ಸಂಪೂರ್ಣವಾಗಿ ಮಾರಾಟವಾಗಿದೆ ಒನ್ಪ್ಲಸ್ 5T ಲಾಂಚ್ ಸಮಾರಂಭದ ಟಿಕೆಟ್ಗಳು!

By: Tejaswini P G

ಒನ್ಪ್ಲಸ್ ತನ್ನ ಹೊಸ ಫ್ಲ್ಯಾಗ್ಶಿಪ್ ಮೊಬೈಲ್ ಒಂದನ್ನು ನವಂಬರ್ 16ರಂದು ನ್ಯೂಯಾರ್ಕ್ ನಲ್ಲಿ ಲಾಂಚ್ ಮಾಡಲಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ನಿಖರವಾಗಿ ಹೇಳುವುದಾದರೆ ಈ ಸಮಾರಂಭ ಬ್ರೂಕ್ಲಿನ್ ನ ವಿಲನ್ ನಲ್ಲಿ ನಡೆಯಲಿದೆ. 307, ಕೆಂಟ್ ಎವೆನ್ಯೂ, ಬ್ರೂಕ್ಲಿನ್, ನ್ಯೂಯಾರ್ಕ್ 11249 ಈ ಸಮಾರಂಭ ನಡೆಯಲಿರುವ ಸ್ಥಳದ ವಿಳಾಸ.

ಸಂಪೂರ್ಣವಾಗಿ ಮಾರಾಟವಾಗಿದೆ ಒನ್ಪ್ಲಸ್ 5T ಲಾಂಚ್ ಸಮಾರಂಭದ ಟಿಕೆಟ್ಗಳು!

ಈ ಸಮಾರಂಭದಲ್ಲಿ ಭಾಗಿಯಾಗ ಬಯಸುವವರು $40(ಅಂದಾಜು ರೂ 2600) ಪಾವತಿಸಿ ಟಿಕೆಟ್ ಖರೀದಿಸಬೇಕಾಗಿದೆ. ಸ್ಮಾರ್ಟ್ಫೋನ್ ಒಂದರ ಲಾಂಚ್ ಸಮಾರಂಭಕ್ಕೆ ಇಷ್ಟೊಂದು ದುಬಾರಿ ಟಿಕೆಟ್ ಯಾಕೆ ಖರೀದಿಸಬೇಕೆಂದು ನೀವು ಯೋಚಿಸುತ್ತಿರಬಹುದು. ಆದರೆ ಅಚ್ಚರಿಯ ವಿಷಯವೆಂದರೆ ಈ ಸಮಾರಂಭದ ಟಿಕೆಟ್ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದೆಯಂತೆ! ಒನ್ಪ್ಲಸ್ ಈ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಈ ಸಮಾರಂಭದ ಟಿಕೆಟ್ಗಳು ಸಂಪೂರ್ಣವಾಗಿ ಮಾರಾಟವಾಗಿರುವುದು ಯುಎಸ್ ನಲ್ಲಿ ಒನ್ಪ್ಲಸ್ ಕಂಪೆನಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಒನ್ಪ್ಲಸ್ ಈ ಸಮಾರಂಭದ ಟಿಕೆಟ್ಗಳಿಗೆ ದುಬಾರಿ ಬೆಲೆ ನಿಗದಿಪಡಿಸಿರುವುದಕ್ಕೆ ಒಂದು ಕಾರಣವಿದೆಯಂತೆ. ಸಮಾರಂಭಕ್ಕೆ ಎಷ್ಟು ಮಂದಿ ಹಾಜರಾಗಲಿದ್ದಾರೆ ಎಂದು ನಿಖರವಾಗಿ ತಿಳಿಯುವ ಸಲುವಾಗಿ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆಯಂತೆ. ಈ ಮೂಲಕ ಸಂಪಾದಿಸಲಾದ ಮೊತ್ತವನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ಒನ್ ಪ್ಲಸ್ ತಿಳಿಸಿದೆ. ನೂತನ ತಾಂತ್ರಿಕ ಆವಿಷ್ಕಾರಗಳನ್ನು ನಡೆಸುವುದಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ ಎಂದು ಒನ್ಪ್ಲಸ್ ಹೇಳಿದೆ.

