ಡಿಸೆಂಬರ್ 12 ಕ್ಕೆ ಬಿಡುಗಡೆಗೊಳ್ಳಲಿದೆ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್

|

ಒನ್ ಪ್ಲಸ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನಿನ ಮತ್ತೊಂದು ವರ್ಷನ್ ನ್ನು ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ರೂಪದಲ್ಲಿ ಬಿಡುಗಡೆಗೊಳಿಸಲು ತಯಾರಾಗಿದೆ. ಇದೇ ಡಿಸೆಂಬರ್ 12 ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ. ಅಂದರೆ 41,999 ರುಪಾಯಿಗೆ ಇತ್ತೀಚೆಗೆ ಒನ್ ಪ್ಲಸ್ 6ಟಿ ಯ ಥಂಡರ್ ಪರ್ಪಲ್ ಎಡಿಷನ್ ನ್ನು ಬಿಡುಗಡೆಗೊಳಿಸಿದ ನಂತರದ ಕೆಲವೇ ದಿನಗಳಲ್ಲಿ ಇದು ಬರಲಿದೆ. ಇದರ ಬೆಲೆಯು ಒನ್ ಪ್ಲಸ್ 6 ಟಿ ಗೆ 8ಜಿಬಿ ಮೆಮೊರಿ ವೇರಿಯಂಟ್ ಗೆ ಇರುವ ಬೆಲೆಯೇ ಇರಲಿದೆ ಎಂದು ಹೇಳಲಾಗಿದೆ.

ಡಿಸೆಂಬರ್ 12 ಕ್ಕೆ ಬಿಡುಗಡೆಗೊಳ್ಳಲಿದೆ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್

ಮುಂಬರುವ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಬಗ್ಗೆ ಹೇಳುವುದಾದರೆ ಇದನ್ನು ಸೆಲ್ಯೂಟ್ ಟು ಸ್ಪೀಡ್ ಫಾರ್ಮುಲಾ 1 ಹಿಸ್ಟರಿಯಲ್ಲಿ ಮಾರ್ಕೆಟಿಂಗ್ ಮಾಡಲು ಕಂಪೆನಿ ಚಿಂತನೆ ನಡೆಸಿದೆ. ಅಂದರೆ ಇದು ಕೇವಲ ಟಾಪ್ ಎಂಡ್ ನ ಅಂದರೆ 8ಜಿಬಿ ಮೆಮೊರಿ ವೇರಿಯಂಟ್ ನ ವರ್ಷನ್ ನಲ್ಲಿ ಮಾತ್ರವೇ ಬಿಡುಗಡೆಗೊಳ್ಳಲಿದೆ. ಒನ್ ಪ್ಲಸ್ ಸಂಸ್ಥೆ ಮೆಕ್ಲಾರೆನ್ ಜೊತೆಗೆ ಈ ಫೋನಿಗಾಗಿ ಸಹಭಾಗಿತ್ವ ಹೊಂದಿರುವುದರಿಂದಾಗಿ ಈ ಡಿವೈಸ್ ನ ಬೆಲೆ ಖಂಡಿತವಾಗಲೂ ಅಧಿಕವಾಗಿರಲಿದೆ.

ಕಳೆದ ವರ್ಷ ಒನ್ ಪ್ಲಸ್ 20 ನೇ ವಾರ್ಷಿಕೋತ್ಸವ ಎಡಿಷನ್ ಒನ್ ಪ್ಲಸ್ 3ಟಿ ಕೊಲೆಟ್ಟಿ ಎಡಿಷನ್ ನ್ನು ತಯಾರಿಸುವುದಕ್ಕಾಗಿ ಪ್ಯಾರಿಸ್ ನ ರೀಟೈಲರ್ ಕೊಲೆಟ್ಟಿ ಜೊತೆಗೆ ಸಹಭಾಗಿತ್ವವನ್ನು ಹೊಂದಿತ್ತು. ಅಷ್ಟೇ ಅಲ್ಲ ಒನ್ ಪ್ಲಸ್ 5ಜೆಸಿಸಿ+ಲಿಮಿಟೆಡ್ ಎಡಿಷನ್ ನ್ನು ತಯಾರಿಸುವುದಕ್ಕಾಗಿ ಕಂಪೆನಿಯು ಜೀನ್-ಚಾರ್ಲ್ಸ್ ಡಿ ಕ್ಯಾಸ್ಟೆಲ್ಬಜಾಕ್ ಜೊತೆಗೆ ಕಾರ್ಯ ನಿರ್ವಹಿಸಿತು.

ಎಪ್ರಿಲ್ ನಲ್ಲಿ ಒನ್ ಪ್ಲಸ್ ಮಾರ್ವೆಲ್ ಸ್ಟುಡಿಯೋಸ್ ಜೊತೆಗೆ ಕೈಜೋಡಿಸಿರುವ ಬಗ್ಗೆ ತಿಳಿಸಿದ್ದು ಒನ್ ಪ್ಲಸ್ 6 ಮಾರ್ವೆಲ್ ಆವೆಂಜರ್ಸ್ ಲಿಮಿಟೆಡ್ ಎಡಿಷನ್ ನ್ನು ಬಿಡುಗಡೆಗೊಳಿಸಿತ್ತು. ಕಳೆದ ವರ್ಷ ಒನ್ ಪ್ಲಸ್ ಸಂಸ್ಥೆ ಭಾರತದಲ್ಲಿ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ಒನ್ ಪ್ಲಸ್ 5ಟಿ ಸ್ಟಾರ್ ವಾರ್ ಲಿಮಿಟೆಡ್ ಎಡಿಷನ್ ನ್ನು ಬಿಡುಗಡೆಗೊಳಿಸಿತ್ತು.

ಹೊಸ ಒನ್ ಪ್ಲಸ್ ಥಂಡರ್ ಪರ್ಪಲ್ ಎಡಿಷನ್ ನ್ನು ಗಣನೆಗೆ ತೆಗೆದುಕೊಂಡರೆ, ಈ ಸ್ಮಾರ್ಟ್ ಫೋನ್ 8GB RAM ಮತ್ತು 128 GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಒನ್ ಪ್ಲಸ್ 6ಟಿ ಮಿಡ್ ನೈಟ್ ಬ್ಲಾಕ್ ಮತ್ತು ಮಿರರ್ ಬ್ಲಾಕ್ ಹೊಂದಿರುವ 41,999 ರುಪಾಯಿ ಬೆಲೆಯನ್ನೇ ಇದು ಕೂಡ ಹೊಂದಿದೆ.

ಒನ್ ಪ್ಲಸ್ 6ಟಿ 6.41 ಇಂಚಿನ ಆಪ್ಟಿಕ್ AMOLED ಡಿಸ್ಪ್ಲೇಯಲ್ಲಿ ಸ್ಕ್ರೀನ್ ಅನ್ ಲಾಕ್ ಸಿಸ್ಟಮ್ ಹೊಂದಿರುವ ಕಂಪನಿಯ ನೂತನ ಫ್ಲಾಗ್ ಶಿಪ್ ಫೋನ್ ಇದಾಗಿದೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಇದು ಹೊಂದಿದೆ.

Best Mobiles in India

Read more about:
English summary
OnePlus 6T McLaren edition to launch on December 12

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X