Home
ಸುದ್ದಿಜಾಲ

ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಟಾಪ್ ಎಂಡ್ ಒನ್ ಪ್ಲಸ್ 6 ಸ್ಮಾರ್ಟ್ ಫೋನ್...!

By Precilla Dias

ಮಾರುಕಟ್ಟೆಗೆ ಶೀಘ್ರವೇ ಫಾಗ್ ಶಿಪ್ ಕಿಲ್ಲರ್ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ಒನ್ ಪ್ಲಸ್ ಸಿದ್ಧತೆಯನ್ನು ನಡೆಸಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಔಟ್ ಆಫ್ ಸ್ಟಾಕ್ ಆಗಿರುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಶೀಘ್ರವೇ ಒನ್ ಪ್ಲಸ್ 6 ಕಾಲಿಡಲಿದೆ ಎನ್ನಲಾಗಿದೆ. ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ವಿಷೇಷತೆ ಕುರಿತಂತಹ ಮಾಹಿತಿಯ ಚಾರ್ಟ್ ವೊಂದು ಲೀಕ್ ಆಗಿದೆ.

ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಟಾಪ್ ಎಂಡ್ ಒನ್ ಪ್ಲಸ್ 6 ಸ್ಮಾರ್ಟ್ ಫೋನ್.!


ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ ಪೋನ್ ಕುರಿತಂತೆ ನೀರಿಕ್ಷೆಗಳು ಹೆಚ್ಚಾಗಿದ್ದು, ಇದನ್ನು ತಲುಪುವ ಸಲುವಾಗಿ ಒನ್ ಪ್ಲಸ್ ಶ್ರಮವಹಿಸುತ್ತಿದೆ. ಸದ್ಯ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಆಂಡ್ರಾಯ್ಡ್ ಓಎಸ್ ಇದು ಎನ್ನಲಾಗಿದೆ.

ಒನ್ ಪ್ಲಸ್ 6 ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದು 2.7GHz ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, 20 MP + 16 MP ಕ್ಯಾಮೆರಾ ಇದಾಗಿದೆ. ಇನ್ನು ಮುಂಭಾಗದಲ್ಲಿ 20MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಸೆಲ್ಫಿಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ.

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, 3450mAh ಬ್ಯಾಟರಿಯೊಂದಿಗೆ ಲಭ್ಯವಿದೆ ಎನ್ನುವ ಮಾಹಿತಿಯೂ ಸದ್ಯ ಲೀಕ್ ಆಗಿರುವ ಮಾಹಿತಿಯಿಂದ ತಿಳಿದು ಬಂದಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗೆ ಭರ್ಜರಿ ಸ್ಪರ್ಧೆಯನ್ನು ಒನ್ ಪ್ಲಸ್ 6 ನೀಡಲಿದೆ.

Bike-Car ಜಾತಕ ಹೇಳುವ ಆಪ್..!

ಮೂಲಗಳ ಪ್ರಕಾರ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕೊಂಚೆ ಏರಿಕೆಯನ್ನು ಮಾಡಲಿದೆ ಎನ್ನಲಾಗಿದ್ದು, ರೂ.48000ದ ಆಸುಪಾಸಿನಲ್ಲಿ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಸ್ಮಾರ್ಟ್ ಫೋನ್ ಗಳಿಗೆ ಒನ್ ಪ್ಲಸ್ 6 ಸೆಡ್ಡು ಹೊಡೆಯುವ ಲಕ್ಷಣಗಳು ಕಾಣಿಸುತ್ತಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಸಹ ಹವಾ ಎಬ್ಬಿಸಲಿದೆ.

Best Mobiles in India

English summary
OnePlus is working on a flagship killer smartphone, the OnePlus 6. This upcoming smartphone is expected to be launched in the coming months. A recent report has revealed the specs sheet of the smartphone gives an idea of the key specifications of it. The specs sheet includes a 6.28-inch camera with AI, 4GB RAM, 64GB storage space, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+