ಒಪ್ಪೋ ರೆನೋ 8 ಫೋನ್‌ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್‌ ಆಯ್ಕೆ ಎಷ್ಟು?

|

ಒಪ್ಪೋ ಸಂಸ್ಥೆಯ ಇತ್ತೀಚಿನ ಒಪ್ಪೋ ರೆನೋ 8 ಸರಣಿ (Oppo Reno 8) ಸರಣಿಯು ಭಾರತದಲ್ಲಿ ಇದೇ ಜುಲೈ 18 ರಂದು ಎಂಟ್ರಿ ಕೊಡಲಿದೆ. ಒಪ್ಪೋ ಸಂಸ್ಥೆಯ ಈ ಸರಣಿಯು ರೆನೋ 8 ಮತ್ತು ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ. ರೆನೋ 8 ಸರಣಿಯೊಂದಿಗೆ ಒಪ್ಪೋ ಸಂಸ್ಥೆಯು ಒಪ್ಪೊ ಪಾಡ್‌ ಏರ್‌ (Oppo Pad Air) ಡಿವೈಸ್‌ ಅನ್ನು ಸಹ ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಶಿಮ್ಮರ್

ಒಪ್ಪೋ ರೆನೋ 8 ಸರಣಿ ಬಿಡುಗಡೆ ದಿನಾಂಕದ ಮಾಹಿತಿಯನ್ನು ಕಂಪನಿಯು ಟ್ವೀಟ್ ಮೂಲಕ ಹಂಚಿಕೊಂಡಿದೆ. ಇದಲ್ಲದೆ, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಸಹ ರೆನೋ 8 ಸರಣಿಗಾಗಿ ವೆಬ್ ಪುಟವನ್ನು ಮಾಡಿದೆ. ರೆನೋ 8 ಫೋನ್ ಶಿಮ್ಮರ್ ಬ್ಲ್ಯಾಕ್ ಮತ್ತು ಶಿಮ್ಮರ್ ಗೋಲ್ಡ್ ಬಣ್ಣದ ರೂಪಾಂತರಗಳನ್ನು ಹೊಂದಿರುತ್ತದೆ. ರೆನೋ 8 ಪ್ರೊ ರೂಪಾಂತರವು ಹಸಿರು ಮತ್ತು ಶೈನಿಂಗ್ ಕಪ್ಪು ಬಣ್ಣದ ರೂಪಾಂತರಗಳನ್ನು ಹೊಂದಿರುತ್ತದೆ.

ಡಿಸ್‌ಪ್ಲೇ

ಈ ಸರಣಿಯು ಒಪ್ಪೋ ರೆನೋ 8 ಮತ್ತು ರೆನೋ 8 ಪ್ರೊ ಈ ಎರಡು ಫೋನ್‌ಗಳು AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹಾಗೆಯೇ 12GB RAM ಮತ್ತು 256GB ಆಂತರಿಕ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿವೆ. ಇನ್ನು ಒಪ್ಪೋ ರೆನೋ 8 ಪ್ರೊ ಫೋನ್ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇನ್ನುಳಿದಂತೆ ಈ ಒಪ್ಪೋ ರೆನೋ 8 ಮತ್ತು ರೆನೋ 8 ಪ್ರೊ ಫೋನಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ರೆನೋ 8 ಪ್ರೊ ಫೀಚರ್ಸ್‌

ಒಪ್ಪೋ ರೆನೋ 8 ಪ್ರೊ ಫೀಚರ್ಸ್‌

ಒಪ್ಪೋ ರೆನೋ 8 ಪ್ರೊ ಈ ಫೋನ್ 2400 × 1080 ಪಿಕ್ಸೆಲ್‌ಗಳೊಂದಿಗೆ 120Hz ರೀಫ್ರೇಶ್‌ ರೇಟ್‌ ನೊಂದಿಗೆ 6.62 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಮತ್ತು 92% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಇದು 2.4GHz ವರೆಗಿನ ಗಡಿಯಾರದ ವೇಗದೊಂದಿಗೆ ಸ್ನ್ಯಾಪ್‌ಡ್ರಾಗನ್ 7 ಜೆನ್‌ 1 SoC ನಿಂದ ಚಾಲಿತವಾಗಿದೆ. ಇದು 12 GB RAM ಮತ್ತು 256 GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.

ಒಪ್ಪೋ ರೆನೋ 8 ಫೀಚರ್ಸ್‌

ಒಪ್ಪೋ ರೆನೋ 8 ಫೀಚರ್ಸ್‌

ಒಪ್ಪೋ ರೆನೋ 8 ಈ ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಮತ್ತು 90Hz ಸ್ಕ್ರೀನ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು 800 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಹೊಂದಿದೆ ಮತ್ತು ಪರದೆಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಇದು 12GB RAM ಮತ್ತು 256 GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಅಲ್ಲದೇ ಮೀಡಿಯಾ ಟೆಕ್‌ನಿಂದ ಡೈಮೆನ್ಸಿಟಿ 1300 SoC ನಿಂದ ಫೋನ್ ಚಾಲಿತವಾಗಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಜೊತೆಗೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವೈ-ಫೈ 6, ಬ್ಲೂಟೂತ್ 5.2, ಎನ್‌ಎಫ್‌ಸಿ, ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒಪ್ಪೋ ರೆನೋ 8 ಫೋನಿನ ಬೆಲೆಯು 30,000 ರಿಂದ 33,000 ರೂ. ಪ್ರೈಸ್‌ಟ್ಯಾಗ್‌ನ ಆಸುಪಾಸಿನಲ್ಲಿ ಕಾಣಿಸಿಕೊಳ್ಳಲಿದೆ. ಅದೇ ರೀತಿ, ಒಪ್ಪೋ ರೆನೋ 8 ಪ್ರೊ ಫೋನ್ ಮಾರುಕಟ್ಟೆಯಲ್ಲಿ ಸುಮಾರು 45,000 ರೂ.ಗಳ ಆಸುಪಾಸಿನಲ್ಲಿ ಲಭ್ಯವಾಗಲಿದೆ. ಒಪ್ಪೋ ಸಂಸ್ಥೆಯು ಇನ್ನು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಒಪ್ಪೋ A57 (2022) ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ A57 (2022) ಸ್ಮಾರ್ಟ್‌ಫೋನ್‌ ಫೀಚರ್ಸ್‌

ಒಪ್ಪೋ A57 (2022) ಸ್ಮಾರ್ಟ್‌ಫೋನ್‌ ಫೀಚರ್ಸ್‌

ಒಪ್ಪೋ A57 (2022) ಸ್ಮಾರ್ಟ್‌ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಮೀಡಿಯಾಟೆಕ್‌ ಹಿಲಿಯೋ G35 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮೂಲಕ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.

ಕನೆಕ್ಟಿವಿಟಿ

ಇದಲ್ಲದೆ ಕ್ಯಾಮೆರಾದಲ್ಲಿ ಎಲ್ಇಡಿ ಫ್ಲ್ಯಾಷ್, ಎಚ್‌ಡಿಆರ್, ಪನೋರಮಾ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 33W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಮತ್ತು 3.mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಭಾರತದಲ್ಲಿ ಏಕೈಕ 4GB RAM ಮತ್ತು 64GB ಇನ್‌ಬಿಲ್ಟ್ ಸ್ಟೋರೇಜ್ ರೂಪಾಂತರಕ್ಕೆ 13,999ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಪ್ರಸ್ತುತ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ಲೋಯಿಂಗ್ ಗ್ರೀನ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Its official Oppo Reno 8 series will make its debut in India on July 18.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X