ಒನ್ಪ್ಲಸ್ 6 ಬರಲಿದೆ ಹೊಸ ಗೆಸ್ಚರ್ ಕಂಟ್ರೋಲ್ಗಳೊಂದಿಗೆ; ಎಲರ್ಟ್ ಸ್ಲೈಡರ್ ಗೆ ಲಭಿಸಿದೆ ಹೊಸ ಫಂಕ್ಷನ್

By Tejaswini P G

  ಈಗಾಗಲೇ ಒನ್ಪ್ಲಸ್6 ಕುರಿತು ಹಲವು ವದಂತಿಗಳು ,ಊಹಾಪೋಹಗಳು ಹರಿದಾಡುತ್ತಿವೆ. ಒನ್ಪ್ಲಸ್ ಸಂಸ್ಥೆಯೂ ಕೂಡ ಈ ನೂತನ ಫ್ಲ್ಯಾಗ್ಶಿಪ್ ಮೊಬೈಲ್ ನ ಫೀಚರ್ಗಳನ್ನು ಬಹಿರಂಗಪಡಿಸುವ ಹಲವು ಟೀಸರ್ಗಳನ್ನು ಪೋಸ್ಟ್ ಮಾಡುತ್ತಲೇ ಇದೆ. ಒನ್ಪ್ಲಸ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಟೀಸರ್ ಒಂದು ಒನ್ಪ್ಲಸ್ 6 ಆಧುನಿಕ ಗೆಸ್ಚರ್ ಕಂಟ್ರೋಲ್ಗಳನ್ನು ಹೊಂದಿರುವ ಸಾಧ್ಯತೆಯನ್ನು ಬಹಿರಂಗಡಿಸಿದೆ. ಒನ್ಪ್ಲಸ್ 5Tಗೆ ಬಿಡುಗಡೆಮಾಡಲಾಗಿದ್ದ ಆಂಡ್ರಾಯ್ಡ್ ಓರಿಯೋ ಓಪನ್ ಬೀಟಾ 3 ಅಪ್ಡೇಟ್ ನಲ್ಲಿ ಈ ಗೆಸ್ಚರ್ ಕಂಟ್ರೋಲ್ಗಳನ್ನು ಮೊದಲಿಗೆ ಪ್ರಸ್ತುತಪಡಿಸಲಾಗಿತ್ತು ಮತ್ತು ಮುಂದುವರೆದ ಗೆಸ್ಚರ್ ಕಂಟ್ರೋಲ್ಗಳನ್ನು ಬರಲಿರುವ ಒನ್ಪ್ಲಸ್ 6 ನಲ್ಲಿ ನಾವು ಕಾಣಬಹುದಾಗಿದೆ.

  ಒನ್ಪ್ಲಸ್ 6 ಬರಲಿದೆ ಹೊಸ ಗೆಸ್ಚರ್ ಕಂಟ್ರೋಲ್ಗಳೊಂದಿಗೆ

  ಒನ್ಪ್ಲಸ್ ಟಿಟ್ಟರ್ ನಲ್ಲಿ ಹಂಚಿಕೊಂಡ ಟೀಸರ್ ವೀಡಿಯೋ ದಲ್ಲಿ ಹೀಗೆ ಹೇಳಲಾಗಿದೆ " ಸ್ಪೀಡ್ ಅಪ್ ಯುವರ್ ಎಕ್ಸ್ಪೀರಿಯನ್ಸ್ ವಿದ್ ಗೆಸ್ಚರ್ಸ್" . ಈ ವೀಡಿಯೋ ಹಲವು ಸ್ವೈಪ್ ಆಕ್ಷನ್ ಗಳತ್ತ ಬೊಟ್ಟು ಮಾಡಿದೆ. ಒನ್ಪ್ಲಸ್ ನಲ್ಲಿ ಗೆಸ್ಚರ್ ಕಂಟ್ರೋಲ್ ಗಳು ಇರಲಿವೆ ಎಂದು ಒನ್ಪ್ಲಸ್ ಸಂಸ್ಥೆ ಸೂಚನೆ ನೀಡಿದ್ದರೂ ಯಾವ ರೀತಿಯಾದ ಗೆಸ್ಚರ್ಗಳು ಇರಲಿವೆ ಎಂಬುದರ ಕುರಿತು ಖಚಿತ ಮಾಹಿತಿ ಲಭ್ಯವಿಲ್ಲ.

  ಒನ್ಪ್ಲಸ್ 5T ಗೆ ಲಭಿಸಿದ ಈ ಹಿಂದಿನ ಓಪನ್ ಬೀಟಾ ಅಪ್ಡೇಟ್ ಗಳ ಆಧಾರದ ಮೇಲೆ ಒನ್ಪ್ಲಸ್ 6 ನಲ್ಲಿ ಐಫೋನ್ X ನಂತೆ ಕಡಿಮೆಯೆಂದರೆ 3 ವಿಭಿನ್ನ ಗೆಸ್ಚರ್ಗಳದಾರೂ ಇರಬಹುದೆಂಬ ಅನಿಸಿಕೆ ನಮ್ಮದು. ಹೋಮ್ ಗೆ ಹಿಂದಿರುಗಲು ಗೆಸ್ಚರ್, ಸರಳ ಸ್ವೈಪ್ ಮೂಲಕ ಹಿಂದಿನ ಪುಟಕ್ಕೆ ತೆರಳಲು, ಆಪ್ ಓವರ್ವ್ಯೂ ಅನ್ನು ನೋಡಲು ಗೆಸ್ಚರ್ ಹೀಗೆ ಹಲವು ಗೆಸ್ಚರ್ಗಳನ್ನು ಬಳಕೆದಾರರು ಬಳಸಬಹುದಾಗಿದೆ.

