ಭಾರತೀಯರಿಗೆ ಗುಡ್‌ನ್ಯೂಸ್‌ ಕೊಟ್ಟ ಒನ್‌ಪ್ಲಸ್‌! ಏನಿದು "ಕ್ಲೌಡ್ 11"?

|

ಒನ್‌ಪ್ಲಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ಒನ್‌ಪ್ಲಸ್‌ ಕಂಪೆನಿ ಡಿವೈಸ್‌ಗಳು ಸಾಕಷ್ಟು ಸದ್ದು ಮಾಡುತ್ತವೆ. ಸದ್ಯ ಇದೀಗ ಒನ್‌ಪ್ಲಸ್‌ ಕಂಪೆನಿ ತನ್ನ ಒನ್‌ಪ್ಲಸ್‌ 11 5G ಬಿಡುಗಡೆಯ ತಯಾರಿಯಲ್ಲಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆಗಾಗಿ ಈಗಾಗಲೇ ಸಾಕಷ್ಟು ಸಂಖ್ಯೆಯ ಸ್ಮಾರ್ಟ್‌ಫೋನ್‌ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಮಯದಲ್ಲಿ ಒನ್‌ಪ್ಲಸ್‌ ಕಂಪೆನಿ ತನ್ನ ಒನ್‌ಪ್ಲಸ್‌ 11 5G ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಫೆಬ್ರವರಿ 7, 2023 ರಂದು ಲಾಂಚ್‌ ಆಗಲಿದೆ ಎಂದು ದೃಡಪಡಿಸಿದೆ. ಇನ್ನು ಈ ಈವೆಂಟ್‌ ಅನ್ನು "ಕ್ಲೌಡ್ 11" ಎಂಬ ಥೀಮ್‌ನಲ್ಲಿ ಮಾಡಲಾಗ್ತಿದೆ. ಅಂದರೆ ಒನ್‌ಪ್ಲಸ್‌ ಕಂಪೆನಿ ಇತ್ತೀಚಿಗೆ ಅಪ್‌ಗ್ರೇಟ್‌ ಮಾಡಿರುವ ಟೆಕ್ನಾಲಜಿ ಮತ್ತು ಕಾರ್ಯಕ್ಷಮತೆಯನ್ನು ಈ "ಕ್ಲೌಡ್ 11" ಪ್ರತಿನಿಧಿಸಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ 11 5G ಲಾಂಚ್‌ ಡೇಟ್‌ ಫಿಕ್ಸ್‌! ಏನಿದು

ಒನ್‌ಪ್ಲಸ್‌ 11 5G ಲಾಂಚ್‌ ಡೇಟ್‌ ಫಿಕ್ಸ್‌! ಏನಿದು "ಕ್ಲೌಡ್ 11"?

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಭಾರತಕ್ಕೆ ಬರೋದು ಇದೀಗ ಕನ್ಫರ್ಮ್‌ ಆಗಿದೆ. ಇಷ್ಟು ದಿನ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಒನ್‌ಪ್ಲಸ್‌ ಕಂಪೆನಿ "ಕ್ಲೌಡ್ 11" ಎಂಬ ಥೀಮ್‌ ಮೂಲಕ ಅಚ್ಚರಿಯನ್ನು ನೀಡಿದೆ. ಅಂದರೆ ತನ್ನ ಪ್ರಾಡಕ್ಟ್‌ಗಳಲ್ಲಿ ಅಪ್‌ಗ್ರೇಡ್‌ ಮಾಡಿರುವ ಟೆಕ್ನಾಲಜಿ ಮತ್ತು ಕಾರ್ಯದಕ್ಷತೆಯನ್ನು ಪ್ರತಿನಿಧಿಸುವ ಸಂಕೇತವೇ "ಕ್ಲೌಡ್ 11" ಎಂದು ಹೇಳಿಕೊಂಡಿದೆ. ಸದ್ಯ ಒನ್‌ಪ್ಲಸ್‌ ಕಂಪೆನಿ ಹೇಳಿರುವಂತೆ ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಫೆಬ್ರವರಿ 7, 2023 ರಂದು ಲಾಂಚ್‌ ಆಗಲಿದೆ.

ಒನ್‌ಪ್ಲಸ್‌ 11 5G ಫೀಚರ್ಸ್‌ ನಿರೀಕ್ಷೆ ಏನು?

ಒನ್‌ಪ್ಲಸ್‌ 11 5G ಫೀಚರ್ಸ್‌ ನಿರೀಕ್ಷೆ ಏನು?

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ 6.7-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಯಿದೆ. ಇದು 3216 x 1440 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ನಿರೀಕ್ಷೆಯಿದೆ. ಈ ಡಿಸ್‌ಪ್ಲೇ 120Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್‌ ಏನಿರಬಹುದು?

ಪ್ರೊಸೆಸರ್‌ ಏನಿರಬಹುದು?

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಹೊಸ ತಲೆಮಾರಿನ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 13, OxygenOS 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕ್ಯಾಮೆರಾ ಫೀಚರ್ಸ್‌?

ಕ್ಯಾಮೆರಾ ಫೀಚರ್ಸ್‌?

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 48ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಬ್ಯಾಟರಿ ಬ್ಯಾಕ್‌ ಅಪ್‌?

ಬ್ಯಾಟರಿ ಬ್ಯಾಕ್‌ ಅಪ್‌?

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 100W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂಬ ಸುದ್ದಿಯಿದೆ. ಅಲ್ಲದೆ ಇದು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ.

Best Mobiles in India

English summary
OnePlus 11 5G to launch on February 7, 2023 in india confirms company

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X