ಒಪ್ಪೋ ಸ್ಮಾರ್ಟ್‌ವಾಚ್‌ SE ಬಿಡುಗಡೆ!..10 ದಿನ ಬ್ಯಾಟರಿ ಬ್ಯಾಕ್‌ಅಪ್‌!

|

ಒಪ್ಪೋ ಸಂಸ್ಥೆಯು ಈಗಾಗಲೇ ಒಪ್ಪೋ ವಾಚ್ 3 ಮತ್ತು ವಾಚ್ 3 ಪ್ರೊ ಸ್ಮಾರ್ಟ್‌ವಾಚ್‌ಗಳಿಂದ ಗ್ರಾಹಕರ ಗಮನ ಸೆಳೆದಿದ್ದು, ಇದೀಗ ನೂತನವಾಗಿ ಒಪ್ಪೋ ಸ್ಮಾರ್ಟ್‌ವಾಚ್‌ SE (Oppo Watch SE) ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ವಾಚ್‌ eSIM ಸಪೋರ್ಟ್‌, ಆಲ್ವೇಸ್‌ ಆನ್‌ ಡಿಸ್‌ಪ್ಲೇ, ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ನಂತಹ ಕೆಲವೊಂದು ಉಪಯುಕ್ತ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಒಪ್ಪೋ ಸ್ಮಾರ್ಟ್‌ವಾಚ್‌ SE

ಹೌದು, ಒಪ್ಪೋ ಸಂಸ್ಥೆಯು ಹೊಸದಾಗಿ ಒಪ್ಪೋ ಸ್ಮಾರ್ಟ್‌ವಾಚ್‌ SE ಚೀನಾದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ ಆಯತಾಕಾರದ ಡಯಲ್‌ ರಚನೆಯನ್ನು ಹೊಂದಿದ್ದು, ಬಹುತೇಕ ಈ ಹಿಂದಿನ ಮಾದರಿಗಳಂತೆ ಕಂಡುಬರುತ್ತದೆ. ಇನ್ನು ಈ ವಾಚ್‌ 400mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 8GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿರುವುದು ವಿಶೇಷ ಎನಿಸಿದೆ. ಅಲ್ಲದೇ ಈ ವಾಚ್‌ 1GB RAM ಸಪೋರ್ಟ್‌ ಪಡೆದಿದೆ.

SpO2

ಈ ವಾಚ್‌ ಹಾರ್ಟ್‌ ರೇಟ್‌ ಮಾನಿಟರ್‌, SpO2 ಮಾನಿಟರ್‌ ಆಯ್ಕೆಗಳು ಸೇರಿದಂತೆ ಸುಮಾರು 100 ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಪಡೆದಿದೆ. ಅಂದಹಾಗೆ ಬಜೆಟ್‌ ಪ್ರೈಸ್‌ ಮಾದರಿಯ ಸ್ಮಾರ್ಟ್‌ವಾಚ್‌ ಆಗಿದ್ದು, ಇಂಕ್ ಗ್ರೇ ಹಾಗೂ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ ಒಪ್ಪೋ ಸಂಸ್ಥೆಯ ಒಪ್ಪೋ ಸ್ಮಾರ್ಟ್‌ವಾಚ್‌ SE ವಾಚ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ಸ್ಮಾರ್ಟ್‌ವಾಚ್‌ SE ವಾಚ್‌ ಫೀಚರ್ಸ್‌

ಒಪ್ಪೋ ಸ್ಮಾರ್ಟ್‌ವಾಚ್‌ SE ವಾಚ್‌ ಫೀಚರ್ಸ್‌

ಒಪ್ಪೋ ಸ್ಮಾರ್ಟ್‌ವಾಚ್‌ SE ವಾಚ್‌ ಆಯತಾಕಾರದ ಡಯಲ್ ವಿನ್ಯಾಸ ಹೊಂದಿದೆ. ಇದು 372 x 430 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿದ್ದು, 1.75 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಇದು ಆಲ್ವೇಸ್‌ ಆನ್‌ ಮಾದರಿಯ (Always-on display) ಡಿಸ್‌ಪ್ಲೇ ಸಪೋರ್ಟ್‌ ಪಡೆದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸ್ನಾಪ್‌ಡ್ರಾಗನ್ 4100+ SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಹಾಗೆಯೇ ಕಸ್ಟಮ್ Apollo 4s ಕೋ-ಪ್ರೊಸೆಸರ್ ಸೌಲಭ್ಯ ಹೊಂದಿದೆ. ಇದಲ್ಲದೆ ಈ ವಾಚ್‌ 1GB RAM ಮತ್ತು 8GB ಸ್ಟೋರೇಜ್ ಆಯ್ಕೆಯನ್ನು ಸಹ ಒಳಗೊಂಡಿದ್ದು, ColorOS ಬೆಂಬಲ ಇದೆ.

ಹೃದಯ

ಈ ಸ್ಮಾರ್ಟ್ ವಾಚ್ 24 ಗಂಟೆಗಳ ಹೃದಯ ಬಡಿತ ಟ್ರ್ಯಾಕಿಂಗ್, SpO2 ಮಾನಿಟರಿಂಗ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಒತ್ತಡದ ಮೇಲ್ವಿಚಾರಣೆಯ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಈ ವಾಚ್ ಸುಮಾರು 100 ಕ್ಕೂ ಅಧಿಕ ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ ಈ ಸ್ಮಾರ್ಟ್ ವಾಚ್ 400mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಲೈಟ್ ಸ್ಮಾರ್ಟ್ ಮೋಡ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ ಸುಮಾರು 10 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ.

ಸ್ಮಾರ್ಟ್ ಮೋಡ್‌

ಅದೇ ರೀತಿ ಫುಲ್‌ ಸ್ಮಾರ್ಟ್ ಮೋಡ್‌ನಲ್ಲಿ ಸುಮಾರು 3 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ ಎಂದು ಸಂಸ್ಥೆಯ ಹೇಳಿಕೊಂಡಿದೆ. ಬ್ಯಾಟರಿಗೆ ಪೂರಕವಾಗಿ VOOC 2.0 ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಬರೀ 10 ನಿಮಿಷ ಚಾರ್ಜ್ ಮಾಡಿದರೆ, ಸುಮಾರು ಒಂದು ದಿನದ ಬ್ಯಾಕ್‌ಅಪ್‌ ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ವಾಚ್‌ನ ಪ್ರಮುಖ ಆಕರ್ಷಕಯೆಂದರೆ ಇದು eSIM ಮತ್ತು NFC ಸಪೋರ್ಟ್ ಪಡೆದಿದೆ.

ಮಾಡಬಹುದಾದ

ಇದರಲ್ಲಿ ಕಾಲ್ ಡಯಲ್ ಮಾಡಬಹುದು, ಬೈದು (Baidu) ಮ್ಯಾಪ್‌ ನ್ಯಾವಿಗೇಷನ್ ತೆರೆಯಬಹುದು ಹಾಗೆಯೇ ನಿಮ್ಮ ಫೋನ್ ಅನ್ನು ಸ್ಪರ್ಶಿಸದೆಯೇ ಟ್ಯಾಕ್ಸಿ ಡೈನಾಮಿಕ್ ರಿಮೈಂಡರ್‌ಗಳನ್ನು ಚೆಕ್‌ ಮಾಡಬಹುದಾದ ಸೌಲಭ್ಯಗಳನ್ನು ಪಡೆದಿದೆ. ಅತ್ಯುತ್ತಮ ಬ್ಲೂಟೂತ್ ಸಪೋರ್ಟ್‌ ಇದ್ದು, ಡಿವೈಸ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್ ಮಾಡಬಹುದು.

ಬೆಲೆ ಎಷ್ಟು?

ಬೆಲೆ ಎಷ್ಟು?

ಒಪ್ಪೋ ಸ್ಮಾರ್ಟ್‌ವಾಚ್‌ SE ವಾಚ್‌ ಚೀನಾದಲ್ಲಿ 999 ಯುವಾನ್ (ಭಾರತದಲ್ಲಿ ಅಂದಾಜು 11,427ರೂ) ಬೆಲೆಯಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್ ವಾಚ್ ಇಂಕ್ ಗ್ರೇ ಮತ್ತು ಮಿಸ್ಟ್ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ವಾಚ್‌ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಎನ್ನುವ ಬಗ್ಗೆ ಕಂಪನಿಯು ಸ್ಪಷ್ಟ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
OPPO Watch SE with 10 Days Battery Life Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X