ಬಿಡುಗಡೆ ಸಮಾರಂಭದ ಕುರಿತು ಕೆಲವು ಮಾಹಿತಿಗಳು ಈ ಕೆಳಗಿನಂತಿದೆ

ಈ ಬಿಡುಗಡೆ ಸಮಾರಂಭ ಬೆಳಗ್ಗೆ 11 ಘಂಟೆಗೆ ಪ್ರಾರಂಭವಾಗಲಿದ್ದು ಮಧ್ಯಾಹ್ನ 2 ಘಂಟೆಗೆ ಮುಕ್ತಾಯವಾಗಲಿದೆ. ಟಿಕೆಟ್ ಖರೀದಿಸಿ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದು ಸ್ವ್ಯಾಗ್ ಬ್ಯಾಗ್ ದೊರೆಯಲಿದ್ದು , ಆ ಬ್ಯಾಗ್ನಲ್ಲಿ ಒಂದು ಟ್ರ್ಯಾವೆಲ್ ಬ್ಯಾಕ್ಪ್ಯಾಕ್, ಹೂಡೀ, ಬೇಸ್ ಬಾಲ್ ಕ್ಯಾಪ್ ಮತ್ತು ಇನ್ನಿತರ ವಿಶೇಷ ಉಡುಗೊರೆಗಳು ಇರಲಿದೆ. ಇನ್ನೊಂದು ವಿಶೇಷತೆಯೆಂದರೆ ಈ ಎಲ್ಲಾ ಉಡುಗೊರೆಗಳು ಒನ್ಪ್ಲಸ್ ನ ಲೋಗೋ ಹೊಂದಿರಲಿದೆ.

ಆಶ್ಚರ್ಯಪಡಬೇಡಿ..! ಕೇವಲ ರೂ. 15,490ಕ್ಕೆ 32 ಇಂಚಿನ ಸ್ಮಾರ್ಟ್‌ಟಿವಿ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ..!

ಟಿಕೆಟ್ ಹೊಂದಿರುವ ಪ್ರತಿಯೊಬ್ಬರಿಗೂ ಕುಳಿತು ಕೊಳ್ಳಲು ಜಾಗವನ್ನು ಕಾಯ್ದಿರಿಸಲಾಗುತ್ತದೆಯೆಲ್ಲದೆ, ವಿಶೇಷ ಖಾದ್ಯ ಮತ್ತು ಪಾನೀಯಗಳ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತದೆ. ಇದರೊಂದಿಗೆ ಒನ್ಪ್ಲಸ್ ನ ನೂತನ ಒನ್ಪ್ಲಸ್ 5T ಮೊಬೈಲ್ ನ ಅನುಭವವನ್ನೂ ಪಡೆಯಬಹುದು.

ಈ ಬಿಡುಗಡೆ ಸಮಾರಂಭದ ಕುರಿತು ನಿಮ್ಮ ಅಭಿಪ್ರಾಯವೇನು? ಹೊಸ ಸ್ಮಾರ್ಟ್ಫೋನ್ ಒಂದು ಅನಾವರಣಗೊಳ್ಳುವುದನ್ನು ನೋಡಲು ರೂ 2500 ಕೊಟ್ಟು ಟಿಕೆಟ್ ಖರೀದಿಸಲು ನೀವು ತಯಾರಿದ್ದೀರಾ? ಕಮೆಂಟ್ ವಿಭಾಗದಲ್ಲಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ.English summary
The funds generated by ticket sales of the OnePlus 5T launch event will go "toward the advancement of tech innovation."
Please Wait while comments are loading...
Opinion Poll

Social Counting