ಶೀಘ್ರದಲ್ಲಿಯೇ ಬಹುನಿರೀಕ್ಷಿತ ಒನ್‌ಪ್ಲಸ್ 5 ಟಿ ಲಾಂಚ್‌

By: Shwetha PS

ಒನ್‌ಪ್ಲಸ್ 5 ಟಿ ಇನ್ನೇನು ಬಿಡುಗಡೆಯಾಗುವ ಹಂತದಲ್ಲಿದ್ದು ಕಂಪನಿಯು ಈ ಡಿವೈಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಸಲು ಸಂಕೋಚಪಡುತ್ತಿದೆ. ಫೋನ್‌ನ ರಿಯರ್ ಪ್ಯಾನಲ್ ಅನ್ನು ತೋರಿಸುತ್ತಿರುವ ಚಿತ್ರ ಸದ್ಯಕ್ಕೆ ದೊರಕಿದ್ದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 5 ಟಿ ಲಾಂಚ್ ಸಂದರ್ಭದಲ್ಲಿಯೇ ಇನ್ನಷ್ಟು ಮಾಹಿತಿ ಲಭ್ಯವಾಗುತ್ತದೆ.

ಶೀಘ್ರದಲ್ಲಿಯೇ ಬಹುನಿರೀಕ್ಷಿತ ಒನ್‌ಪ್ಲಸ್ 5 ಟಿ ಲಾಂಚ್‌

ಮುಂಬರಲಿರುವ ಸ್ಮಾರ್ಟ್‌ಫೋನ್ ಬೆಲೆಯನ್ನು ಕಂಪನಿ ಸಿಇಒ ಪೀಟ್ ಲೂ ತಿಳಿಸಿದ್ದು ಅಂದಾಜು ರೂ 39,000 ಕ್ಕೆ ಡಿವೈಸ್ ಬಳಕೆದಾರರ ಕೈ ಸೇರಲಿದೆ ಎಂಬುದಾಗಿ ಬಳಕೆದಾರರ ಪ್ರಶ್ನೆಗೆ ಉತ್ತರವಾಗಿ ಪೀಟ್ ಟ್ವೀಟಿಸಿದ್ದಾರೆ. ಸದ್ಯಕ್ಕಂತೂ ಡಿವೈಸ್‌ನ ನಿಖರ ಬೆಲೆ ನಮಗೆ ತಿಳಿದಿಲ್ಲ ಅದಾಗ್ಯೂ ಇಲ್ಲಿ ನಮೂದಿಸಿರುವ ಬೆಲೆಯನ್ನು ಇದು ಮೀರುವುದಿಲ್ಲ ಎಂಬ ಖಾತ್ರಿ ನಮಗಿದೆ.

ಸಮಯದಿಂದ ಸಮಯಕ್ಕೆ ಒನ್‌ಪ್ಲಸ್ ತನ್ನ ಬೆಲೆಯಲ್ಲಿ ಹೆಚ್ಚಳವನ್ನು ಕಂಡುಕೊಳ್ಳುತ್ತಿದ್ದು ರೂ ಐದು ಸಾವಿರದಂತೆ ಇದು ಮೇಲೇರುತ್ತಿದೆ. ಒನ್‌ಪ್ಲಸ್‌ನ 5 ನ ಆರಂಭ ಬೆಲೆ ರೂ 32,999 ಆಗಿತ್ತು ಅದೇ ರೀತಿ ಒನ್‌ಪ್ಲಸ್ 3 ಅನ್ನು ಭಾರತದಲ್ಲಿ ರೂ 27,999 ಕ್ಕೆ ಲಾಂಚ್ ಮಾಡಲಾಗಿತ್ತು.

ಹೊಸ ಮೊಬೈಲ್ ಖರೀದಿಸಿದರೆ 8 ಗಂಟೆ ಚಾರ್ಜ್ ಮಾಡಿ ಬಳಸಲು ಹೇಳುವುದೇಕೆ?..ಇಲ್ಲಿದೆ ಉತ್ತರ!!

ಒನ್‌ಪ್ಲಸ್ 5 ಟಿ ಬೆಲೆಯನ್ನು ರೂ 35,000 ವೆಂದು ಅಂದಾಜು ಮಾಡಲಾಗಿದ್ದು ಲಾಂಚ್‌ನ ನಂತರವೇ ನಿಖರ ಮಾಹಿತಿ ದೊರೆಯಲಿದೆ.

English summary
OnePlus 5T will be launched in the coming days at an event in New York City.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot