'ಹಾನರ್' ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು ಫಿದಾ!..ದೀಪಾವಳಿಯಲ್ಲಿ ಹುವಾವೆ ಹವಾ!!

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಿಧಾನವಾಗಿ ಪ್ರಚಲಿತವಾಗುತ್ತಿರುವ ಚೀನಾದ ಮೊಬೈಲ್ ಕಂಪೆನಿ ಹುವಾವೆಯ ಸಹ ಬ್ರ್ಯಾಂಡ್ ಕಂಪೆನಿ ಹಾನರ್, ಈ ಬಾರಿಯ ದೀಪಾವಳಿ ಹಬ್ಬದ ಸಮಯದಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಗಮನಸೆಳೆದಿದೆ. 2017 ನೇ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇ.300 ರಷ್ಟು ಮಾರಾಟ ವ್ಯವಹಾರ ಏರಿಕೆಯಾಗಿದೆ ಮತ್ತು 30 ಮಿಲಿಯನ್ ಆಪ್‌ ಡೌನ್‌ಲೋಡ್ ಆಗಿವೆ ಎಂದು ಕಂಪೆನಿ ಹೇಳಿಕೊಂಡಿದೆ.

ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾ ನಗರಗಳಿಂದ ಹಾನರ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಹಾನರ್ ಸ್ಟೋರ್‌ ಮೂಲಕ ಈ ವಿಶೇಷ ಸಾಧನೆ ನಿರ್ಮಾಣವಾಗಿದೆ ಎಂದು ಹಾನರ್ ಕಂಪೆನಿ ತಿಳಿಸಿದೆ. ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ ಹಾಗೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌ನಲ್ಲಿ ಹಾನರ್ 9ಎನ್, 8ಎಕ್ಸ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗಿವೆ ಎಂದು ತಿಳಿಸಿದೆ.

'ಹಾನರ್' ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು ಫಿದಾ!..ದೀಪಾವಳಿಯಲ್ಲಿ ಹುವಾವೆ ಹವಾ!!

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಹಾನರ್ ಕಂಪೆನಿಗೆ ಮೊಬೈಲ್ ಪ್ರಿಯರು ಮನಸೋಲುತ್ತಿದ್ದಾರೆ. ವಿಶ್ವ ಹಾಗೂ ಚೀನಾ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿರುವ ಹುವಾವೆ ಕಂಪೆನಿ ಈಗ ಹಾನರ್ ಮೂಲಕ ಭಾರತದಲ್ಲೂ ಹವಾ ಸೃಷ್ಟಿಸುತ್ತಿರುವುದು ಇದರಿಂದ ತಿಳಿದುಬಂದಿದೆ. ಇತ್ತೀಚಿಗಷ್ಟೇ ಬಿಡುಗಡೆಯಾದ 'ಹಾನರ್ 8ಎಕ್ಸ್' ಹಾನರ್ ಸ್ಮಾರ್ಟ್‌ಫೋನ್‌ಗಳಲ್ಲೇ ಬೆಸ್ಟ್ ಸೆಲ್ಲರ್ ಸ್ಮಾರ್ಟ್‌ಫೋನ್ ಆಗಿರುವುದು ಇದಕ್ಕೆ ಸಾಕ್ಷಿ ಎನ್ನಬಹುದು.

'ಹಾನರ್' ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು ಫಿದಾ!..ದೀಪಾವಳಿಯಲ್ಲಿ ಹುವಾವೆ ಹವಾ!!

ಇತ್ತೀಚಿಗಷ್ಟೇ ಹತ್ತಾರು ಸ್ಮಾರ್ಟ್‌ಪೋನ್‌ಗಳು ಲಾಂಚ್ ಆದರೂ ಕೂಡ ಭಾರತದಲ್ಲಿ 'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನ್ ಬಿಡುಗಡೆಯಾದದ್ದು ವಿಶೇಷವೆನಿತ್ತು. ನಾವು ನೀಡುವ ಬೆಲೆಗೂ ಮೀರಿದ ಫೀಚರ್ಸ್, ಅತ್ಯುತ್ತಮ ವಿನ್ಯಾಸದ ಮೂಲಕ ಮೊಬೈಲ್‌ ಪ್ರಿಯರನ್ನು ಕಾಯ್ದಿರಿಸಿತ್ತು. ಹಾಗಾಗದರೆ, 6.5-ಇಂಚಿನ ಪುಲ್ HD+ ಡಿಸ್ಪ್ಲೇ, 1080x2340 ಪಿಕ್ಸಲ್ ರೆಸಲ್ಯೂಷನ್, 20ಎಂಪಿ ಪ್ರೈಮರಿ ಸೆನ್ಸರ್ ಕ್ಯಾಮೆರಾಗಳಂತಹ ಫೀಚರ್ಸ್ ಹೊಂದಿರುವ'ಹಾನರ್ 8ಎಕ್ಸ್' ನಿಮ್ಮ ಖರೀದಿಗೆ ಬೆಸ್ಟ್ ಸ್ಮಾರ್ಟ್‌ಫೋನ್ ಆಗಬಹುದೇಕೆ ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.

