ಪೇಟಿಎಂ ಮೂಲಕ ಗ್ಯಾಸ್‌ ಬುಕ್‌ ಮಾಡಿದ್ರೆ ಸಿಗುತ್ತೆ ಭರ್ಜರಿ ಕ್ಯಾಶ್‌ಬ್ಯಾಕ್‌!

|

ಇತ್ತೀಚಿನ ದಿನಗಳಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ ದಿನೇ ದಿನೇ ಏರಿಕೆಯಾಗ್ತಿದೆ. ಇದರ ನಡುವೆ ಆನ್‌ಲೈನ್‌ ಅಪ್ಲಿಕೇಶನ್‌ಗಳ ಮೂಲಕ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಿದ್ರೆ ಕ್ಯಾಶ್‌ಬ್ಯಾಕ್‌ನಂತಹ ಆಫರ್‌ ಕೂಡ ಸಿಗ್ತಾ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಆನ್‌ಲೈನ್‌ ಅಪ್ಲಿಕೇಶನ್‌ಗಳ ಮೂಲಕ ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್‌ ಮಾಡಲು ಹೆಚ್ಚು ಒತ್ತು ನೀಡುತ್ತಾರೆ. ಈ ಸಾಲಿಗೆ ಇದೀಗ ಪೇಟಿಎಂ ಕೂಡ ಸೇರಿದ್ದು, ಪೇಟಿಎಂ ಮೂಲಕ ಭಾರತ್‌ಗ್ಯಾಸ್‌, ಇಂಡೇನ್‌ ಮತ್ತು ಹೆಚ್‌ಪಿ ಗ್ಯಾಸ್‌ ಎಲ್‌ಪಿಜಿ ಸಿಲಿಂಡರ್‌ ಬುಕ್ ಮಾಡಿದರೆ ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವುದಾಗಿ ಹೇಳಿದೆ.

ಪೇಟಿಎಂ

ಹೌದು, ಪೇಟಿಎಂ ಅಪ್ಲಿಕೇಶನ್‌ ಬಳಸಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಿದರೆ ನಿಮಗೆ ಭರ್ಜರಿ ಕ್ಯಾಶ್‌ಬ್ಯಾಕ್‌ ಸಿಗೋದು ಪಕ್ಕಾ. ಇದಕ್ಕಾಗಿ ಪೇಟಿಎಂ ಬಳಕೆದಾರರು ಹಲವು ಕ್ಯಾಶ್‌ಬ್ಯಾಕ್‌ ಆಫರ್‌ ಪರಿಚಯಿಸಿದೆ. ಅಷ್ಟೇ ಅಲ್ಲ ಬುಕ್ಕಿಂಗ್‌ ಅನ್ನು ಟ್ರ್ಯಾಕ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ. ಹಾಗಾದ್ರೆ ಪೇಟಿಎಂ ಮೂಲಕ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಿದ್ರೆ ಏನೆಲ್ಲಾ ಕ್ಯಾಶ್‌ಬ್ಯಾಕ್‌ ಸಿಗಲಿದೆ, ಪೇಟಿಎಂ ವ್ಯಾಲೆಟ್‌ ಮೂಲಕ ಏನು ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಪೇಟಿಎಂ

ಪೇಟಿಎಂ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊದಲ ಬಾರಿಗೆ LPG ಸಿಲಿಂಡರ್ ಬುಕಿಂಗ್‌ ಮಾಡಿದರೆ ಪ್ಲಾಟ್‌ 15ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ. ಅಲ್ಲದೆ ಪೇಟಿಎಂ ವಾಲೆಟ್ ಮೂಲಕ ಸಿಲಿಂಡರ್ ಬುಕಿಂಗ್‌ನಲ್ಲಿ 50ರೂ. ವರೆಗೆ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಇದಲ್ಲದೆ ಬಳಕೆದಾರರು ತಮ್ಮ ಬುಕಿಂಗ್ ಅನ್ನು ಪೇಟಿಎಂನಲ್ಲಿಯೇ ಟ್ರ್ಯಾಕ್‌ ಮಾಡಬಹುದು. ಇದು ಬುಕಿಂಗ್ ಪ್ರಕ್ರಿಯೆ ಮತ್ತು ಬುಕ್ ಮಾಡಿದ ಸಿಲಿಂಡರ್‌ಗಳ ವಿತರಣಾ ಪ್ರಕ್ರಿಯೆಯನ್ನು ತೋರಿಸುತ್ತದೆ.

