಗಳಲ್ಲಿ ಇವಿ ಚಾರ್ಜಿಂಗ್‌ ಸೌಲಭ್ಯದ ಅಗತ್ಯವನ್ನು ಮನಗಂಡಿರುವ ಜಿಯೋ-ಬಿಪಿ ದೇಶದಲ್ಲಿನ ಡೆವಲಪರ್‌ಗಳು ಮತ್ತು ರಿಯಲ್‌ ಎಸ್ಟೇಟ್‌ ಪ್ಲೇಯರ್‌ಗಳ ಜೊತೆಗೆ ಕೆಲಸ ಮಾಡುತ್ತಿದೆ. ಒಮ್ಯಾಕ್ಸ್‌ ಸ್ಥಳಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 24/7 ಚಾರ್ಜಿಂಗ್‌ ಮೂಲಸೌಕರ್ಯವನ್ನು ಜಿಯೋ ಬಿಪಿ (Jio-bp) ಸ್ಥಾಪಿಸಲಿದೆ.

ಕಳೆದ ವರ್ಷದ ಭಾರತದ ಎರಡು ಅತಿದೊಡ್ಡ ಇವಿ ಚಾರ್ಜಿಂಗ್‌ ಹಬ್‌ಗಳನ್ನು ಜಿಯೋ ಬಿಪಿ (Jio-bp) ನಿರ್ಮಿಸಿ ಅನಾವರಣಗೊಳಿಸಿದೆ. ವಿದ್ಯುದೀಕರಣದಲ್ಲಿ ಆರ್‌ಐಎಲ್ ಮತ್ತು ಬಿಪಿ ಉತ್ತಮ ಸಾಮರ್ಥ್ಯವನ್ನು ಬಳಸಿಕೊಂಡಿರುವ ಜಿಯೋ-ಬಿಪಿ (Jio-bp), ಇವಿ ಮೌಲ್ಯ ಸರಣಿಯಲ್ಲಿ ಎಲ್ಲ ಪಾಲುದಾರರಿಗೆ ಪ್ರಯೋಜನ ಮಾಡಿಕೊಡುವ ಚಾರ್ಜಿಂಗ್‌ ವ್ಯವಸ್ಥೆಯನ್ನು ರೂಪಿಸುತ್ತಿದೆ.

EV ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಜಿಯೋ-ಬಿಪಿ

ಜಂಟಿ ಸಹಭಾಗಿತ್ವದ ಅಡಿಯಲ್ಲಿ ಇವಿ ಸೇವೆಗಳು ಜಿಯೋ ಬಿಪಿ ಪಲ್ಸ್‌ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಜಿಯೋ ಬಿಪಿ (Jio-bp) ಪಲ್ಸ್‌ ಮೊಬೈಲ್ ಆಪ್‌ ಬಳಸಿಕೊಂಡು ಗ್ರಾಹಕರು ಸುಲಭವಾಗಿ ಸಮೀಪದಲ್ಲಿನ ಚಾರ್ಜಿಂಗ್‌ ಸ್ಟೇಷನ್‌ ಕಂಡುಕೊಳ್ಳಬಹುದು ಮತ್ತು ಸರಾಗವಾಗಿ ತಮ್ಮ ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು.

ಕಳೆದ 34 ವರ್ಷಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿನ ಹಲವು ನಗರಗಳಲ್ಲಿ ಒಮ್ಯಾಕ್ಸ್ ತನ್ನ ಹೆಜ್ಜೆ ಗುರುತು ಸಾಧಿಸಿದೆ. ಇದು ಹಲವು ರಿಯಲ್ ಎಸ್ಟೇಟ್‌ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿದೆ. ಟೌನ್‌ಶಿಪ್‌ಗಳು, ಕಚೇರಿಗಳು, ಮಾಲ್‌ಗಳು ಮತ್ತು ಹೈ ಸ್ಟ್ರೀಟ್‌ ಪ್ರಾಜೆಕ್ಟ್‌ಗಳನ್ನೂ ಇದು ಮಾಡಿದೆ.

Best Mobiles in India

English summary
Omaxe partners with Jio-bp to set up EV charging and swapping infrastructure.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X