ರೋಮಾಂಚಕ ಎಲ್‌ಸಿಡಿ ಡಿಸ್‌ಪ್ಲೇ

ರೋಮಾಂಚಕ ಎಲ್‌ಸಿಡಿ ಡಿಸ್‌ಪ್ಲೇ

ಹಾನರ್ 8X ನಲ್ಲಿರುವ ಎಲ್‌ಸಿಡಿ ಡಿಸ್‌ಪ್ಲೇ ಅತ್ಯಂತ ರೋಮಾಂಚಕ ಮತ್ತು ಜೀವಂತವಾಗಿದೆ. ಪೂರ್ಣ ಹೈ ಡೆಫಿನಿಷನ್ರೆಸೊಲ್ಯೂಶನ್ ಅನ್ನು ಬೆಂಬಲಿಸುವ ಮತ್ತು 85% ವಿಶಾಲವಾದ ಬಣ್ಣದ ಗ್ಯಾಮಟ್ ಹೊಂದಿರುವ ಡಿಸ್‌ಪ್ಲೇ, ವೀಡಿಯೊ ವರ್ಧನೆಯ ತಂತ್ರಜ್ಞಾನದೊಂದಿಗೆ ಸಂಯೋಜಿತವಾಗಿದೆ. ವೀಡಿಯೊಗಳು ಮತ್ತು ಸಿನೆಮಾಗಳ ಸ್ಪಷ್ಟವಾಗಿ ಮತ್ತು ಹೆಚ್ಚು ವಿವರವಾದ ವೀಕ್ಷಣೆಯನ್ನು ನೀಡುತ್ತದೆ. ನೀವು ಆಡುವ ಆಟಗಳಲ್ಲಿ ಪ್ರತಿ ನಿಮಿಷದ ವಿವರಣೆಯನ್ನು ಮತ್ತು ಸ್ಮಾರ್ಟ್‌ಪೋನಿನಲ್ಲಿ ನೀವು ಸ್ಟ್ರೀಮ್ ಮಾಡಿದ ಪೂರ್ಣ HD ವೀಡಿಯೊಗಳನ್ನು ನೋಡಲು ಸಾಧ್ಯವಾಗುತ್ತದೆ.

ಅದ್ಬುತ ಪ್ರೊಸೆಸರ್ ಮತ್ತು ತಂತ್ರಜ್ಞಾನ!

ಅದ್ಬುತ ಪ್ರೊಸೆಸರ್ ಮತ್ತು ತಂತ್ರಜ್ಞಾನ!

'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿ ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.'ಹಾನರ್ 8ಎಕ್ಸ್'ನ ಪ್ರಬಲ ಕಿರಿನ್ 710 ಚಿಪ್ಸೆಟ್ ಕ್ರಾಂತಿಕಾರಿ ಜಿಪಿಯು ಟರ್ಬೊ ತಂತ್ರಜ್ಞಾನದೊಂದಿಗೆ ಜೋಡಿಸಲ್ಪಟ್ಟಿರುತ್ತದೆ, ಈ ಪ್ರೊಸೆಸರ್ ವಿಪರೀತ ಗ್ರಾಫಿಕ್ಸ್ ತಡೆಯುವ ಯಂತ್ರಾಂಶ ಹಾಗೂ ತಂತ್ರಾಂಶದ ಏಕೀಕರಣವಾಗಿದೆ. ಮೊಬೈಲ್ ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುವಂತಹ ಗ್ರಾಫಿಕ್ಸ್ ಪ್ರಕ್ರಿಯೆ ವೇಗವರ್ಧನೆಯ ತಂತ್ರಜ್ಞಾನ ಅಗತ್ಯತೆಗಳನ್ನು ಪೂರೈಸಲು ಸ್ಮಾರ್ಟ್‌ಫೋನ್ ಶಕ್ತವಾಗಿದೆ.

