ಈ ಸಪ್ಟೆಂಬರ್‌ನಲ್ಲಿ ಆರ್ಕುಟ್ ಜಾಲತಾಣ ಮರೆಗೆ

Written By:

ಗೂಗಲ್‌ನ ಪ್ರಥಮ ಸಾಮಾಜಿಕ ಜಾಲತಾಣವಾದ ಆರ್ಕುಟ್ ಅಂತಿಮ ವಿದಾಯ ಹೇಳಲು ಸಜ್ಜಾಗತೊಡಗಿದೆ. ಇತ್ತೀಚಿಗೆ, ಯೂಟ್ಯೂಬ್, ಬ್ಲಾಗರ್ ಮತ್ತು ಗೂಗಲ್ ಪ್ಲಸ್ ಸೇವೆಗಳು ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ ಈ ಸಪ್ಟೆಂಬರ್‌ನಲ್ಲಿ ಆರ್ಕುಟ್ ಅನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ ಎಂದು ಗೂಗಲ್ ತಿಳಿಸಿದೆ.

2004 ಕ್ಕಿಂತಲೂ ಮೊದಲು ತನ್ನ ಸೇವೆಯನ್ನು ಆರಂಭಿಸಿದ್ದ ಆರ್ಕುಟ್ ಫೇಸ್‌ಬುಕ್‌ನೊಂದಿಗೆ ತನ್ನ ಅಸ್ತಿತ್ವವನ್ನು ಕೂಡ ಗುರುತಿಸಿಕೊಂಡಿತ್ತು. ಆದರೆ ಫೇಸ್‌ಬುಕ್ ಆರ್ಕುಟ್‌ಗಿಂತಲೂ ಮುಂದೆ ಹೋಗಿ ಪ್ರಸ್ತುತ 1.28 ಬಿಲಿಯನ್ ಬಳಕೆದಾರರನ್ನು ಪಡೆದುಕೊಂಡು ನಂಬರ್ ಒನ್ ಸ್ಥಾನದಲ್ಲಿದೆ.

ವಿದಾಯ ಹೇಳಲು ಸಜ್ಜಾಗಿರುವ ಆರ್ಕುಟ್ ಜಾಲತಾಣ

ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಟೈಟನ್ ಹತ್ತು ವರ್ಷ ಪ್ರಾಯದ ಆರ್ಕುಟ್‌ಗೆ ವಿದಾಯವನ್ನು ಹಾಡಲಿದ್ದು ಈ ಸಪ್ಟೆಂಬರ್‌ಗೆ ಸಂಪೂರ್ಣವಾಗಿ ಕಣ್ಮುಚ್ಚಲಿದೆ. ನಾವು ಸಪ್ಟೆಂಬರ್ 30, 2014 ಕ್ಕೆ ಆರ್ಕುಟ್ ಅನ್ನು ಮುಚ್ಚಲಿದ್ದು ಅಲ್ಲಿಯವರೆಗೆ, ಪ್ರಸ್ತುತ ಆರ್ಕುಟ್ ಅನ್ನು ಬಳಸುತ್ತಿರುವ ಬಳಕೆದಾರರ ಮೇಲೆ ಇದು ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ಗೂಗಲ್ ಟೇಕ್‌ಔಟ್ ಬಳಸಿಕೊಂಡು ಜನರು ತಮ್ಮ ಪ್ರೊಫೈಲ್ ಮಾಹಿತಿ, ಸಮುದಾಯ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಬಹುದಾಗಿದೆ ಆದರೆ ಹೊಸದಾದ ಆರ್ಕುಟ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಆರ್ಕುಟ್ ಬ್ಲಾಗ್‌ಸ್ಪಾಟ್ ತಿಳಿಸಿದೆ.

ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಮತ್ತು ಬೆಳೆಯುತ್ತಿರುವ ಯೂಟ್ಯೂಬ್, ಬ್ಲಾಗರ್ ಮತ್ತು ಗೂಗಲ್ ಪ್ಲಸ್ ಆರ್ಕುಟ್ ಸ್ಥಾನವನ್ನು ಕಿತ್ತುಕೊಂಡಿದ್ದು ಇದು ಸಾಮಾಜಿಕವಾಗಿ ಹಿಂದುಳಿಯಲು ಕಾರಣವಾಗಿದೆ ಎಂದು ಗೂಗಲ್ ಇಂಜಿನಿಯರ್ ಡೈರೆಕ್ಟರ್ ಪಾಲ್ ಗೋಲ್ಗರ್ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬ್ರೆಝಿಲ್‌ನಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಆರ್ಕುಟ್ ಎರಡು ವರ್ಷಗಳ ಹಿಂದೆಯಷ್ಟೇ ಬಂದ ಫೇಸ್‌ಬುಕ್ ಹೊಡೆತಕ್ಕೆ ಸಿಲುಕಿ ಅಲ್ಲೂ ತನ್ನ ಹಿರಿಮೆಯನ್ನು ಕಳೆದುಕೊಂಡಿತ್ತು. ಗೂಗಲ್ ತನ್ನ ಗೂಗಲ್ ಪ್ಲಸ್ ಸಾಮಾಜಿಕ ನೆಟ್‌ವರ್ಕ್ ಅನ್ನು 2011 ರಲ್ಲಿ ಲಾಂಚ್ ಮಾಡಿದ್ದು ಇದು ನಿಧಾನವಾಗಿ ತನ್ನ ಪರಿಣಾಮವನ್ನು ಇತರ ಸಾಮಾಜಿಕ ತಾಣಗಳಲ್ಲಿ ಬೀರುತ್ತಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot