ಭಾರತದಲ್ಲಿ ಹೊಸ ಇಯರ್‌ಬಡ್ಸ್ ಪರಿಚಯಿಸಿದ ಒಪ್ಪೋ! 28 ಗಂಟೆಗಳ ಬ್ಯಾಕ್‌ಅಪ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಒಂದಾದ ಒಪ್ಪೋ ಭಿನ್ನ ಮಾದರಿಯ ಟೆಕ್‌ ಗ್ಯಾಜೆಟ್ಸ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇಯರ್‌ಬಡ್ಸ್‌ಗಳ ಮೂಲಕ ಕೂಡ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 1,799 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಇಯರ್‌ಬಡ್ಸ್‌

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ಹೊಸ ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌ ಬಿಡಗಡೆ ಮಾಡಿದೆ. ಈ ಹೊಸ ಇಯರ್‌ಬಡ್ಸ್‌ ಎನ್‌ಕೋ ಬಡ್ಸ್‌ನ ಉತ್ತರಾಧಿಕಾರಿಯಾಗಿದ್ದು, ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಇನ್ನು ಈ ಇಯರ್‌ಬಡ್ಸ್‌ 28 ಗಂಟೆಗಳವರೆಗೆ ಬ್ಯಾಕಪ್ ಅನ್ನು ನೀಡಲಿದೆ ಎಂದು ಒಪ್ಪೋ ಕಂಪನಿ ಹೇಳಿಕೊಂಡಿದೆ. ಜೊತೆಗೆ ಈ ಇಯರ್‌ಬಡ್ಸ್‌ ಇದೇ ಆಗಸ್ಟ್ 31 ರಿಂದ ಒಪ್ಪೋ ಸ್ಟೋರ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಆಗಲಿದೆ. ಹಾಗಾದ್ರೆ ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ ಎನ್ಕೋ ಬಡ್ಸ್‌ 2

ಒಪ್ಪೋ ಎನ್ಕೋ ಬಡ್ಸ್‌ 2 ವಿಶೇಷ ವಿನ್ಯಾಸವನ್ನು ಹೊಂದಿದ್ದು, ಯುವಜನರ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದು ಡಾಲ್ಬಿ ಅಟ್ಮಾಸ್ ಜೊತೆಗೆ ಎನ್ಕೋ ಲೈವ್ ಸ್ಟಿರಿಯೊ ಸೌಂಡ್ ಎಫೆಕ್ಟ್‌ಗಳನ್ನು ಕೂಡ ಪಡೆದುಕೊಂಡಿದೆ. ಇದು ಬೇಸ್‌ ಸೌಂಡ್‌, ಬಾಸ್ ಬೂಸ್ಟ್ ಮತ್ತು ಕ್ಲಿಯರ್ ವೋಕಲ್ಸ್ ಎನ್ನುವ ಮೂರು ರೀತಿಯ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ IPX4-ರೇಟಿಂಗ್ ಅನ್ನು ಹೊಂದಿದ್ದು, ವರ್ಕೌಟ್‌ಗಳು ಮತ್ತು ಸ್ಪ್ಲಾಶ್‌ಗಳ ಸಮಯದಲ್ಲಿ ಬೆವರು ವಿರುದ್ದ ಪ್ರಮಾಣೀಕರಿಸುತ್ತದೆ.

