ಒನ್ ಪ್ಲಸ್ 5T ಲಾವಾ ರೆಡ್ ಆವೃತ್ತಿ ಬದಲಾದ ದಿನದಲ್ಲಿ ಬಿಡುಗಡೆ..!
ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಒನ್ ಪ್ಲಸ್ ಹೊಸದಾಗಿ ಲಾಂಚ್ ಮಾಡಿರುವ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ದಿನಕ್ಕೊಂದು ಹೊಸ ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊನ್ನೆ ತಾನೆ ಹೊಸದಾಗಿ ಒನ್ ಪ್ಲಸ್ 5T ಲಾವಾ ರೆಡ್ ಬಣ್ಣದ ಆವೃತ್ತಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿತ್ತು. ಸದ್ಯ ಈ ಫೋನ್ ಅವಧಿಗೂ ಮುನ್ನವೇ ಲಾಂಚ್ ಆಗಲಿದೆ ಎನ್ನಲಾಗಿತ್ತು.

ಜನವರಿ 26ರಂದು ಒನ್ ಪ್ಲಸ್ 5T ಲಾವಾ ರೆಡ್ ಬಣ್ಣದ ಆವೃತ್ತಿ ಲಾಂಚ್ ಆಗಲಿದೆ ಎನ್ನಲಾಗಿತ್ತು. ಇದೀಗ ಹೊಸ ಸುದ್ದಿಯೊಂದರ ಪ್ರಕಾರ. ಈ ಫೋನ್ ಜನವರಿ 23 ರಂದೆ ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ. ಮೊನ್ನೆತಾನೆ ಒನ್ ಪ್ಲಸ್ 5T ಸ್ಟಾರ್ ವಾರ್ ಆವೃತ್ತಿಯೂ ಬಿಡುಗಡೆಯಾಗಿತ್ತು.
ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಟಾರ್ ವಾರ್ ಆವೃತ್ತಿ ಮತ್ತು ಸಾಂಡ್ ಸ್ಟೋನ್ ವೈಟ್ ಆವೃತ್ತಿಯಲ್ಲಿ ದೊರೆಯುತ್ತಿದ್ದು, ಈಗ ಹೊಸದಾಗಿ ಒನ್ ಪ್ಲಸ್ 5T ಲಾವಾ ರೆಡ್ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಹೊಸ ಹೊಸ ಆವೃತ್ತಿಯ ಫೋನ್ ಗಳನ್ನು ಬಿಡುಗಡೆ ಮಾಡಿ ಜನರನ್ನು ಆಕರ್ಷಿಸಲು ಮುಂದಾಗಿದೆ.
ಒನ್ ಪ್ಲಸ್ 5T ಲಾವಾ ರೆಡ್ ಸ್ಮಾರ್ಟ್ ಫೋನ್ 8GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. 6 ಇಂಚಿನ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, FHD ಪ್ಲಸ್ ಗುಣಮಟ್ಟವನ್ನು ಇದು ಹೊಂದಿದೆ ಎನ್ನಲಾಗಿದೆ. 18:9 ಅನುಪಾತದಾಗಿರಲಿದೆ.
ಈ ಹೊಸ ಸ್ಮಾರ್ಟ್ ಫೋನ್ ನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸೆರ್, 3300mAh ಬ್ಯಾಟರಿ, ಡ್ಯಾಷ್ ಚಾರ್ಜಿಂಗ್ ಕಾಣಬಹುದಾಗಿದ್ದು, ಆಂಡ್ರಾಯ್ಡ್ ಒರಿಯಾ ದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಹಿಂಭಾಗದಲ್ಲಿ 16MP + 20MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಇದು ರೂ, 37,999ಕ್ಕೆ ಮಾರಾಟವಾಗಲಿದೆ.


Click it and Unblock the Notifications








