ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಹೊಸ ಆಫರ್..!

ಜಾಗತಿಕ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸದ್ದು ಮಾಡುತ್ತಿದ್ದು, ಹೊಸದಾಗಿ ಲಾಂಚ್ ಆಗಿರುವ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಈಗಾಗಲೇ ಹಿಟ್ ಆಗಿದ್ದು, ಈ ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಒನ್ ಪ್ಲಸ್ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ. ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಮೇಲೆ ಎಕ್ಸ್ ಚೇಂಜ್ ಆಫರ್ ಅನ್ನು ನೀಡಲು ಮುಂದಾಗಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಕೊಳ್ಳಲು ಬಯಸುವ ಬಳಕೆದಾರರು ತನ್ನ ಬಳಿ ಇರುವಂತಹ ಹಳೇಯ ಸ್ಮಾರ್ಟ್ ಫೋನ್ ಅನ್ನು ನೀಡಿ ಹೊಸ ಫೋನ್ ಕೊಳ್ಳಬಹುದಾಗಿದೆ. ಈ ಎಕ್ಸ್ ಚೇಂಚ್ ಆಫರ್ ಕೇವಲ ಕೆಲವೇ ಸಿಟಿಗಳಲ್ಲಿ ಮತ್ತು ಆಯ್ದ ಫೋನ್ ಗಳ ಮೇಲೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಬಗ್ಗೆ ಮಾಹಿತಿಯೂ ಮುಂದಿನಂತಿದೆ.

ಆಫರ್:
ಆಪಲ್ ಐಫೋನ್ 7 32GB ಫೋನ್ ನೀಡಿ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಖರೀದಿ ಮಾಡುತ್ತೇನೆ ಎನ್ನುವವರಿಗಾಗಿ ರೂ.27,300 ವರೆಗೂ ಎಕ್ಸ್ ಚೇಂಜ್ ಪಡಯಬಹುದಾಗಿದೆ. ಇದಲ್ಲದೇ ಒನ್ ಪ್ಲಸ್ 5 ಸ್ಮಾರ್ಟ್ ಪೋನ್ ನೊಂದಿಗೆ ಎಕ್ಸ್ ಚೇಂಜ್ ಮಾಡಿಕೊಳ್ಳುವವರಿಗೆ ರೂ. 20,700 ರಿಂದ ರೂ.23,100ರ ವರೆಗೂ ಕಡಿತವನ್ನು ಪಡೆಯಬಹುದಾಗಿದೆ.

ಆನ್ ಲೈನಿನಲ್ಲಿ ಮಾತ್ರವೇ:
ಈ ಹೊಸ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಅನ್ನು ಒನ್ ಪ್ಲಸ್ ಸ್ಟೋರ್ .ಇನ್ ನಲ್ಲಿ ಬುಕ್ ಮಾಡಿದವರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಬೇರೆ ಯಾವುದೇ ಸ್ಥಳಗಳಲ್ಲಿ ಬುಕ್ ಮಾಡಿದರೆ ಇಲ್ಲವೇ ಕೊಂಡು ಕೊಂಡರೆ ಈ ಆಫರ್ ಲಭ್ಯವಿಲ್ಲ ಎನ್ನಲಾಗಿದೆ.

ಯಾವ ಸ್ಮಾರ್ಟ್ ಫೋನ್ ಗಳು:
ಆಪಲ್, ಅಸುಸ್, ಬ್ಲಾಕ್ ಬೇರಿ, ಜಿಯೋನಿ, ಗೂಗಲ್ , ಹೆಚ್ ಟಿಸಿ, ಹುವಾವೆ, ಇನ್ ಟೆಕ್ಸ್, ಕಾರ್ಬನ್, ಲಿನೋವೊ, ಲಿಕೋ, ಎಲ್ ಜಿ, ಶಿಯೋಮಿ, ಮೈಕ್ರೊ ಮಾಕ್ಸ್, ಮೊಟೊರೊಲಾ, ಪ್ಯಾನಾಸೋನಿಕ್, ಸೋನಿ, ಸ್ಯಾಮ್ ಸಂಗ್, ವಿವೋ, ಎಕ್ಸಲೋ ಮತ್ತು ಒಪ್ಪೋ ಸ್ಮಾರ್ಟ್ ಫೋನ್ ಗಳನ್ನು ನೀಡಿ ಗ್ರಾಹಕರು ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಖರೀದಿ ಮಾಡಬಹುದಾಗಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್:
ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 6GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.32,999ಕ್ಕೆ ಹಾಗೂ 8GB RAM ಮತ್ತು 128GB ಆವೃತ್ತಿಯ ಸ್ಮಾರ್ಟ್ ಫೋನ್ ರೂ. 37,999ಕ್ಕೆ ಲಭ್ಯವಿದೆ. ಗ್ರಾಹಕರು ತಮ್ಮ ಆಯ್ಕೆಯ ಫೋನ್ ಅನ್ನು ಖರೀದಿಸಬಹುದಾಗಿದೆ.


Click it and Unblock the Notifications








