Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?

|

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಒಪ್ಪೋ ರೆನೋ 8T 5G ಅಂತಿಮವಾಗಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಡ್ರ್ಯಾಗನ್ ಟ್ರೈಲ್ ಸ್ಟಾರ್‌ 2 ಪ್ರೊಟೆಕ್ಷನ್‌ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ವೈಡ್‌ವೈನ್‌ L1 ಪ್ರಮಾಣೀಕರಣವನ್ನು ಒಳಗೊಂಡಿರುವುದು ತುಂಬಾನೇ ವಿಶೇಷವಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡೈನಾಮಿಕ್‌ ಕಂಪ್ಯೂಟಿಂಗ್‌ ಇಂಜಿನ್‌ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒಪ್ಪೋ ರೆನೋ 8T 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಒಪ್ಪೋ ರೆನೋ 8T 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ?

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಮೈಕ್ರೋ-ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಡ್ರ್ಯಾಗನ್‌ಟ್ರೈಲ್‌-ಸ್ಟಾರ್‌2 ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, ವೈಡ್‌ವೈನ್‌ L1 ಪ್ರಮಾಣೀಕರಣವನ್ನು ಪಡೆದಿದೆ.

ಒಪ್ಪೋ ರೆನೋ 8T 5G ಪ್ರೊಸೆಸರ್‌ ಯಾವುದು?

ಒಪ್ಪೋ ರೆನೋ 8T 5G ಪ್ರೊಸೆಸರ್‌ ಯಾವುದು?

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ColorOS 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟತ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ. ಇದು 8GB ವರೆಗೆ ಹೆಚ್ಚುವರಿ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡಿದೆ.

ಒಪ್ಪೋ ರೆನೋ 8T 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಒಪ್ಪೋ ರೆನೋ 8T 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾವು HDR, ಬೊಕೆ ಫ್ಲೇರ್ ಪೋರ್ಟ್ರೇಟ್ ಮತ್ತು ಡ್ಯುಯಲ್-ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಒಪ್ಪೋ ರೆನೋ 8T 5G ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಒಪ್ಪೋ ರೆನೋ 8T 5G ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಈ ಫೋನ್‌ ಅನ್ನು ನೀವು ಕೇವಲ 45 ನಿಮಿಷಗಳಲ್ಲಿ 0 ರಿಂದ 100% ಬ್ಯಾಟರಿ ಚಾರ್ಜ್‌ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5 ಮತ್ತು ಬ್ಲೂಟೂತ್ 5.1 ವಾಯರ್‌ಲೆಸ್ ಸಂಪರ್ಕವನ್ನು ಬೆಂಬಲಿಸಲಿದೆ.

ಒಪ್ಪೋ ರೆನೋ 8T 5G ಬೆಲೆ ಮತ್ತು ಲಭ್ಯತೆ

ಒಪ್ಪೋ ರೆನೋ 8T 5G ಬೆಲೆ ಮತ್ತು ಲಭ್ಯತೆ

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 29,999ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಇದೇ ಫೆಬ್ರವರಿ 10 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಇತರ ರಿಟೇಲ್‌ ಸ್ಟೋರ್‌ಗಳ ಮೂಲಕ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸನ್‌ರೈಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
This smartphone features a 6.7-inch micro-curved AMOLED screen with a full-HD+ resolution, 120Hz refresh rate, and Dragontrail-Star2 protection.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X