ಒನ್‌ಪ್ಲಸ್‌ ನಾರ್ಡ್‌ CE 3 ಡಿಸೈನ್‌ ಬಹಿರಂಗ! ಸ್ಟೈಲಿಶ್‌ ಲುಕ್‌! ಜಬರ್ದಸ್ತ್‌ ಫೀಚರ್ಸ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಒನ್‌ಪ್ಲಸ್‌ ಕಂಪೆನಿ ಕೂಡ ಒಂದಾಗಿದೆ. ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. ಒನ್‌ಪ್ಲಸ್‌ ಕಂಪೆನಿ ಪರಿಚಯಿಸುವ ಫೋನ್‌ಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಪ್ರತಿ ಭಾರಿಯು ಇರಲಿದೆ. ಅದರಂತೆ ಬಿಡುಗಡೆಗೂ ಮುನ್ನವೇ ಒನ್‌ಪ್ಲಸ್‌ ಫೋನ್‌ಗಳ ಫೀಚರ್ಸ್‌ ಸೋರಿಕೆಯಾಗೂದು ಸಾಮಾನ್ಯ. ಇದೀಗ ಒನ್‌ಪ್ಲಸ್‌ ಕಂಪೆನಿಯ ಒನ್‌ಪ್ಲಸ್‌ ನಾರ್ಡ್‌ CE 3 ಫೋನ್‌ನ ಫೀಚರ್ಸ್‌ ಕೂಡ ಲೀಕ್‌ ಆಗಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಸದ್ಯದಲ್ಲೇ ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಸಿದ್ಧತೆ ನಡೆಸಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಡಿಸೈನ್‌ ಹಾಗೂ ಪ್ರೊಸೆಸರ್‌ ಸಾಮರ್ಥ್ಯ ಏನಿದೆ ಅನ್ನೊದು ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಡಿಸೈನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸೈನ್‌ ಹೇಗಿದೆ?

ಡಿಸೈನ್‌ ಹೇಗಿದೆ?

ಇತ್ತೀಚಿನ ಸೋರಿಕೆಗಳ ಪ್ರಕಾರ ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಬ್ಲ್ಯಾಕ್ ಫಿನಿಶ್ ಮತ್ತು ಹೋಲ್-ಪಂಚ್ ಡಿಸ್‌ಪ್ಲೇ ಪಡೆದಿರುವ ಸಾಧ್ಯತೆಯಿದೆ. ರಿಯರ್‌ ಪ್ಯಾನಲ್‌ ಎರಡು ಬಿಗ್‌ ಕ್ಯಾಮೆರಾ ಕಟೌಟ್‌ಗಳನ್ನು ಪಡೆಯಲಿದೆ ಎಂದು ವರದಿಯಾಗಿದೆ. ಇದರಲ್ಲಿ ಮೊದಲನೇ ಕಟೌಟ್ ಮುಖ್ಯ ಕ್ಯಾಮೆರಾ ಸೆನ್ಸಾರ್‌‌ ಹೊಂದಿರಲಿದೆ. ಆದರೆ ಎರಡನೇ ಕಟೌಟ್ ಎರಡು ಸೆನ್ಸಾರ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ X ಮತ್ತು ಇತ್ತೀಚಿನ ಐಫೋನ್‌ಗಳ ಡಿಸೈನ್‌ನಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಏನಿರಲಿದೆ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಏನಿರಲಿದೆ?

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 1080 x 2412  ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಬರಲಿದೆ. ಇದು HDR10+, 120 Hz ರಿಫ್ರೆಶ್ ರೇಟ್‌ ಬೆಂಬಲವನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಈ ಡಿಸ್‌ಪ್ಲೇ ಪಂಚ್‌ ಹೋಲ್‌ ಡಿಸ್‌ಪ್ಲೇ ಆಗಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಪಡೆದಿರುವ ಸಾಧ್ಯತೆಯಿದೆ.

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನಿರಲಿದೆ?

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನಿರಲಿದೆ?

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರುವ ನಿರೀಕ್ಷೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿರಬಹುದು?

ಕ್ಯಾಮೆರಾ ಸೆಟ್‌ಅಪ್‌ ಏನಿರಬಹುದು?

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡು ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್‌ಗಳನ್ನು ಒಳಗೊಂಡಿರಬಹುದು. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಏನಿರಲಿದೆ?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಏನಿರಲಿದೆ?

ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಸಿ ಪೋರ್ಟ್‌ ಬೆಂಬಲಿಸಲಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರಲಿದೆ ಎನ್ನಲಾಗಿದೆ.

Best Mobiles in India

English summary
OnePlus Nord CE 3 is expected to retain three cameras on the back, but feature a new design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X