ಒಪ್ಪೋ ಸಂಸ್ಥೆಯು ಇಂಥಾ ನಿರ್ಧಾರ ತೆಗೆದುಕೊಳ್ಳುತ್ತೆ ಅಂತಾ ಯಾರೂ ಊಹಿಸಿರಲಿಲ್ಲ!

|

ಆಪಲ್ ಸಂಸ್ಥೆಯು ಇನ್-ಬಾಕ್ಸ್ ಚಾರ್ಜರ್ ಇಲ್ಲದೆ ಐಫೋನ್‌ಗಳ ಮಾರಾಟ ಮಾಡಲು ಶುರು ಮಾಡಿ ಒಂದು ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿತು. ನಂತರ ಹೊಸ ಐಫೋನ್‌ 12 ಮಾಡೆಲ್‌ ಮಾತ್ರವಲ್ಲದೇ, ಎಲ್ಲಾ ಐಫೋನ್‌ ಮಾದರಿಗಳಿಗೂ ಈ ಪರಂಪರೆ ಅನ್ವಯಿಸುತ್ತದೆ. ಆಪಲ್‌ ಸಂಸ್ಥೆಯ ನಂತರ ಸ್ಯಾಮ್‌ಸಂಗ್ ಮತ್ತು ಗೂಗಲ್ ಅದೇ ಮಾರ್ಗವನ್ನು ಅನುಸರಿಸಿದವು. ಅಷ್ಟೇ ಯಾಕೆ ಇತ್ತೀಚಿಗೆ ನಥಿಂಗ್ ಮೊಬೈಲ್‌ ಸಂಸ್ಥೆಯು ಇದೇ ಹಾದಿ ಹಿಡಿಯಿತು. ಅದರ ಬೆನ್ನಲ್ಲೇ ಇದೀಗ ಒಪ್ಪೋ ಚಾರ್ಜರ್ ಅನ್ನು ಕೈಬಿಡುವ ಹಾದಿಯಲ್ಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌

ಹೌದು, ಮುಂದಿನ ವರ್ಷದ ವೇಳೆಗೆ ಇನ್-ಬಾಕ್ಸ್ ಚಾರ್ಜರ್‌ಗಳನ್ನು ಕೈ ಬಿಡಲು ಒಪ್ಪೋ ಸಂಸ್ಥೆಯು ಕಂಪನಿಯು ಯೋಜಿಸಿದೆ ಎಂದು ಒಪ್ಪೋ ರೆನೋ 8 ಸರಣಿಯ ಯುರೋಪಿಯನ್ ಲಾಂಚ್‌ನಲ್ಲಿ ಒಪ್ಪೋ ಉಪಾಧ್ಯಕ್ಷ ಬಿಲ್ಲಿ ಜಾಂಗ್ ಬಹಿರಂಗಪಡಿಸಿದ್ದಾರೆ ಎಂದು 'ಆಂಡ್ರಾಯ್ಡ್‌ ಪೋಲೀಸ್‌'ನ ಇತ್ತೀಚಿನ ವರದಿ ಸೂಚಿಸುತ್ತದೆ. ಮುಂದಿನ ವರ್ಷದಲ್ಲಿ ಸಂಸ್ಥೆಯು ಕೆಲವು ಉತ್ಪನ್ನಗಳಿಗೆ ಬಾಕ್ಸ್‌ ಜೊತೆಗೆ ಚಾರ್ಜರ್ ನೀಡುವ ವ್ಯವಸ್ಥೆ ತೆಗೆಯುತ್ತೇವೆ ಎಂದು ವರದಿಯ ಪ್ರಕಾರ ಜಾಂಗ್ ಹೇಳಿದ್ದಾರೆ.

ಚಾರ್ಜರ್

ಒಪ್ಪೋ ಸಂಸ್ಥೆಯು ಈ ಕ್ರಮವು ಮಾರುಕಟ್ಟೆ ನಿರ್ದಿಷ್ಟವಾಗಿರಬಹುದು ಎಂದು ವರದಿಯಾಗಿದೆ. ಅಲ್ಲದೇ ಈ ನಿರ್ಧಾರವು ಯಾವ ಪ್ರದೇಶಗಳನ್ನು ಮೊದಲು ಪ್ರಾರಂಭಿಸಲಿದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ತಿಳಿದಿಲ್ಲ. ಹಾಗೆಯೇ ಎಲ್ಲಾ ಒಪ್ಪೋ ಫೋನ್‌ಗಳ ಬಾಕ್ಸ್‌ನಿಂದ ಚಾರ್ಜರ್ ಅನ್ನು ತೆಗೆದುಹಾಕಲಾಗುತ್ತದೆಯೇ ಅಥವಾ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವೇ ಚಾರ್ಜರ್‌ ತೆಗೆದುಹಾಕಲಾಗುತ್ತದೆಯೇ ಎಂಬುದರ ಕುರಿತು ಹೆಚ್ಚಿನ ವಿವರಗಳು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ನಿಮ್ಮ ಫೋನಿಗೆ ಚಾರ್ಜರ್‌ ಇಲ್ಲವೇ?..ಇಲ್ಲಿವೆ ನೋಡಿ ಫಾಸ್ಟ್‌ ಚಾರ್ಜರ್‌ಗಳ ಲಿಸ್ಟ್‌!

ನಿಮ್ಮ ಫೋನಿಗೆ ಚಾರ್ಜರ್‌ ಇಲ್ಲವೇ?..ಇಲ್ಲಿವೆ ನೋಡಿ ಫಾಸ್ಟ್‌ ಚಾರ್ಜರ್‌ಗಳ ಲಿಸ್ಟ್‌!