ಪೇಟಿಎಂನಲ್ಲಿ

ಇನ್ನು ಪೇಟಿಎಂನಲ್ಲಿ ಹೊಸದಾಗಿ ಗ್ಯಾಸ್‌ ಬುಕ್ಕಿಂಗ್‌ ಮಾಡುವ ಬಳಕೆದಾರರು 15ರೂ. ಕ್ಯಾಶ್‌ಬ್ಯಾಕ್ ಪಡೆಯಲು "FIRSTGAS" ಕೋಡ್ ಅನ್ನು ಬಳಸಬಹುದಾಗಿದೆ. ಅದರೊಂದಿಗೆ ಬಳಕೆದಾರರು ಪೇಟಿಎಂ ವಾಲೆಟ್‌ ಬಳಸಿಕೊಂಡು ಸಿಲಿಂಡರ್‌ ಬುಕ್ಕಿಂಗ್‌ನಲ್ಲಿ 50ರೂ. ಕ್ಯಾಶ್‌ಬ್ಯಾಕ್ ಪಡೆಯಲು "WALLET50GAS" ಕೋಡ್ ಅನ್ನು ಬಳಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಬುಕಿಂಗ್ ಅನ್ನು ಟ್ರ್ಯಾಕ್ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಸಿಲಿಂಡರ್‌

LPG ಸಿಲಿಂಡರ್‌ಗಳನ್ನು ಬುಕ್ ಮಾಡುವ ಎಲ್ಲಾ ಹೊಸ ಬಳಕೆದಾರರಿಗೆ Paytm ಮಂಗಳವಾರ ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಡೀಲ್‌ಗಳನ್ನು ಪ್ರಕಟಿಸಿದೆ. ಹೊಸ ಬಳಕೆದಾರರು ರೂ 15 ಕ್ಯಾಶ್‌ಬ್ಯಾಕ್ ಪಡೆಯಲು "FIRSTGAS" ಕೋಡ್ ಅನ್ನು ಬಳಸಬಹುದು. ಅದರೊಂದಿಗೆ ಬಳಕೆದಾರರು Paytm Wallet ಅನ್ನು ಬಳಸಿಕೊಂಡು ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ ರೂ 50 ಕ್ಯಾಶ್‌ಬ್ಯಾಕ್ ಪಡೆಯಲು "WALLET50GAS" ಕೋಡ್ ಅನ್ನು ಬಳಸಬಹುದು.

ಪೇಟಿಎಂ

ಇದರೊಂದಿಗೆ ಪೇಟಿಎಂ ಬಳಕೆದಾರರಿಗೆ ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಹೆಚ್ಚುವರಿ ಶುಲ್ಕದಲ್ಲಿ ಗ್ಯಾಸ್ ರೀಫಿಲ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ. ಇದಲ್ಲದೆ ಪೇಟಿಎಂ ಮೂಲಕ ಮೊದಲ ಗ್ಯಾಸ್‌ ಬುಕಿಂಗ್ ನಂತರ, ಅಪ್ಲಿಕೇಶನ್ ಬುಕಿಂಗ್ ವಿವರಗಳನ್ನು ಸೇವ್‌ ಮಾಡಲಿದೆ. ಆದ್ದರಿಂದ ಬಳಕೆದಾರರು ಹೊಸ ಬುಕಿಂಗ್ ಅನ್ನು ಪ್ರಕ್ರಿಯೆಗೊಳಿಸಲು 17-ಅಂಕಿಯ LPG ID ಅನ್ನು ನೆನಪಿಟ್ಟುಕೊಳ್ಳಬೇಕಾದ ಅವಶ್ಯಕತೆಯಿಲ್ಲ.

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್‌ ಮಾಡುವುದು ಹೇಗೆ?

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪೇಟಿಎಂ ಅಪ್ಲಿಕೇಶನ್‌ ತೆರೆಯಿರಿ
ಹಂತ:2 ಬಿಲ್ ಪಾವತಿಗಳ ವರ್ಗದ ಅಡಿಯಲ್ಲಿ 'ಬುಕ್ ಗ್ಯಾಸ್ ಸಿಲಿಂಡರ್' ಟ್ಯಾಬ್‌ಗೆ ಹೋಗಿ.
ಹಂತ:3 ಇದೀಗ LPG ಸಿಲಿಂಡರ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ
ಹಂತ:4 ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ/ 17-ಅಂಕಿಯ LPG ID/ಗ್ರಾಹಕ ಸಂಖ್ಯೆಯನ್ನು ನಮೂದಿಸಿ.
ಹಂತ:5 ಇದೀಗ ಪೇಟಿಎಂ ವಾಲೆಟ್‌, ಪೇಟಿಎಂ ಯುಪಿಐ, ಕಾರ್ಡ್‌ಗಳು ಮತ್ತು ನೆಟ್ ಬ್ಯಾಂಕಿಂಗ್‌ ಮೂಲಕ ಪಾವತಿಸಿ ಬುಕ್ಕಿಂಗ್‌ ಮುಂದುವರೆಸಬಹುದು.
ಹಂತ:6 ನಿಮ್ಮ ಬುಕಿಂಗ್ ಅನ್ನು ದೃಢೀಕರಿಸಲಾಗುತ್ತದೆ.
ನಂತರ ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ 2-3 ದಿನಗಳಲ್ಲಿ ಹತ್ತಿರದ ಗ್ಯಾಸ್ ಏಜೆನ್ಸಿ ಮೂಲಕ ತಲುಪಿಸಲಾಗುತ್ತದೆ.

Best Mobiles in India

Read more about:
English summary
Paytm is offering exciting cashback offers to users on LPG cylinder booking

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X