ಟ್ರೂ ಕಾಲರ್‌ನಿಂದ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಲಾಂಚ್‌! ಕ್ಲಬ್‌ಹೌಸ್‌ಗೆ ಬಿಗ್‌ ಶಾಕ್‌!

|

ಸ್ಮಾರ್ಟ್‌ಫೋನ್‌ ಬಳಕೆದಾರರು ಮುಖ್ಯವಾಗಿ ಬಳಸುವ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ತಮ್ಮ ಮೊಬೈಲ್‌ ಸಂಖ್ಯೆಗೆ ಬರುವ ಅಪರಿಚಿತಿ ಕರೆ ಯಾರದ್ದೂ ಎಂದು ತಿಳಿಯುವುದಕ್ಕೆ ಟ್ರೂ ಕಾಲರ್‌ ಉತ್ತಮ ಆಯ್ಕೆಯಾಗಿದೆ. ಕಾಲರ್‌ ಐಡಿ ಆಗಿ ಕಾರ್ಯನಿರ್ವಹಿಸುವ ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ನೀವು ಯಾವುದೇ ಸಂಖ್ಯೆಯನ್ನು ಬೇಕಾದರೂ ಸರ್ಚ್‌ ಮಾಡಬಹುದಾಗಿದೆ. ಇನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಕೂಡ ಪರಿಚಯಿಸಿದೆ.

ಕಾಲರ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಹೊಸ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಲಾಂಚ್‌ ಮಾಡಿದೆ. ಇದು ಆಡಿಯೋ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಮಾದರಿಯನ್ನೇ ಹೋಲುತ್ತದೆ ಎನ್ನಲಾಗಿದೆ. ಟ್ರೂ ಕಾಲರ್‌ ಪರಿಚಯಿಸಿರುವ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಕೂಡ ಕಮ್ಯೂನಿಕೇಟ್‌ ಪ್ಲಾಟ್‌ಫಾರ್ಮ್‌ ಆಗಿದ್ದು, ಆಡಿಯೋ ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಸೇರಲು ಟ್ರೂಕಾಲರ್ ಬಳಕೆದಾರರಿಗೆ ಅವಕಾಶ ಸಿಗಲಿದೆ.

ಕಾಲರ್‌ನ

ಟ್ರೂ ಕಾಲರ್‌ನ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ನಲ್ಲಿ ಆಡಿಯೋ ಸಂಭಾಷಣೆಗಳನ್ನು ನಡೆಸಬಹುದು. ಅಲ್ಲದೆ ಆಡಿಯೋ ಸಂಭಾಷಣೆಗಳಿಗೆ ಟ್ರೂ ಕಾಲರ್‌ ಬಳಕೆದಾರರು ಸೇರ್ಪಡೆಯಾಗಬಹುದಾಗಿದೆ. ಅಲ್ಲದೆ ಈ ಆಡಿಯೋ ಸಂಭಾಷಣೆಗಳು ಟ್ರೂಕಾಲರ್ ಕರೆಗಳು, 'ನೆಟ್‌ವರ್ಕ್ ಎಫೆಕ್ಟ್' ಮೂಲಕ ಹೆಚ್ಚಿನ ಜನರನ್ನು ಆಹ್ವಾನಿಸುತ್ತವೆ. ಇದರಲ್ಲಿ ಒಮ್ಮೆ ನೀವು ನಿಮ್ಮ ಸ್ನೇಹಿತರನ್ನು ಸಂಭಾಷಣೆಗೆ ಸೇರ್ಪಡೆ ಮಾಡಿದರೆ, ಅವರು ಅವರ ಸ್ನೇಹಿತರನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ಟ್ರೂ ಕಾಲರ್‌ನ ಹೊಸ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಬ್‌ಹೌಸ್‌

ಟ್ರೂ ಕಾಲರ್‌ ಕ್ಲಬ್‌ಹೌಸ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ಹೆಸರೇ ಸೂಚಿಸುವಂತೆ ಟ್ರೂ ಕಾಲರ್‌ ಬಳಕೆದಾರರು ಮುಕ್ತವಾಗಿ ಆಡಿಯೋ ಸಂಭಾಷಣೆಗಳನ್ನು ನಡೆಸುವುದಕ್ಕೆ ಅವಕಾಶ ನೀಡಲಿದೆ. ನೀವು ನಿಮ್ಮ ಸ್ನೇಹಿತರನ್ನು ಆಡಿಯೋ ಸಂಭಾಷಣೆಗೆ ಸೇರ್ಪಡೆ ಮಾಡಬಹುದು. ನಿಮ್ಮ ಸ್ನೇಹಿತರು ಅವರ ಸ್ನೇಹಿತರನ್ನು, ಅವರು ಮತ್ತವರ ಸ್ನೇಹಿತರನ್ನು ಹೀಗೆ ಒಬ್ಬರಿಗೊಬ್ಬರು ಆಡಿಯೋ ಸಂಭಾಷಣೆಯಲ್ಲಿ ಸೇರ್ಪಡೆ ಮಾಡುತ್ತಾ ಹೋಗಬಹುದಾಗಿದೆ. ಇನ್ನು ಈ ಸಂಭಾಷಣೆಗಳನ್ನು ರಿಯಲ್‌ ಟೈಂನಲ್ಲಿ ಮಾಡರೇಟ್ ಮಾಡಲಾಗುತ್ತದೆ ಅನ್ನೊದು ಪ್ರಮುಖವಾಗಿದೆ. ಆದರೆ ಸಂಭಾಷಣೆಯ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಟ್ರೂ ಕಾಲರ್‌ ಹೇಳಿದೆ.