  ಅಷ್ಟೇ ಅಲ್ಲದೆ, ಈ ನೂತನ ಸಂವತ್ಸರದಲ್ಲಿ ಒನ್ಪ್ಲಸ್ ಸಂಸ್ಥೆಯು ನೂತನ ಫ್ಲ್ಯಾಗ್ಶಿಪ್ ಮೊಬೈಲ್ ಮೂಲಕ ಹೊಸತನವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ನೂತನ ಗೆಸ್ಚರ್ ಸಪೋರ್ಟ್ ಅನ್ನು ನೀಡುವುದರ ಜೊತೆಗೆ ಒನ್ಪ್ಲಸ್ ಈಗಾಗಲೇ ಇರುವ ಕೆಲ ಫಂಕ್ಷನ್ ಗಳನ್ನು ಬದಲಾಯಿಸುವ ಪ್ರಯತ್ನದಲ್ಲಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ ನಲ್ಲಿ ಎಲರ್ಟ್ ಸ್ಲೈಡರ್ ಗೆ ಹೊಸ ಫಂಕ್ಷನ್ಯಾಲಿಟಿ ಲಭಿಸಲಿದೆ ಎಂದು ಒನ್ಪ್ಲಸ್ ಬಿಡುಗಡೆಮಾಡಿದ ಇತ್ತೀಚಿನ ಟೀಸರ್ ಮೂಲಕ ತಿಳಿಯಬಹುದಾಗಿದೆ.

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ಒನ್ಪ್ಲಸ್ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ "ಸ್ಲೈಡ್ ಟು ಫೋಕಸ್ ವಿದ್ ಎಲರ್ಟ್ ಸ್ಲೈಡರ್" ಎಂಬ ಸಂದೇಶದೊಂದಿಗೆ ಮತ್ತೊಂದು ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಎಲರ್ಟ್ ಸ್ಲೈಡರ್ ಅನ್ನು ಕ್ಯಾಮೆರಾ ದ ಫೋಕಸ್ ಅನ್ನು ಸರಿಹೊಂದಿಸಲು ಬಳಸಬಹುದು ಎಂದು ಆ ಟೀಸರ್ ಮೂಲಕ ತಿಳಿದುಬಂದಿದೆ. ಬಟನ್ ಅನ್ನು ಸ್ಲೈಡ್ ಮಾಡುವ ಮೂಲಕ ಬಳಕೆದಾರರು ಫೋಕಸ್ ಅನ್ನು ತಮಗೆ ಬೇಕಾದಂತೆ ಸರಿಹೊಂದಿಸಬಹುದು. ಸಧ್ಯಕ್ಕೆ ಎಲರ್ಟ್ ಸ್ಲೈಡರ್ ಮೂಲಕ ಬಳಕೆದಾರರು ರಿಂಗ್, ಡು ನಾಟ್ ಡಿಸ್ಟರ್ಬ್ ಮತ್ತು ಸೈಲೆಂಟ್ ಮೋಡ್ ಮೊದಲಾದ ಆಡಿಯೋ ಪ್ರೊಫೈಲ್ಗಳ ಮಧ್ಯೆ ಸ್ವಿಚ್ ಮಾಡಬಹುದಾಗಿದೆ.

  ಈ ಹೊಸ ಫೀಚರ್ ಮೂಲಕ ಒನ್ಪ್ಲಸ್ 6 ಬಳಕೆದಾರರು ಕ್ಯಾಮೆರಾ ದ ಫೋಕಸ್ ಎಡ್ಜಸ್ಟ್ ಮಾಡಲು ಮೊಬೈಲ್ ನ ಸ್ಕ್ರೀನ್ ಅನ್ನು ಮುಟ್ಟಬೇಕಾದ ಅಗತ್ಯವೇ ಇಲ್ಲ. ಅಲ್ಲದೆ ಫೋಟೋ ಸೆರೆಹಿಡಿಯಲು ಕೂಡ ಬಳಕೆದಾರರು ಸ್ಕ್ರೀನ್ ಮುಟ್ಟಬೇಕಾಗಿಲ್ಲ. ಈ ಹಿಂದಿನ ಮಾಡೆಲ್ ಗಳಲ್ಲಿರುವಂತೆ ಪವರ್ ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಡೀಫಾಲ್ಟ್ ಕ್ಯಾಮೆರಾ ಆಪ್ ತೆರೆದುಕೊಳ್ಳುತ್ತದೆ ಮತ್ತು ವಾಲ್ಯೂಮ್ ರಾಕರ್ ಬಟನ್ ಕ್ಯಾಮೆರಾ ಶಟರ್ ಬಟನ್ ನ ಕಾರ್ಯನಿರ್ವಹಿಸಬಲ್ಲದು.

  Read more about:
  English summary
  OnePlus 6 teasers posted by the company on Twitter suggest that the smartphone will feature gesture controls as the iPhone X and the Alert Slider will get a new functionality to control the focus by sliding the button without touching the display. These new features show that OnePlus is looking for major changes this year.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more