ನಥಿಂಗ್ ಪವರ್ (45W)
ನಥಿಂಗ್ ಫೋನ್ (1) ಜೊತೆಗೆ ನಥಿಂಗ್ ಪವರ್ (45W) ವೇಗದ ಚಾರ್ಜರ್ ಅನ್ನು ನಥಿಂಗ್ ನೀಡಲ್ಲ. ನಥಿಂಗ್ ಪವರ್ (45W) ಚಾರ್ಜರ್ ನಿಮ್ಮ 33W ವೇಗದ ಚಾರ್ಜಿಂಗ್ ಫೋನಿಗೆ ಉತ್ತಮ ಆಯ್ಕೆಯಾಗಿದೆ. ನಥಿಂಗ್ ಪವರ್ (45W), ಹೆಸರೇ ಸೂಚಿಸುವಂತೆ, 45W ವೇಗದ ಚಾರ್ಜಿಂಗ್ ವೇಗವನ್ನು ಹೊಂದಿದೆ ಮತ್ತು USB PD 3.0 ಪ್ರೋಟೋಕಾಲ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಪವರ್ (45W) ನಥಿಂಗ್ ಫೋನ್ (1) ಅನ್ನು ಶೂನ್ಯದಿಂದ 65 ಪ್ರತಿಶತದವರೆಗೆ ಕೇವಲ 30 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ, ಚಾರ್ಜರ್ ಕ್ವಿಕ್ ಚಾರ್ಜ್ 2.0/3.0/4.0+ ಮತ್ತು USB PD PPS-ಸಕ್ರಿಯಗೊಳಿಸಿದ (ಪ್ರೋಗ್ರಾಮೆಬಲ್ ಪವರ್ ಸಪ್ಲೈ) ಸಾಧನಗಳೊಂದಿಗೆ ಸಹ ಹೊಂದಿಕೊಳ್ಳುತ್ತದೆ.

ಗೂಗಲ್‌ G1000-IN 18W

ಗೂಗಲ್‌ G1000-IN 18W

ಗೂಗಲ್‌ ಪಿಕ್ಸಲ್‌ 6a ಫೋನಿಗೆ ಸರಿಯಾದ ವೇಗದ ಚಾರ್ಜರ್‌ಗಾಗಿ ಹುಡುಕುತ್ತಿದ್ದರೆ, ಗೂಗಲ್‌ನ ಅಧಿಕೃತ ಗೂಗಲ್‌ G1000 IN ಚಾರ್ಜರ್ ಪಿಕ್ಸಲ್‌ 6a ಫೋನ್‌ ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಇದು 3.6A ವೇಗದ ಚಾರ್ಜಿಂಗ್ ವೇಗವನ್ನು ನೀಡುತ್ತದೆ. ಅದಕ್ಕಿಂತ ಹೆಚ್ಚಾಗಿ, ನೀವು ಬಾಕ್ಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಟು ಸಿ ಕೇಬಲ್ ಅನ್ನು ಸಹ ಪಡೆಯುತ್ತೀರಿ. ಕಂಪನಿಯು ಪವರ್ ಅಡಾಪ್ಟರ್ ಪಕೊ, ರಿಯಲ್‌ಮಿ, ಮೊಟೊರೊಲಾ ಮತ್ತು ಇತರೆ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಸ್ಟಫ್‌ಕೂಲ್ ಡ್ಯುಯಲ್ ಪೋರ್ಟ್ ನ್ಯೂಟ್ರಾನ್ 33W GaN ಚಾರ್ಜರ್

ಸ್ಟಫ್‌ಕೂಲ್ ಡ್ಯುಯಲ್ ಪೋರ್ಟ್ ನ್ಯೂಟ್ರಾನ್ 33W GaN ಚಾರ್ಜರ್

ಸ್ಟಫ್‌ಕೂಲ್ ಡ್ಯುಯಲ್ ಪೋರ್ಟ್ ನ್ಯೂಟ್ರಾನ್ 33W ಚಾರ್ಜರ್, GaN (ಗ್ಯಾಲಿಯಮ್ ನೈಟ್ರೈಡ್) ಅನ್ನು ಬಳಸುತ್ತದೆ. ಇದು ಚಾರ್ಜರ್‌ಗಳು ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟ್ ಫ್ಯಾಕ್ಟರ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಡಿಮೆ ಶಾಖವನ್ನು ಉತ್ಪಾದಿಸುವಂತೆ ಮಾಡುತ್ತದೆ. ಇದರರ್ಥ ನ್ಯೂಟ್ರಾನ್ 33W ಅತ್ಯಂತ ಸಾಂದ್ರವಾಗಿರುತ್ತದೆ ಮತ್ತು ಶಕ್ತಿಯ ಸಮರ್ಥವಾಗಿದೆ. ಇದು USB PD 33W ಚಾರ್ಜಿಂಗ್ ವೇಗವನ್ನು ಒದಗಿಸಬಹುದು. ಇದರ ಜೊತೆಗೆ, ಅದರ USB PD PPS 25W ಸಾಮರ್ಥ್ಯವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌, ಗ್ಯಾಲಕ್ಸಿ S21/S22, ಪಿಕ್ಸಲ್‌ 6 ಮತ್ತು ಪಿಕ್ಸಲ್‌ 6 ಪ್ರೊ, ಐಫೋನ್‌ 12 ಮತ್ತು ಐಫೋನ್‌ 13 ಸರಣಿಗಳು ಡಿವೈಸ್‌ಗಳಿಗೆ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ.

Most Read Articles
Best Mobiles in India

English summary
Oppo Will Stop Including its Super-Fast Chargers with some Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X