ಒನ್‌ಪ್ಲಸ್‌ ಟಿವಿ 50 Y1S ಪ್ರೊ ಲಾಂಚ್‌! ಡಾಲ್ಬಿ ಆಡಿಯೋ ಸೌಲಭ್ಯ!

|

ಒನ್‌ಪ್ಲಸ್‌ ಕಂಪೆನಿ ತನ್ನ ಬಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಮಾರುಕಟ್ಟೆಗೆ ವಿಶೇಷ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವಲ್ಲಿ ಒನ್‌ಪ್ಲಸ್‌ ಕಂಪೆನಿ ಸದಾ ಮುಂದಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ 4K ಟಿವಿ ಆಗಿದ್ದು, 10-ಬಿಟ್ ಕಲರ್ ಡೆಪ್ತ್ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ HDR10+, HDR10, ಮತ್ತು HLG ಫಾರ್ಮ್ಯಾಟ್‌ಗೆ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಸಹ ಆಂಡ್ರಾಯ್ಡ್ ಟಿವಿಯನ್ನು ಆಧರಿಸಿದೆ. ಇದು ಆಟೋ ಕಡಿಮೆ ಲೇಟೆನ್ಸಿ ಮೋಡ್ ಮತ್ತು ಸ್ಮಾರ್ಟ್ ಮ್ಯಾನೇಜರ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಮಲ್ಟಿಕಾಸ್ಟ್‌ ಮತ್ತು ಗೂಗಲ್‌ ಡ್ಯೂ ಬೆಂಬಲವನ್ನು ಕೂಡ ಹೊಂದಿದೆ.

ಸ್ಮಾರ್ಟ್‌ಟಿವಿ

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMC) ತಂತ್ರಜ್ಞಾನವನ್ನು ಒಳಗೊಂಡಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ ಕನೆಕ್ಟ್‌ ಮಾಡಿ ಕಂಟೆಂಟ್‌ ಅನ್ನು ವಾಚ್‌ ಮಾಡುವುದಕ್ಕಾಗಿ ಕ್ರೊಮಾಕಾಸ್ಟ್‌ ಬೆಂಬಲ ಮತ್ತು DLNA ಮತ್ತು ಮಿರಾಕಾಸ್ಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಎರಡು ಫುಲ್‌ ರೇಂಜ್‌ ಸ್ಪೀಕರ್‌ಗಳನ್ನು ಹೊಂದಿದ್ದು, ಒಟ್ಟು 24W ಔಟ್‌ಪುಟ್‌ ಅನ್ನು ನೀಡಲಿದೆ. ಹಾಗಾದ್ರೆ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌ ಟಿವಿ 50 Y1S ಪ್ರೊ 50 ಇಂಚಿನ 4K UHD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಗಾಮಾ ಎಂಜಿನ್‌ ಅನ್ನು ಪ್ರೀ ಲೋಡ್‌ ಮಾಡಲಾಗಿದೆ. ಇದು ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMC) ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಮಲ್ಟಿಕಾಸ್ಟ್‌ ಮತ್ತು ಗೂಗಲ್‌ ಡ್ಯೂ ಬೆಂಬಲವನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಎರಡು ಫುಲ್‌ ರೇಂಜ್‌ ಸ್ಪೀಕರ್‌ಗಳನ್ನು ನೀಡಲಾಗಿದ್ದು, ಒಟ್ಟು 24W ಔಟ್‌ಪುಟ್ ಅನ್ನು ನೀಡುತ್ತದೆ. ಇದಲ್ಲದೆ, ಒನ್‌ಪ್ಲಸ್‌ ಟಿವಿ 50 Y1S ಪ್ರೊ ಡಾಲ್ಬಿ ಆಡಿಯೊ ಬೆಂಬಲವನ್ನು ಹೊಂದಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ಟಿವಿ 50 Y1S ಪ್ರೊ ಆಕ್ಸಿಜನ್‌ಪ್ಲೇ 2.0 ಹೊಂದಿದೆ. ಇದು 230 ಲೈವ್ ಚಾನಲ್‌ಗಳಿಗೆ ಪ್ರವೇಶವನ್ನು ನೀಡಲಿದೆ ಎಂದು ಹೇಳಲಾಗಿದೆ. ಅಲ್ಲದೆ ಸ್ಮಾರ್ಟ್‌ಟಿವಿಗೆ ಸ್ಮಾರ್ಟ್‌ಫೋನ್‌ ಅನ್ನು ಕನೆಕ್ಟ್‌ ಮಾಡುವುದಕ್ಕೆ ಮತ್ತು ರಿಮೋಟ್‌ ಕಂಟ್ರೋಲ್‌ ಆಗಿ ಫೋನ್‌ ಅನ್ನು ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಒನ್‌ಪ್ಲಸ್‌ ಕನೆಕ್ಟ್‌ 2.0ಯಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿರುವ ಕಂಟೆಂಟ್‌ ಅನ್ನು ಟಿವಿಯಲ್ಲಿ ವಾಚ್‌ ಮಾಡುವುದಕ್ಕೆ ಕ್ರೊಮ್‌ಕಾಸ್ಟ್‌ ಬೆಂಬಲ ಮತ್ತು DLNA ಮತ್ತು Miracast ಅನ್ನು ಹೊಂದಿದೆ.

ಒನ್‌ಪ್ಲಸ್‌ ಟಿವಿ

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದ್ದು, ಧ್ವನಿ ಆಜ್ಞೆಗಳನ್ನು ಕೂಡ ಬೆಂಬಲಿಸಲಿದೆ. ಇದಲ್ಲದೆ, ಬಳಕೆದಾರರು ಈ ಸ್ಮಾರ್ಟ್ ಟಿವಿಯಲ್ಲಿ ಅಲೆಕ್ಸಾವನ್ನು ಸಹ ಪ್ರವೇಶಿಸಬಹುದು. ಈ ಸ್ಮಾರ್ಟ್‌ಟಿವಿ 2GB RAM ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು HDMI ಮೂಲಕ ತಮ್ಮ ಗೇಮಿಂಗ್ ಕನ್ಸೋಲ್ ಅನ್ನು ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು ALLM ಫೀಚರ್ಸ್‌ ಪ್ರವೇಶಿಸಲು ಅನುಮತಿಸುವ ಗೇಮ್ ಮೋಡ್‌ ಅನ್ನು ಪ್ರೀ ಲೋಡ್‌ ಮಾಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಪೋಷಕರು ತಮ್ಮ ಮಕ್ಕಳ ವೀಕ್ಷಣೆಯನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಕಿಡ್ಸ್ ಮೋಡ್ ಅನ್ನು ಸಹ ಒಳಗೊಂಡಿದೆ.

ಕನೆಕ್ಟಿವಿಟಿ

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 802.11 a/b/g/n, ಬ್ಲೂಟೂತ್ v5.0, ಮೂರು HDMI 2.1, ಎರಡು USB 2.0, RJ45 ಈಥರ್ನೆಟ್, ಆಪ್ಟಿಕಲ್ ಆಡಿಯೊ ಔಟ್‌ಪುಟ್ ಮತ್ತು AV (ಸಂಯೋಜಿತ) ಇನ್‌ಪುಟ್ ಸೇರಿವೆ. ಇನ್ನು ಹೆಚ್ಚುವರಿಯಾಗಿ, ಒನ್‌ಪ್ಲಸ್‌ ಟಿವಿ ಒನ್‌ಪ್ಲಸ್‌ ಬಡ್ಸ್ ಮತ್ತು ಒನ್‌ಪ್ಲಸ್‌ ಬಡ್ಸ್ ಪ್ರೊ ಜೊತೆಗೆ ವರ್ಧಿತ ಸಂಪರ್ಕವನ್ನು ಒದಗಿಸುತ್ತದೆ. ಇದರಿಂದ ನೀವು ಇಯರ್‌ಬಡ್ಸ್‌ ರಿಮೂವ್‌ ಮಾಡಿದಾಗ ಆನ್-ಸ್ಕ್ರೀನ್ ವಿಷಯವನ್ನು ಆಟೋಮ್ಯಾಟಿಕ್‌ ವಿರಾಮಗೊಳಿಸುತ್ತದೆ. ಅಲ್ಲದೆ ಟಿವಿಯಲ್ಲಿ 'ಕನೆಕ್ಟ್' ಬಟನ್ ಒತ್ತಿದರೆ ಇಯರ್‌ಬಡ್‌ಗಳನ್ನು ಸ್ವಯಂಚಾಲಿತವಾಗಿ ಸಂಪರ್ಕಿಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಬೆಲೆ 32,999ರೂ.ಆಗಿದೆ. ಈ ಸ್ಮಾರ್ಟ್ ಟಿವಿಯು ಅಮೆಜಾನ್‌, ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ದೇಶದ ಪ್ರಮುಖ ಆಫ್‌ಲೈನ್ ಪಾಲುದಾರ ಅಂಗಡಿಗಳಲ್ಲಿ ಜುಲೈ 7 ರಿಂದ ಮಾರಾಟವಾಗಲಿದೆ.

ಲಾಂಚ್‌ ಆಫರ್‌ ಏನಿದೆ?

ಲಾಂಚ್‌ ಆಫರ್‌ ಏನಿದೆ?

ಒನ್‌ಪ್ಲಸ್‌ ಟಿವಿ 50 Y1S ಪ್ರೊ ಸ್ಮಾರ್ಟ್‌ಟಿವಿ ಲಾಂಚ್‌ ಆಫರ್‌ನಲ್ಲಿ 3,000ರೂ.ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿದೆ. ಇದು ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಬಳಸಿ ಖರೀದಿ ಮಾಡುವವರಿಗೆ ದೊರೆಯಲಿದೆ. ಇನ್ನು ಅಮೆಜಾನ್‌ ಮತ್ತು ಒನ್‌ಪ್ಲಸ್‌.ಇನ್‌ನಲ್ಲಿ ಒಂಬತ್ತು ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಆಫ್‌ಲೈನ್ ರಿಟೇಲ್‌ ವ್ಯಾಪಾರಿಗಳ ಮೂಲಕ ಟಿವಿಯನ್ನು ಖರೀದಿಸುವ ಗ್ರಾಹಕರು ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಮೂಲಕ ನೋ ಕಾಸ್ಟ್‌ EMI ಆಯ್ಕೆಗಳನ್ನು ಪಡೆಯಬಹುದು. ಜೊತೆಗೆ ಅಮೆಜಾನ್ ಗ್ರಾಹಕರು ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಟಿವಿ ಖರೀದಿಸಿದ ನಂತರ 12 ತಿಂಗಳವರೆಗೆ ಕಾಂಪ್ಲಿಮೆಂಟರಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

Best Mobiles in India

English summary
OnePlus TV 50 Y1S Pro With Dolby Audio Launched in India: specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X