ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಹಿರಂಗ! ಲಾಂಚ್‌ ಯಾವಾಗ?

|

ಟೆಕ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳು ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ಒನ್‌ಪ್ಲಸ್‌ ಕಂಪೆನಿ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ. ಇದೀಗ ತನ್ನ ಹೊಸ ಒನ್‌ಪ್ಲಸ್‌ 10T 5G ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಆಗಸ್ಟ್ 3ರಂದು ನಡೆಯುವ ಈವೆಂಟ್‌ನಲ್ಲಿ ಲಾಂಚ್‌ ಆಗಲಿದೆ. ಆದರೆ ಲಾಂಚ್‌ ಈವೆಂಟ್‌ಗೂ ಮುನ್ನವೇ ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ ವಿವರ ಬಹಿರಂಗವಾಗಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿಯ ಬಹುನಿರೀಕ್ಷಿತ ಒನ್‌ಪ್ಲಸ್‌ 10T 5G ಫೋನ್‌ ಬಿಡುಗಡೆಗೂ ಮುನ್ನವೇ ಫೀಚರ್ಸ್‌ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್‌ ರೇಟ್‌ ಬೆಂಬಲದೊಂದಿಗೆ ಫ್ಲಾಟ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹೋಲ್‌-ಪಂಚ್‌ ಅನ್ನು ಹೊಂದಿದ್ದು, ಇಐಎಸ್ ಬೆಂಬಲದೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇದಲ್ಲದೆ 10 ಬಿಟ್ ಕಲರ್‌ ಬೆಂಬಲವನ್ನು ಹೊಂದಿದ್ದು, ಸ್ಕ್ರೀನ್‌ HDR10+ ಕಂಪ್ಲೈಂಟ್ ಆಗಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಈ ಫೋನ್‌ ಆಂಡ್ರಾಯ್ಡ್ 12 ಜೊತೆಗೆ OxygenOS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಜೇಡ್ ಗ್ರೀನ್ ಮತ್ತು ಮೂನ್‌ಸ್ಟೋನ್ ಬ್ಲ್ಯಾಕ್‌ ಕಲರ್‌ ಫಿನಿಶ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ಹೇಗಿರಲಿದೆ?

ಡಿಸ್‌ಪ್ಲೇ ಹೇಗಿರಲಿದೆ?

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ದೃಢಪಡಿಸಿದೆ. ಇದು 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 10-ಬಿಟ್ ಕಲರ್‌ ಸಪೋರ್ಟ್‌ ಅನ್ನು ಪಡೆಯಲಿದೆ. ಇದು HDR10+ ಕಂಪ್ಲೈಂಟ್ ಆಗಿದ್ದು, 120Hz ರಿಫ್ರೆಶ್‌ ರೇಟ್‌ ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಹೋಲ್‌-ಪಂಚ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿರಲಿದೆ. ಇದು ಆಂಡ್ರಾಯ್ಡ್ 12 ಜೊತೆಗೆ OxygenOS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಹೊಂದಿರಲಿದೆ. ಆದರೆ 8GB RAM ಮತ್ತು 128GB ಮತ್ತು 12GB RAM ಮತ್ತು 256GB ಇಂಟರ್‌ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳು ಮಾತ್ರ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ IMX 766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮರಾ ಮತ್ತು 120-ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಹೊಂದಿದೆ ಎಂದು ಹೇಳಲಾಗುತ್ತದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ 150W ವೇಗದ ಚಾರ್ಜಿಂಗ್‌ ಬೆಂಬಲಿಸುವ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸೆಲೆರೊಮೀಟರ್, ಕಂಪಾಸ್‌, ಗೈರೊಸ್ಕೋಪ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಆಗಸ್ಟ್‌ 3ರಂದು ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಅಂದಾಜು 49,999ರೂ. ಬೆಲೆಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಒನ್‌ಪ್ಲಸ್‌ 10T 5G ಫೋನ್‌ ಅಮೆಜಾನ್‌ ಮತ್ತು ಒನ್‌ಪ್ಲಸ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಆಗಸ್ಟ್ 6 ರಂದು ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ನಂತರ ಇದರ ಲಾಂಚ್‌ ಆಫರ್‌ ಏನಿರಲಿದೆ ಎನ್ನುವ ಅಧಿಕೃತ ಮಾಹಿತಿ ಬಹಿರಂಗವಾಗಲಿದೆ. ಕ್ರೆಡಿಟ್‌ ಕಾರ್ಡ್‌ ಬಳಸುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿ ಲಭ್ಯವಾಗುವ ಸಾಧ್ಯತೆ ಇದೆ.

ವಿಶೇಷತೆ ಏನು?

ವಿಶೇಷತೆ ಏನು?

ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನ್‌ ವಿಶೇಷ ಡಿಸೈನ್‌ ಅನ್ನು ಹೊಂದಿದೆ. ಇದರ ವಿನ್ಯಾಸ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿದೆ. ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿರುವ ಗ್ಯಾಸ್-ಬರ್ನರ್ ಕ್ಯಾಮೆರಾ ಐಲ್ಯಾಂಡ್ ವಿನ್ಯಾಸವನ್ನು ಒಳಗೊಂಡಿದೆ. ಆದರೂ ಕೂಡ ಈ ಸ್ಮಾರ್ಟ್‌ಫೋನಿನ ಕ್ಯಾಮೆರಾ ಮಾಡ್ಯೂಲ್‌ ಚೌಕಕಾರವಾಗಿದ್ದು, ದೊಡ್ಡದಾಗಿ ಕಾಣಲಿದೆ. ಇದಕ್ಕದೆ ಒನ್‌ಪ್ಲಸ್‌ 10T 5G ಸ್ಲಿಮ್ಮರ್ ಪ್ರೊಫೈಲ್‌ ಕಾರಣವಾಗಿರಬಹುದು ಎನ್ನಲಾಗಿದೆ.

ಆಲರ್ಟ್‌ ಸ್ಲೈಡರ್‌ಗಿಲ್ಲ ಅವಕಾಶ

ಆಲರ್ಟ್‌ ಸ್ಲೈಡರ್‌ಗಿಲ್ಲ ಅವಕಾಶ

ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ರೀತಿಯ ಆಲರ್ಟ್‌ ಸ್ಲೈಡರ್‌ ಅನ್ನು ನೀಡಲಾಗಿಲ್ಲ. ಸ್ಲಿಮ್‌ ಪ್ರೊಫೈಲ್‌ ಅನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಹ್ಯಾಸೆಲ್‌ಬ್ಲಾಡ್‌ ಕ್ಯಾಮೆರಾವನ್ನು ಕೈ ಬಿಡಲಾಗಿದೆ. ಅಲ್ಲದೆ ವೇಗದ ಚಾರ್ಜಿಂಗ್‌ ಒದಗಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ತೆಳುವಾದ ವಿನ್ಯಾಸದಲ್ಲಿ ಲಭ್ಯವಾಗುವ ಈ ಸ್ಮಾರ್ಟ್‌ಫೋನ್‌ ಹಲವು ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಮೊದಲ ಬಾರಿಗೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಳಸುತ್ತಿರುವ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ.

Best Mobiles in India

English summary
OnePlus 10T Specs, Design, Features Leaked Ahead Of Launch

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X