ಶಕ್ತಿಯುತ ಬ್ಯಾಟರಿ ಮತ್ತು ಸ್ಪೀಕರ್

ಶಕ್ತಿಯುತ ಬ್ಯಾಟರಿ ಮತ್ತು ಸ್ಪೀಕರ್

ಶಕ್ತಿಯುತ ಸ್ಪೀಕರ್ ಮತ್ತು ಬೃಹತ್ ಬ್ಯಾಟರಿ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನಿನ ವಿಶೇಷತೆಗಳಾಗಿವೆ. ಈ ಸ್ಮಾರ್ಟ್‌ಫೋನ್ ಒಂದು ಬಾಟಮ್-ಫೈರಿಂಗ್ ಸ್ಪೀಕರ್ ಅನ್ನು ಹೊಂದಿದ್ದು, ಸ್ಪಷ್ಟ ಹಾಗೂ ಶಕ್ತಿಯುತ ಔಟ್‌ಪುಟ್ ಆಡಿಯೋವನ್ನು ನೀಡಲಿದೆ. ವೀಡಿಯೋ ಪ್ಲೇಬ್ಯಾಕ್ ಮತ್ತು ದೀರ್ಘ ಗೇಮಿಂಗ್ ಸೆಷನ್‌ಗಳನ್ನು ಬೆಂಬಲಿಸಲು 3750mAh ಸಾಮರ್ಥ್ಯದ ಬ್ಯಾಟರಿ ಸ್ಮಾರ್ಟ್‌ಫೋನಿನಲ್ಲಿದೆ. EMUI ಕಸ್ಟಮ್ ಬ್ಯಾಟರಿಯ ಜೀವಿತಾವಧಿಯನ್ನು 33% ರಷ್ಟು ಹೆಚ್ಚಿಸುವ ಇಂಟೆಲಿಜೆಂಟ್ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ

ಡ್ಯುಯಲ್ ರಿಯರ್ ಕ್ಯಾಮೆರಾ

f/1.8 ಅಪರ್ಚರ್ ಸಾಮರ್ಥ್ಯವಿರುವ 20ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನ್ ಹೊಂದಿದೆ. f/2.0 ಅಪರ್ಚರ್ ಸಾಮರ್ಥ್ಯದಲ್ಲಿ 16ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನಿನಲ್ಲಿರುವ ಎರಡೂ ಬದಿಯ ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಪನೋರಮ, ಬೊಕೆ ಚಿತ್ರಗಳನ್ನು ಚಿತ್ರಿಸಲು ಈ ತಂತ್ರಜ್ಞಾನ ಸಹಾಯಕವಾಗಲಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4GB RAM + 64GB ಇಂಟರ್ನಲ್ ಸ್ಟೋರೇಜ್ , 6GB RAM + 64GB ಇಂಟರ್ನಲ್ ಸ್ಟೋರೇಜ್ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮೂರು ಮಾದರಿಯ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಮಾಡುಕಟ್ಟೆಗೆ ಪರಿಚಯಿಸಲಾಗಿದೆ.ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗಲಿದೆ. 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಾಗಿದೆ. ಸ್ಕ್ರೀನ್ ಟು ಬಾಡಿ ರೇಷ್ಯೂ 91 ಪರ್ಸೆಂಟ್ ಇರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದು.

ಹಾನರ್ 8ಎಕ್ಸ್ ಬೆಲೆ ಎಷ್ಟು?

ಹಾನರ್ 8ಎಕ್ಸ್ ಬೆಲೆ ಎಷ್ಟು?

ಮೂರು ವಿಭಿನ್ನ ಸ್ಟೊರೇಜ್ ವೇರಿಯಂಟ್‌ಗಳಲ್ಲಿ ಹಾನರ್ 8ಎಕ್ಸ್ ಸ್ಮಾರ್ಟ್‌ಪೋನ್ ಖರೀದಿಗೆ ಲಭ್ಯವಿದ್ದು, 4GB+64GB ಮಾದರಿ 14,999 ರೂ. ಮತ್ತು 6GB+64GB ಮಾದರಿ 16,999 ರೂ. ಹಾಗೂ 6GB+128GB ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 18,999 ರೂ.ಗಳಾಗಿವೆ. ಈ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿವೆ. ಹಾಗಾಗಿ, ಡಿಸ್‌ಪ್ಲೇಯು ನೋಚ್ ವಿನ್ಯಾಸದ ಹೈ ಎಂಡ್ ಲುಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಮ್ಮ ಬೆಸ್ಟ್ ಆಯ್ಕೆಯ ಸ್ಮಾರ್ಟ್‌ಪೋನ್ ಆಗಿದೆ.

Best Mobiles in India

English summary
Huawei's Honor brand has announced that it has sold over 1 million or 10 lakh smartphones during the Diwali festive season sale on. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X