ಭಾರತದಲ್ಲಿ ತನ್ನ 1000 ದಿನಗಳನ್ನು ಪೂರ್ಣಗೊಳಿಸಿರುವುದಾಗಿ ಒನ್‌ಪ್ಲಸ್ ಇಂದು ಘೋಷಿಸಿದೆ. ತನ್ನ ಬಳಕೆದಾರರೊಂದಿಗೆ ಈ ಸಂತಸವನ್ನು ಹಂಚಿಕೊಳ್ಳುವ ಉದ್ದೇಶದಿಂದಾಗಿ ಒನ್ ಪ್ಲಸ್ ಇದೀಗ ವಿಶೇಷ ಪ್ರಮೋಶನ್ ಈವೆಂಟ್ ಒಂದನ್ನು ಆರಂಭಿಸಿದ್ದು, ದೇಶದಲ್ಲಿ 1000 ದಿನಗಳು ಎಂಬುದಾಗಿ ಘೋಷಿಸಿಕೊಂಡಿದೆ.

'ಒನ್‌ಪ್ಲಸ್ 1000 ದಿನಗಳು' ಈವೆಂಟ್‌ಗೆ ತಕ್ಕಂತೆ ಕಂಪೆನಿಯು ಫ್ಲ್ಯಾಗ್‌ಶಿಪ್ ಡಿವೈಸ್ ಆದ ಒನ್ ಪ್ಲಸ್ 3 ಟಿಯನ್ನು ವಿಶೇಷ ಬೆಲೆ ರೂ 25,999 ಕ್ಕೆ ನೀಡಲಿದ್ದು ಮೊದಲು ಇದರ ಬೆಲೆ ರೂ 29,999 ಆಗಿತ್ತು. ಸಪ್ಟೆಂಬರ್ 5 ರಿಂದ ಆರಂಭವಾಗಿ ಸಪ್ಟೆಂಬರ್ 7 ರವರೆಗೆ ಈ ಡೀಲ್ ನಡೆಯಲಿದೆ.
ಮೂರನೇ ದಿನದ ಪ್ರಮೋಶನ್ ಸಮಯದಲ್ಲಿ ಬಳಕೆದಾರರು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದ್ದು ರೂ 2,000ವನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಪಡೆಯಬಹುದು. ಇದಲ್ಲದೆ ಹಳೆಯ ಫೋನ್‌ಗೆ ರೂ 2,000 ಎಕ್ಸ್‌ಚೇಂಜ್ ಒನ್‌ಪ್ಲಸ್ 31ಇ, ಒನ್‌ಪ್ಲಸ್ 5 ನಲ್ಲಿ ಲಭ್ಯವಾಗಲಿದೆ. 12 ತಿಂಗಳುಗಳ ಸೊನ್ನೆ ಇಎಮ್‌ಐ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಕ್ಲಿಯರ್ ಟ್ರಿಪ್‌ನಿಂದ ವಿಮಾನ ವೋಚರ್‌ಗಳನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು.
ಭಾರತದ ಒನ್‌ಪ್ಲಸ್ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಈ ಮಾತನಾಡಿ ಭಾರತದಲ್ಲಿ ಒನ್‌ಪ್ಲಸ್‌ನ 1,000 ದಿನಗಳ ಸಂಭ್ರಮವನ್ನು ವಿಶೇಷವಾಗಿ ನಾವು ಆಚರಿಸುತ್ತಿದ್ದು ಭಾರತದಲ್ಲಿ ಒನ್‌ಪ್ಲಸ್ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದು ನುಡಿದಿದ್ದಾರೆ.
ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!
ಇಂದು ಒನ್‌ಪ್ಲಸ್ ಗ್ರಾಹಕರ ಅಚ್ಚುಮೆಚ್ಚಿನ ಡಿವೈಸ್ ಎಂದೆನಿಸಿದ್ದು ಬೇಡಿಕೆಯ ಫೋನ್‌ಗಳಲ್ಲಿ ಮುಂಚೂಣಿಯಲ್ಲಿದೆ. ಒನ್‌ಪ್ಲಸ್ ಫೋನ್ ಪ್ರಯಾಣ ಭಾರತದಲ್ಲಿ ಆರಂಭವಾಗಿದ್ದು ಒನ್‌ಪ್ಲಸ್ ಒನ್ ಮೂಲಕವಾಗಿದೆ. ತನ್ನದೇ ಸ್ವಂತ ಓಎಸ್ ಓಕ್ಸಿಜನ್ ಓಎಸ್ ಅನ್ನು ಒನ್‌ಪ್ಲಸ್ 2 ಮತ್ತು ಒನ್‌ಪ್ಲಸ್ ಎಕ್ಸ್‌ನಲ್ಲಿ ಆರಂಭಿಸಿತು. ಇಷ್ಟಕ್ಕೆ ಕಂಪೆನಿ ತನ್ನ ಸಾಧನೆಯನ್ನು ನಿಲ್ಲಿಸದೆ ಒನ್ ಪ್ಲಸ್ 3 ಡಿವೈಸ್‌ನಲ್ಲಿ ಹೆಚ್ಚು ವೇಗದ ಚಾರ್ಜಿಂಗ್ ವ್ಯವಸ್ಥೆ ಡ್ಯಾಶ್ ಚಾರ್ಜ್ ಅನ್ನು ಆರಂಭಿಸಿತು.
ಈ ವರ್ಷವಷ್ಟೇ ಕಂಪೆನಿಯು ಒನ್ ಪ್ಲಸ್ 5 ಅನ್ನು ಲಾಂಚ್ ಮಾಡಿದೆ. ಇದು ಹೆಚ್ಚಿನ ರೆಸಲ್ಯೂಶನ್‌ನ ಕ್ಯಾಮೆರಾವನ್ನು ಹೊಂದಿದೆ. 8 ಜಿಬಿ RAM ಡಿವೈಸ್‌ನಲ್ಲಿದೆ. ವಿಶ್ವದ ವೇಗದ ಪ್ರೊಸೆಸರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಇದರಲ್ಲಿದೆ ಮತ್ತು ಡ್ಯಾಶ್ ಚಾರ್ಜರ್ ಅನ್ನು ಇದು ಹೊಂದಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.