ಫೆಬ್ರವರಿ 12 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಓಪ್ಪೋ ಕೆ1 ಫೋನ್ ಸೇಲ್ ಆರಂಭ

|

ಓಪ್ಪೋ ಹೊಸದಾಗಿ ಮಿಡ್ ರೇಂಜಿನ ಸ್ಮಾರ್ಟ್ ಪೋನ್ ನ್ನು ಭಾರತದಲ್ಲಿ ಪರಿಚಯಿಸಿದೆ.ಅದರ ಹೆಸರೇ ಓಪ್ಪೋ ಕೆ1. 16,990 ರುಪಾಯಿ ಬೆಲೆಯನ್ನು ಈ ಫೋನಿಗೆ ನಿಗದಿಗೊಳಿಸಲಾಗಿದೆ. ಈ ಫೋನಿನ ಪ್ರಮುಖ ಹೈಲೆಟ್ ಎಂದರೆ ಇನ್- ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್, 25ಎಂಪಿ ಸೆಲ್ಫೀ ಕ್ಯಾಮರಾ ಮತ್ತು 3600 ಬ್ಯಾಟರಿ.

ಫೆಬ್ರವರಿ 12 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಓಪ್ಪೋ ಕೆ1 ಫೋನ್ ಸೇಲ್ ಆರಂಭ

ಬಿಡುಗಡೆಯ ಸಂದರ್ಬದಲ್ಲಿ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಈ ಸ್ಮಾರ್ಟ್ ಫೋನ್ ಫೆಬ್ರವರಿ 12 ರ ಮಧ್ಯಾಹ್ನ 12 ಘಂಟೆಯಿಂದ ಇ-ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಿರಲಿದೆ ಎಂಬುದನ್ನು ತಿಳಿಸಿದೆ.

ಓಪ್ಪೋ ಕೆ1 ಬಿಡುಗಡೆಯ ಆಫರ್ ಗಳು

ಓಪ್ಪೋ ಕೆ1 ಬಿಡುಗಡೆಯ ಆಫರ್ ಗಳು

ಬಿಡುಗಡೆಯ ಪ್ರಯುಕ್ತ ಖರೀದಿಸುವವರಿಗೆ 10% ರಿಯಾಯಿತಿಯನ್ನು ಸಿಟಿಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ ನೀಡಲಾಗುತ್ತದೆ. ಕೇವಲ 1 ರುಪಾಯಿಗೆ ಗ್ಯಾರಂಟಿ ಕಾರ್ಡ್ ನ್ನು ಓಪ್ಪೋ ಕೆ1 ಗೆ ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗುತ್ತದೆ.

499 ರುಪಾಯಿಗೆ ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ನ್ನು ಫ್ಲಿಪ್ ಕಾರ್ಟ್ ನೀಡುತ್ತದೆ. 3 ರಿಂದ 6 ತಿಂಗಳ ವ್ಯಾಲಿಡಿಟಿ ಇರುವ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಇದೆ ಮತ್ತು ಇದರ ಆರಂಭಿಕ ಕಂತು ರುಪಾಯಿ 2,832 ಆಗಿರುತ್ತದೆ.

ಓಪ್ಪೋ ಕೆ1 ವೈಶಿಷ್ಟ್ಯತೆಗಳು

ಓಪ್ಪೋ ಕೆ1 ವೈಶಿಷ್ಟ್ಯತೆಗಳು

ಈ ಸ್ಮಾರ್ಟ್ ಫೋನ್ 6.4-ಇಂಚಿನ ಫುಲ್ HD+ AMOLED ಸ್ಕ್ರೀನ್ ನ್ನು ಹೊಂದಿದೆ. ಡಿಸ್ಪ್ಲೇಯಲ್ಲಿ 19.5:9 ಅನುಪಾತವಿದ್ದು1080x2340 ಪಿಕ್ಸಲ್ ರೆಸಲ್ಯೂಷನ್ ಮತ್ತು 91 ಶೇಕಡಾ ಸ್ಕ್ರೀನ್ ಟು ಬಾಡಿ ರೇಷ್ಯೂ ಇರಲಿದೆ.ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ನ್ನು ಇದು ಹೊಂದಿದೆ ಮತ್ತು ಮೇಲ್ಬಾಗದಲ್ಲಿ ವಾಟರ್ ಡ್ರಾಪ್ ನಾಚ್ ನ್ನು ಹೊಂದಿದೆ.

ಓಪ್ಪೋ ಕೆ1 ಕಲರ್ ಓಎಸ್ 5.2 ಆಪರೇಟಿಂಗ್ ಸಿಸ್ಟಮ್ ನ್ನು ಒಳಗೊಂಡಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 AIE ಪ್ರೊಸೆಸರ್ ಇದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಕ್ಯಾಮರಾ

ಕ್ಯಾಮರಾ

ಕ್ಯಾಮರಾ ವಿಚಾರದಲ್ಲಿ ಇದು 25ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ವನ್ನು ಸೆಲ್ಫೀ ತೆಗೆದುಕೊಳ್ಳುವುದಕ್ಕಾಗಿ ಅಳವಡಿಸಲಾಗಿದೆ. ಡುಯಲ್ ಲೆನ್ಸ್ ಸಟ್ ಅಪ್ ಹಿಂಭಾಗದಲ್ಲಿದ್ದು 16 ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 2 ಮೆಗಾಪಿಕ್ಸಲ್ ನ ಸೆಕೆಂಡರಿ ಕ್ಯಾಮರಾ ಜೊತೆಗೆ LED ಫ್ಲ್ಯಾಶ್ ವ್ಯವಸ್ಥೆ ಹೊಂದಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಈ ಡಿವೈಸ್ ನಲ್ಲಿ 4G VoLTE, ವೈ-ಫೈ i 802.11 a/b/g/n/ac, ಬ್ಲೂಟೂತ್ 5.0, GPS/ A-GPS, ಮತ್ತು GLONASS ಇದೆ. ಓಪ್ಪೋ ಕೆ1 3600mAh ಬ್ಯಾಟರಿ ಇದ್ದು ಎರಡು ಬಣ್ಣಗಳ ವೇರಿಯಂಟ್ ನಲ್ಲಿ ಫೋನ್ ಲಭ್ಯವಾಗುತ್ತದೆ. ಆಸ್ಟ್ರಲ್ ಬ್ಲೂ(ನೀಲಿ) ಮತ್ತು ಪಿಯಾನೋ ಬ್ಲಾಕ್(ಕಪ್ಪು) ವರ್ಣಗಳಲ್ಲಿ ಸಿಗುತ್ತದೆ.

Best Mobiles in India

English summary
Oppo K1 with 25MP front camera will go on sale via Flipkart on February 12

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X