ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ ವಾಚ್‌ ಲಾಂಚ್‌! 30 ದಿನಗಳ ಸ್ಟ್ಯಾಂಡ್‌ಬೈ ಟೈಂ!

|

ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ತನ್ನ ಮೊದಲ ನಾರ್ಡ್‌ ಬ್ರಾಂಡ್‌ ವೆರಿಯೆಬಲ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದನ್ನು ಒನ್‌ಪ್ಲಸ್‌ ನಾರ್ಡ್‌ ವಾಚ್‌ ಎಂದು ಹೆಸರಿಸಲಾಗಿದ್ದು, ಈ ವಾಚ್‌ ಇಂಟರ್‌ಬಿಲ್ಟ್‌ ಜಿಪಿಎಸ್ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ SpO2 ಮಾನಿಟರಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದು 105 ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಟಿಪ್ಸ್‌ಗಳನ್ನು ಸಹ ನೀಡಲಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಹೊಸ ನಾರ್ಡ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು 60Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ 30 ದಿನಗಳ ಸ್ಟ್ಯಾಂಡ್‌ಬೈ ಟೈಂ ಜೊತೆಗೆ 10 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ ನಾರ್ಡ್‌ವಾಚ್‌

ಒನ್‌ಪ್ಲಸ್‌ ನಾರ್ಡ್‌ವಾಚ್‌ 1.78 ಇಂಚಿನ HD ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 60Hz ರಿಫ್ರೆಶ್ ರೇಟ್‌ ಹೊಂದಿದ್ದು, 500ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ನ ಬಲಭಾಗದಲ್ಲಿ ಪವರ್ ಬಟನ್ ಅನ್ನು ನೀಡಲಾಗಿದೆ. ಈ ವಾಚ್‌ SF32LB555V4O6 ಚಿಪ್‌ಸೆಟ್‌ನಲ್ಲಿ ರನ್‌ ಆಗಲಿದ್ದು, RTOS ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇಂಟರ್‌ಬಿಲ್ಟ್‌

ಈ ಸ್ಮಾರ್ಟ್ ವಾಚ್ ಇಂಟರ್‌ಬಿಲ್ಟ್‌ ಜಿಪಿಎಸ್ ಬೆಂಬಲವನ್ನು ಹೊಂದಿದೆ. ಇದು 3 ಆಕ್ಸಿಸ್ ಅಕ್ಸಿಲೆರೊಮೀಟರ್ ಅನ್ನು ಹೊಂದಿದ್ದು, SpO2 ಮತ್ತು ಸ್ಲೀಪ್‌ ಟ್ರ್ಯಾಕಿಂಗ್ ಅನ್ನು ಕೂಡ ಒಳಗೊಂಡಿದೆ. ಅಲ್ಲದೆ ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು ಒತ್ತಡದ ಮೇಲ್ವಿಚಾರಣೆಯನ್ನು ಸಹ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 105 ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ರನ್ನಿಂಗ್‌ ಮತ್ತು ವಾಕಿಂಗ್ ಆಟೋಮ್ಯಾಟಿಕ್‌ ಟ್ರ್ಯಾಕ್ ಕೂಡ ಮಾಡಬಹುದು.

ಒನ್‌ಪ್ಲಸ್‌ ನಾರ್ಡ್ ವಾಚ್

ಒನ್‌ಪ್ಲಸ್‌ ನಾರ್ಡ್ ವಾಚ್ 230mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್‌ ಅನ್ನು ಒಳಗೊಂಡಿದೆ. ಇನ್ನು ಈ ವಾಚ್‌ ಸಾಮಾನ್ಯ ಬಳಕೆಯಲ್ಲಿ 30 ದಿನಗಳ ಸ್ಟ್ಯಾಂಡ್‌ಬೈ ಸಮಯದೊಂದಿಗೆ 10 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದೆ. ಈ ವಾಚ್ ಕೇಸ್ 42.5mm ಅಳತೆ ಮತ್ತು ವಾಚ್ ಸ್ಟ್ರಾಪ್ ಸೇರಿದಂತೆ 52.4g ತೂಕವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆಯಾಗಿರುವ ಒನ್‌ಪ್ಲಸ್‌ ನಾರ್ಡ್ ವಾಚ್ ಬೆಲೆ 4,999ರೂ.ಆಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಡೀಪ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ಅನ್ನು ನೀವು ಒನ್‌ಪ್ಲಸ್‌ ಸ್ಟೋರ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ ಮತ್ತು ಅಧಿಕೃತ ಒನ್‌ಪ್ಲಸ್‌ ಪಾಲುದಾರ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಒನ್‌ಪ್ಲಸ್‌ ಕಂಪೆನಿ ಹೇಳಿರುವಂತೆ ಈ ಸ್ಮಾರ್ಟ್‌ವಾಚ್‌ ಇದೇ ಅಕ್ಟೋಬರ್ 4 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಅಮೆಜಾನ್ ಮೂಲಕ ಮಾರಾಟವಾಗಲಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ಆಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 500 ರೂ. ರಿಯಾಯಿತಿ ದೊರೆಯಲಿದೆ. ಹಾಗೆಯೇ ICICI ಬ್ಯಾಂಕ್ ಕಾರ್ಡ್ ಹೊಂದಿರುವವರು 500ರೂ. ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ರಿಯಾಯಿತಿಗಳು ಒನ್‌ಪ್ಲಸ್‌ ಸ್ಟೋರ್, ಒನ್‌ಪ್ಲಸ್‌ ಸ್ಟೋರ್ ಅಪ್ಲಿಕೇಶನ್ ಮತ್ತು ಆಯ್ದ ಒನ್‌ಪ್ಲಸ್‌ ಎಕ್ಸ್‌ಪಿರಿಯೆನ್ಸ್‌ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ.

Best Mobiles in India

English summary
OnePlus Nord Watch With 105 Sports Modes Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X