ಅಪ್ಲಿಕೇಶನ್‌

ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ವಿಶೇಷತೆ ಎಂದರೆ ಆಡಿಯೋ ಸಂಭಾಷಣೆಯಲ್ಲಿ ಭಾಗವಹಿಸುವವರು ಯಾರು ಕೂಡ ಪರಸ್ಪರರ ಫೋನ್ ಸಂಖ್ಯೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಫೋನ್‌ ನಂಬರ್‌ಗಳು ಬೇರೆಯವರಿಗೆ ದೊರಕುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಆಡಿಯೋ ಸಂಭಾಷಣೆಯ ಸಮಯದಲ್ಲಿ ನಿಮ್ಮ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳು ಮಾತ್ರ ಗೋಚರಿಸುತ್ತವೆ. ಅಲ್ಲದೆ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಕೇವಲ ಎರಡು ಅನುಮತಿಗಳ ಅಗತ್ಯವಿರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಹೊಂದಿರುತ್ತಾರೆ.

ಡೋರ್ಸ್‌

ಇನ್ನು ಓಪನ್‌ ಡೋರ್ಸ್‌ ಅಪ್ಲಿಕೇಶನ್‌ನಲ್ಲಿ ನಿಮಗೆ ತಿಳಿಯದೆ ನಿಮ್ಮ ಸಂಭಾಷಣೆಯನ್ನು ಬೇರೆಯವರು ಆಲಿಸುವುದಕ್ಕೆ ಸಾಧ್ಯವಿಲ್ಲ. ನೀವು ಸಂವಾದದಲ್ಲಿ ಸೇರಿದಾಗಲೆಲ್ಲಾ ನಿಮ್ಮ ಸಂಪರ್ಕಗಳ ಮೇಲೆ ಎಚ್ಚರಿಕೆಯನ್ನು ನೀಡುವುದು. ಇತರ ಜನರು ಏನು ಹೇಳುತ್ತಿದ್ದಾರೆ ಎಂಬುದಕ್ಕೆ ರಿಯಾಕ್ಷನ್‌ ನೀಡುವುದಕ್ಕೆ ಹಲವು ಫೀಚರ್ಸ್‌ಗಳು ಇದರಲ್ಲಿ ಲಭ್ಯವಾಗಲಿವೆ. ಅಲ್ಲದೆ ಈ ಹೊಸ ಓಪನ್ ಡೋರ್ಸ್ ಸಂಭಾಷಣೆಗಳನ್ನು ಬಳಕೆದಾರರಿಗೆ ಹೇಗೆ ತಿಳಿಸುತ್ತದೆ ಎಂಬುದರ ಬಗ್ಗೆ ಅಪ್ಲಿಕೇಶನ್ ನಿಖರವಾದ ನಿಯಂತ್ರಣವನ್ನು ನೀಡಲಿದೆ.

ಕಾಲರ್‌ನ

ಪ್ರಸ್ತುತ ಟ್ರೂ ಕಾಲರ್‌ನ ಓಪನ್ ಡೋರ್ಸ್ ಅಪ್ಲಿಕೇಶನ್‌ ಸಂಪೂರ್ಣವಾಗಿ ಉಚಿತವಾಗಿದೆ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿರುತ್ತದೆ. ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ತಡೆರಹಿತ ಅನುಭವವನ್ನು ನೀಡಲಿದೆ ಎಂದು ಟ್ರೂ ಕಾಲರ್‌ ಹೇಳಿದೆ. ಇನ್ನು ಓಪನ್ ಡೋರ್ಸ್‌ ಅಪ್ಲಿಕೇಶನ್‌ ಬಳಸುವುದಕ್ಕೆ ಟ್ರೂ ಕಾಲರ್‌ ಬಳಕೆದಾರರು ಒಂದೇ ಟ್ಯಾಪ್‌ನೊಂದಿಗೆ ಲಾಗಿನ್‌ ಮಾಡಬಹುದು. ಈಗಾಗಲೇ ಟ್ರೂ ಕಾಲರ್‌ ಬಳಸುತ್ತಿರುವವರಿಗೆ ಪ್ರವೇಶ ಸುಲಭವಾಗಿದೆ.

ಬಳಕೆದಾರರು

ಆದರೆ ಹೊಸ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕಾಗುತ್ತದೆ. ಅಲ್ಲದೆ ಮಿಸ್ಡ್ ಕಾಲ್ ಅಥವಾ OTP ಯೊಂದಿಗೆ ವೆರಿಫೈ ಮಾಡಬೇಕು. ಇದೆಲ್ಲ ಪ್ರಕ್ರಿಯೆಗಳು ಮುಗಿದ ನಂತರ ನೀವು ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಪ್ರವೇಶ ಪಡೆದಯಲು ಸಾಧ್ಯವಾಗಲಿದೆ. ಇನ್ನು ಓಪನ್‌ ಡೋರ್ಸ್‌ ಅಪ್ಲಿಕೇಶನ್ ಪ್ರಸ್ತುತ ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರಿಗೆ ಅಗತ್ಯವಿದ್ದರೆ ಇಂಟರ್ಫೇಸ್‌ಗೆ ಹೆಚ್ಚಿನ ಭಾಷೆಗಳನ್ನು ಸೇರಿಸುವುದಕ್ಕೆ ಕೂಡ ಟ್ರೂ ಕಾಲರ್‌ ಅವಕಾಶವನ್ನು ನೀಡಿದೆ.

ಅಪ್ಲಿಕೇಶನ್‌

ಇನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್‌ ಅನ್ನು ಕೂಡ ಪರಿಚಯಿಸಿದೆ. ಇದರಲ್ಲಿ ವಾಯ್ಸ್‌ ಕಾಲ್‌ ಲಾಂಚರ್, SMS ಇನ್‌ಬಾಕ್ಸ್‌ಗಾಗಿ ಪಾಸ್‌ಕೋಡ್ ಲಾಕ್ ಫೀಚರ್ಸ್‌ಗಳು ಸೇರಿವೆ. ವಾಯ್ಸ್‌ ಕಾಲ್‌ ಲಾಂಚರ್ ಫೀಚರ್ಸ್‌ ಪರಿಚಯಿಸಿದೆ ಟ್ರೂ ಕಾಲರ್‌ ವಾಯ್ಸ್‌ನಲ್ಲಿ ಮಾತನಾಡಲು ಲಭ್ಯವಿರುವ ನಿಮ್ಮ ಎಲ್ಲಾ ಸಂಪರ್ಕಗಳನ್ನು ಹುಡುಕಲು ಸುಲಭವಾಗಲಿದೆ. ಇನ್ನು ಈ ಹೊಸ ಫೀಚರ್ಸ್‌ VoIP ಆಧಾರಿತ ಕರೆಯಲ್ಲಿ ಕಾರ್ಯನಿರ್ವಹಿಸಲಿದೆ.

ಇದಲ್ಲದೆ

ಇದಲ್ಲದೆ ಪಾಸ್ಕೋಡ್ ಲಾಕ್ ಫೀಚರ್ಸ್‌ ಟೆಕ್ಸ್ಟ್‌ ಮೆಸೇಜ್‌ಗಳ ಗೌಪ್ಯತೆ ಕಾಪಾಡುವ ಫೀಚರ್ಸ್‌ ಆಗಿದೆ. ಟೆಕ್ಸ್ಟ್‌ ಮೆಸೇಜ್‌ ಮಾಡುವವರು ಸೆಕ್ಯುರಿಟಿಗಾಗಿ ಪಾಸ್ಕೋಡ್ ಲಾಕ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಜೊತೆಗೆ ಇಂಪ್ರೂವ್ಡ್‌ ಕಾಲ್‌ ರೀಸನ್ ಫೀಚರ್ಸ್‌ ಮೂಲಕ ನೀವು ಕಾಲ್‌ ಅನ್ನು ಸ್ವೀಕರಿಸದಿದ್ದರೆ ಮತ್ತು ಇನ್ನೂ ಫೋನ್ ರಿಂಗ್ ಆಗುತ್ತಿದ್ದರೆ, ಕರೆ ಮಾಡಿದವರಿಗೆ ತತ್‌ಕ್ಷಣ ಕರೆಗೆ ಕಾರಣವನ್ನು ಸೇರಿಸಲು ಅನುಮತಿಸಲಿದೆ. ಇದಲ್ಲದೆ ಬಳಕೆದಾರರು ಯಾವುದೇ ಕಸ್ಟಮೈಸ್ ಮಾಡಿದ ಕರೆ ಕಾರಣವನ್ನು ಸಹ ಟೈಪ್ ಮಾಡಬಹುದು.

Best Mobiles in India

Read more about:
English summary
Open Door Is Another Conversation App Similar To Clubhouse By Trucaller

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X