ಇಯರ್‌ಬಡ್ಸ್‌

ಈ ಇಯರ್‌ಬಡ್ಸ್‌ ಲೋ-ಲೇಟೆನ್ಸಿ ಬ್ಲೂಟೂತ್ 5.2 ಟ್ರಾನ್ಸ್‌ಮಿಷನ್‌ ಅನ್ನು ಒಳಗೊಂಡಿದೆ. ಇದು ಹೆಚ್ಚು ಸ್ಥಿರವಾದ ಕನೆಕ್ಟಿವಿಟಿಯನ್ನು ಶಕ್ತಗೊಳಿಸಲಿದ್ದು, ಮೊಬೈಲ್ ಫೋನ್‌ಗಳನ್ನು ಬಳಸುವಾಗ ಬ್ಲೂಟೂತ್ ಲೇಟೆನ್ಸಿ ಮಟ್ಟವು ಅತ್ಯಧಿಕವಾಗಿರಲಿದೆ. ಅಂದರೆ ಬಳಕೆದಾರರು ಗೇಮಿಂಗ್ ಮಾಡುವಾಗ ವೈರ್ಡ್ ಹೆಡ್‌ಫೋನ್‌ಗಳಂತೆಯೇ ಆಡಿಯೊ ಮತ್ತು ವೀಡಿಯೊ ಸಿಂಕ್ರೊನೈಸೇಶನ್ ಅನ್ನು ಅನುಭವಿಸಬಹುದಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳಲ್ಲಿ ಆಡಿಯೋ ಡ್ರೈವರ್‌ಗಳು ಟೈಟಾನಿಯಂ ಡಯಾಫ್ರಾಮ್ ಲೇಪನವನ್ನು ಪಡೆದಿವೆ.

ಒಪ್ಪೋ

ಇನ್ನು ಒಪ್ಪೋ ಎನ್ಕೋ ಬಡ್ಸ್‌ 2 ಸಿಂಗಲ್‌ ಚಾರ್ಜ್‌ನಲ್ಲಿ ಏಳು ಗಂಟೆಗಳ ಆಲಿಸುವಿಕೆಯನ್ನು ಬೆಂಬಲಿಸಲಿದೆ. ಇದು 28 ಗಂಟೆಗಳ ಬ್ಯಾಕ್‌ಅಪ್‌ ಅನ್ನು ನೀಡಲಿದ್ದು, 10 ನಿಮಿಷಗಳ ಚಾರ್ಜ್‌ನೊಂದಿಗೆ 1 ಗಂಟೆಯ ಬ್ಯಾಕಪ್ ಅನ್ನು ಒದಗಿಸಬಹುದು ಎಂದು ಒಪ್ಪೋ ಹೇಳಿಕೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಮೂಲಕ ಕರೆ ಮಾಡುವುದಕ್ಕೆ ಒಪ್ಪೋ AI ಆಳವಾದ ಶಬ್ದ ರದ್ದತಿ ಅಲ್ಗಾರಿದಮ್‌ಗಳನ್ನು ಒಳಗೊಂಡಿದೆ. ಇನ್ನು ಈ ಬಡ್ಸ್‌ DNN ಆಧಾರಿತ ಬೈನೌರಲ್ ಶ್ರವಣವನ್ನು ಅನುಕರಿಸುತ್ತದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ ಎನ್ಕೋ ಬಡ್ಸ್‌ 2 ಇಯರ್‌ಬಡ್ಸ್‌ ಭಾರತದಲ್ಲಿ 1,799 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಫ್ಲಿಪ್‌ಕಾರ್ಟ್‌ ಮತ್ತು ಒಪ್ಪೋ ಸ್ಟೋರ್‌ಗಳಲ್ಲಿ ಆಗಸ್ಟ್ 31 ರಿಂದ ಸೇಲ್‌ ಆಗಲಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಒಪ್ಪೋ

ಇದಲ್ಲದೆ ಒಪ್ಪೋ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಒಪ್ಪೋ A77 4G ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಮತ್ತು ವಾಟರ್‌ಡ್ರಾಪ್ ನಾಚ್‌ ಅನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಒಪ್ಪೋ A77 4G ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದು LED ಫ್ಲ್ಯಾಶ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ಫೀಚರ್ಸ್‌ ಕೂಡ ಸೇರಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಸ್ಕೈ ಬ್ಲೂ ಮತ್ತು ಸನ್‌ಸೆಟ್ ಆರೆಂಜ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Oppo has launched new Enco Buds2 earbuds in India: Price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X