ಭಾರತದಲ್ಲಿ ಒನ್‌ಪ್ಲಸ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಅನಾವರಣ!

|

ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಜನಪ್ರಿಯತೆ ಪಡೆದುಕೊಂಡಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಹೊಸ ಒನ್‌ಪ್ಲಸ್‌ TV Y ಸರಣಿಯಲ್ಲಿ 43 ಇಂಚಿನ ಒನ್‌ಪ್ಲಸ್‌ ಟಿವಿ Y1S ಪ್ರೊ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಯು 10-ಬಿಟ್ ಕಲರ್ ಡೆಪ್ತ್‌ನೊಂದಿಗೆ ಅಪ್‌ಗ್ರೇಡ್ ಮಾಡಿದ 4K UHD ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಡಾಲ್ಬಿ ಆಡಿಯೋ ಟೆಕ್ನಾಲಜಿ ಹೊಂದಿರುವ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಹೊಸ ಒನ್‌ಪ್ಲಸ್‌ ಟಿವಿ Y1S ಪ್ರೊ ಲಾಂಚ್‌ ಮಾಡಿದೆ. ಇದು 43-ಇಂಚಿನ 4K UHD ಡಿಸ್‌ಪ್ಲೇ ಹೊಂದಿದೆ. ರಿಯಲ್‌ ಟೈಂನಲ್ಲಿ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಇದು ಗಾಮಾ ಎಂಜಿನ್‌ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಮಾರ್ಟ್ ಟಿವಿಯನ್ನು ಹೋಮ್ ಎಂಟರ್ಟೈನ್ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಆಂಡ್ರಾಯ್ಡ್‌ ಟಿವಿ 10 ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌ ಟಿವಿ 43 Y1S ಪ್ರೊ 43 ಇಂಚಿನ 4K UHD ಡಿಸ್‌ಪ್ಲೇ ಹೊಂದಿದೆ. ಇದು ರಿಯಲ್‌ ಟೈಂನಲ್ಲಿ ಇಮೇಜ್‌ ಗುಣಮಟ್ಟವನ್ನು ಹೆಚ್ಚಿಸಲು ಇದು ಗಾಮಾ ಎಂಜಿನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10+, HDR10, ಮತ್ತು HLG ಫಾರ್ಮ್ಯಾಟ್ ಬೆಂಬಲವನ್ನು ಹೊಂದಿದೆ. ಈ ಟಿವಿಯು ಪ್ರೀಮಿಯಂ ಮತ್ತು ಸೊಗಸಾದ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, 24Wನ ಸಂಯೋಜಿತ ಆಡಿಯೊ ಔಟ್‌ಪುಟ್ ಅನ್ನು ನೀಡುವ ಎರಡು ಫುಲ್‌-ರೇಂಜ್‌ ಸ್ಪೀಕರ್‌ಗಳನ್ನು ಹೊಂದಿದೆ.

ಪ್ಲಾಟ್‌ಫಾರ್ಮ್‌ನಲ್ಲಿ

ಇನ್ನು ಈ ಹೊಸ ಸ್ಮಾರ್ಟ್ ಟಿವಿಯನ್ನು ಹೋಮ್ ಎಂಟರ್ಟೈನ್ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಆಂಡ್ರಾಯ್ಡ್‌ ಟಿವಿ 10 ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ತಡೆರಹಿತ ಸಂಪರ್ಕಿತ ಎಕೋ ಸಿಸ್ಟಂ ಅನುಭವಕ್ಕಾಗಿ ಸ್ಮಾರ್ಟ್ ಮ್ಯಾನೇಜರ್ ಫೀಚರ್ಸ್‌ ಒಳಗೊಂಡಿದೆ. ಜೊತೆಗೆ ಇದು ಒನ್‌ಪ್ಲಸ್‌ ಕನೆಕ್ಟ್ 2.0 ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೇರವಾಗಿ ಟಿವಿಗೆ ಕನೆಕ್ಟ್‌ ಮಾಡುವುದಕ್ಕೆ ಅನುಮತಿಸುತ್ತದೆ.

ಒನ್‌ಪ್ಲಸ್‌

ಇದಲ್ಲದೆ ಒನ್‌ಪ್ಲಸ್‌ TV 43 Y1S ಪ್ರೊ ಒಂದು ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ HDMI ಮೂಲಕ ಗೇಮಿಂಗ್ ಕನ್ಸೋಲ್ ಅನ್ನು ಕನೆಕ್ಟ್‌ ಮಾಡುವುದಕ್ಕೆ ಮತ್ತು ಸ್ಪೀಡ್‌ ರೆಸ್ಪಾನ್‌ ಮತ್ತು ಸುಗಮ ಗೇಮಿಂಗ್ ಅನುಭವವನ್ನು ಸಕ್ರಿಯಗೊಳಿಸಲು ಆಟೋ ಲೋ ಲೇಟೆನ್ಸಿ ಮೋಡ್ (ALLM) ಅನ್ನು ಸಕ್ರಿಯಗೊಳಿಸುತ್ತದೆ. ಇದರೊಂದಿ ಮಕ್ಕಳು ಆರೋಗ್ಯಕರ ವಿಷಯವನ್ನು ಆನಂದಿಸಲು ಅನುವು ಮಾಡಿಕೊಡುವ ಕಿಡ್ಸ್ ಮೋಡ್ ಸಹ ನೀಡಲಾಗಿದೆ. ಜೊತೆಗೆ, ಈ ಸ್ಮಾರ್ಟ್‌ಟಿವಿಯನ್ನು ಆಕ್ಸಿಜನ್‌ಪ್ಲೇ 2.0 ಅನ್ನು ಮೊದಲೇ ಇನ್‌ಸ್ಟಾಲ್‌ ಮಾಡಲಾಗಿದೆ. ಇದರಿಂದ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಚಲನಚಿತ್ರಗಳು, ಪ್ರದರ್ಶನಗಳು ಮತ್ತು ಹೆಚ್ಚಿನವುಗಳಿಗೆ ಸುಲಭ ಪ್ರವೇಶ ದೊರೆಯಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ TV 43 Y1S ಪ್ರೊ ಸ್ಮಾರ್ಟ್‌ಟಿವಿ ಇದೇ ಏಪ್ರಿಲ್ 11 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ಇದರ ಬೆಲೆ 29,999ರೂ. ಆಗಿದ್ದು, ಅಮೆಜಾನ್‌ ಮತ್ತು ಒನ್‌ಪ್ಲಸ್‌.ಇನ್‌ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಒನ್‌ಪ್ಲಸ್‌ ಎಕ್ಸ್‌ಪಿರಿಯನ್ಸ್‌ ಸ್ಟೋರ್‌ಗಳು, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಲಭ್ಯವಿರುತ್ತದೆ.

Most Read Articles
Best Mobiles in India

English summary
OnePlus has expanded its OnePlus TV Y series with the launch of the 43-inch OnePlus TV Y1S Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X