Subscribe to Gizbot

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆಯ ಕುರಿತು ಮಾಹಿತಿ ಲೀಕ್‌..!

Posted By: Precilla Dias

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಭಾರೀ ಹವಾ ಎಬ್ಬಿಸಿದ್ದು, ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ. ಒನ್‌ಪ್ಲಸ್ ಬಿಡುಗಡೆ ಮಾಡುವ ಪ್ರತಿ ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆಯ ಕುರಿತು ಮಾಹಿತಿ ಲೀಕ್‌..!

ಇದೇ ಮಾದರಿಯಲ್ಲಿ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ ಫೋನ್ ಕುರಿತ ಮಾಹಿತಿಯೊಂದು ಲೀಕ್ ಆಗಿದೆ. ಒನ್‌ಪ್ಲಸ್ 6 ಭಾರತದಲ್ಲಿ ಮಾರಾಟವಾಗುವ ಬೆಲೆಯ ಕುರಿತು ಮಾಹಿತಿಯೂ ಲೀಕ್ ಆಗಿದ್ದು, ರೂ33999ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಶೀಘ್ರವೇ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ತನ್ನ ವಿಶೇಷತೆಗಳಿಂದಲೇ ಸದ್ದು ಮಾಡುತ್ತಿರುವ ಒನ್‌ಪ್ಲಸ್ 6 ಬೆಲೆ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, 6GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿಯ ಸ್ಮಾರ್ಟ್‌ಫೋನ್ ರೂ.33,999ರಿಂದ ರೂ.36999ರ ಒಳಗೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ರೂ38,999ರಿಂದ 43,999ರ ಒಳಗೆ ದೊರೆಯಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಇದೇ ಮಾದರಿಯಲ್ಲಿ ಟಾಪ್ ಎಂಡ್ ಆವೃತ್ತಿಯೂ 8GB RAM ಮತ್ತು 256GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದ್ದು, ರೂ.44,999ರಿಂದ 48,999ರ ಒಳಗೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಲಾಂಚ್ ಆಗಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನ ಬರ್ಗ್ಯಾಂಡಿ ರೆಡ್ ಆವೃತ್ತಿ

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಕಡಿಮೆ ಇರಲಿದೆ. ಇದಲ್ಲದೇ ಈ ಬಾರಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನೊಂದಿಗೆ ವೈರ್ ಲೈಸ್ ಹೆಡ್ ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಇದು ಫೋನ್ ಏರ್ ಪೋಡ್ ಗೆ ಸೆಡ್ಡು ಹೊಡೆಯಲಿದ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ.

English summary
OnePlus 6 is said to be launched in India in three variants with 6GB/8GB RAM and 64GB, 128GB and 256GB storage options. These variants are said to be priced from Rs. 33,999 and go up to Rs. 48,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot