ಒನ್ ಪ್ಲಸ್ 5T ಬಿಡುಗಡೆ ಖಚಿತ: ಶೀಘ್ರವೇ ಲಾಂಚ್

Written By: Lekhaka

ಈಗಾಗಲೇ ಹಲವು ಮಾರುಕಟ್ಟೆಗಳಲ್ಲಿ ಇನ್ ಪ್ಲಸ್ ಟಾಪ್ ಎಂಡ್ ಫೋನ್ ಒನ್ ಪ್ಲಸ್ 5 ಔಟ್ ಆಫ್ ಸ್ಟಾಕ್ ಆಗಿದೆ. ಮೂಲಗಳ ಪ್ರಕಾರ ಭಾರತದಲ್ಲಿ ಮಾತ್ರವೇ ಈ ಫೋನ್ ಇನ್ನು ಖರೀದಿಗೆ ಲಭ್ಯವಿದೆ ಎನ್ನಲಾಗಿದೆ. ಅಮೆರಿಕಾದ ಮಾರುಕಟ್ಟೆಯಲ್ಲಿ ಈ ಫೋನ್ ದೊರೆಯುತ್ತಿಲ್ಲ ಎನ್ನಲಾಗಿದೆ.

ಒನ್ ಪ್ಲಸ್ 5T ಬಿಡುಗಡೆ ಖಚಿತ: ಶೀಘ್ರವೇ ಲಾಂಚ್

ಈ ಹಿನ್ನಲೆಯಲ್ಲಿ ಒನ್ ಪ್ಲಸ್ 5 ಮುಂದುವರೆದ ರೂಪ ಒನ್ ಪ್ಲಸ್ 5T ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ನವೆಂಬರ್ 5ಕ್ಕೆ ಇವೆಂಟ್ ವೊಂದನ್ನು ಒನ್ ಪ್ಲಸ್ ಆಯೋಜಿಸಿದ್ದು ಅಲ್ಲಿ ಈ ನೂತನ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒನ್ ಪ್ಲಸ್ 5 ಕುರಿತಂತೆ ಈಗಾಗಲೇ ಹಲವು ಮಾಹಿತಿಗಳು ಲಭ್ಯವಾಗಿದ್ದು, ಈ ಫೋನ್ ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಬ್ರೆಜಿಲ್ ಲೇಸ್ ಆಗಿರಲಿದೆ ಎನ್ನುವ ಮಾಹಿತಿಯೂ ದೊರೆತಿದೆ. ಈ ಫೋನಿನಲ್ಲಿ 6 ಇಂಚಿನ ಡಿಸ್ ಪ್ಲೇಯನ್ನು ಅಳಡಿಸಲಾಗಿದೆ.

USB ಡ್ರೈವ್ ಬಳಸಿ ವಿಂಡೋಸ್ ಪಿಸಿ ಲಾಕ್/ಅನ್ಲಾಕ್ ಮಾಡುವುದು ಹೇಗೆ?

ಸದ್ಯ ಮಾರುಕಟ್ಟೆಯ ಟ್ರೆಂಡ್ ಆಗಿರು 18:9 ಅನುಪಾತದ ಡಿಸ್ ಪ್ಲೇ ಇದಾಗಿರಲಿದೆ. ಅಲ್ಲದೇ QHD ಗುಣಮಟ್ಟದಾಗಿದೆ. ಈ ಫೋನಿನ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ.

ಆದರೆ ಈ ಪೋನಿನಲ್ಲಿರುವ ರಾಮ್ ಮೆಮೊರಿ ಮುಂತಾದ ವಿಷಯಗಳ ಬಗ್ಗೆ ಯಾವುದೇ ನಿಖರ ಮಾಹಿತಿಯೂ ದೊರೆತಿಲ್ಲ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಫೋನಿನ ಬಗ್ಗೆ ಸಂಫೂರ್ಣ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

Via

Read more about:
English summary
OnePlus has started sending out press invites for the event that will be held in China.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot