ಫ್ಲಿಪ್‌ಕಾರ್ಟ್ ಸೇಲ್‌ ಸಮಯದಲ್ಲಿ ಪೇಟಿಎಂ ಬಳಸಿದರೆ ಸಿಗುತ್ತೆ ಭರ್ಜರಿ ಕ್ಯಾಶ್‌ಬ್ಯಾಕ್‌!

|

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಇದೇ ಸೆಪ್ಟೆಂಬರ್‌ 23 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಸೇಲ್‌ನಲ್ಲಿ ಲಭ್ಯವಾಗುವ ಡಿಸ್ಕೌಂಟ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇದರ ನಡುವೆ ಫ್ಲಿಪ್‌ಕಾರ್ಟ್‌ ಕೂಡ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಲಭ್ಯವಾಗುವ ಆಫರ್‌ಗಳ ಬಗ್ಗೆ ಹಂತಹಂತವಾಗಿ ಮಾಹಿತಿ ನೀಡುತ್ತಾ ಬಂದಿದೆ. ಇದರ ನಡುವೆ ಇದೀಗ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಪೇಟಿಎಂ ಫ್ಲಿಪ್‌ಕಾರ್ಟ್‌ ಜೊತೆಗೆ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ಗಾಗಿ ಪೇಟಿಎಂ ತನ್ನ ಪಾಲುದಾರಿಕೆಯನ್ನು ಪ್ರಕಟಿಸಿದೆ. ಇದರಿಂದ ಪೇಟಿಎಂ ಬಳಕೆದಾರರಿಗೆ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಬಿಗ್‌ ಆಫರ್‌ ಲಭ್ಯವಾಗುವುದು ಖಚಿತವಾಗಿದೆ. ಪೇಟಿಎಂ ವಾಲೆಟ್‌ ಮೂಲಕ ಪಾವತಿ ಮಾಡುವ ಬಳಕೆದಾರರು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ ಎಂದು ಪೇಟಿಎಂ ಹೇಳಿಕೊಂಡಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ ಸಮಯದಲ್ಲಿ ಪೇಟಿಎಂ ಬಳಕೆದಾರರಿಗೆ ಏನೆಲ್ಲಾ ಡಿಸ್ಕೌಂಟ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಲಿಪ್‌ಕಾರ್ಟ್‌

ಪೇಟಿಎಂ ಪ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ಗಾಗಿ ತನ್ನ ಪಾಲುದಾರಿಕೆಯನ್ನು ಪ್ರಕಟಿಸಿದೆ. ಇದರಿಂದ ಪೇಟಿಎಂ UPI ಮತ್ತು ಪೇಟಿಎಂ ವಾಲೆಟ್ ಮೂಲಕ ಪಾವತಿ ಮಾಡುವವರಿಗೆ ಬಿಗ್‌ ಕ್ಯಾಶ್‌ಬ್ಯಾಕ್‌ ಆಫರ್‌ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌ನಲ್ಲಿ, ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರು ಪೇಟಿಎಂ ಯುಪಿಐ ಮೂಲಕ ಪಾವತಿಸಿದರೆ 250ರೂ ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಯ ಮೇಲೆ 25ರೂ ವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಅಲ್ಲದೆ ಪೇಟಿಎಂ ವಾಲೆಟ್ ಮೂಲಕ 500ರೂ ಮತ್ತು ಅದಕ್ಕಿಂತ ಹೆಚ್ಚಿನ ಪಾವತಿಗೆ 50ರೂ. ವರೆಗಿನ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಪೇಟಿಎಂ

ಪೇಟಿಎಂ ಮತ್ತು ಫ್ಲಿಪ್‌ಕಾರ್ಟ್‌ ನಡುವಿನ ಈ ಪಾಲುದಾರಿಕೆಯಿಂದ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಬಿಗ್‌ ಆಫರ್‌ಗಳು ಲಭ್ಯವಾಗುವುದು ಪಕ್ಕಾ ಆಗಿದೆ. ಇದರಿಂದ ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಬಳಕೆದಾರರು ಪೇಟಿಎಂ ಮೂಲಕ ಸುರಕ್ಷಿತ ಚೆಕ್‌ಔಟ್‌ಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ. ಇದಲ್ಲದೆ ಬಿಗ್ ಬಿಲಿಯನ್ ಡೇಸ್‌ಗಾಗಿ ಪಾವತಿ ಪಾಲುದಾರರಾಗಿ ನಮ್ಮ ಸಹಯೋಗವು ಲಕ್ಷಾಂತರ ಶಾಪರ್‌ಗಳಿಗೆ ಸುರಕ್ಷಿತ ಪಾವತಿ ಅನುಭವವನ್ನು ಒದಗಿಸುತ್ತದೆ ಎಂದು ಪೇಟಿಎಂ ಹೇಳಿಕೊಂಡಿದೆ.

ಫ್ಲಿಪ್‌ಕಾರ್ಟ್

ಇನ್ನು ಫ್ಲಿಪ್‌ಕಾರ್ಟ್ ತನ್ನ ಸೇಲ್‌ನಲ್ಲಿ ಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಹೆಚ್ಚಿನ ಮೌಲ್ಯದ ವಸ್ತುಗಳಿಗೆ ಓಪನ್‌ ಬಾಕ್ಸ್ ಡೆಲಿವರಿ ಆಯ್ಕೆಯನ್ನು ಸಹ ನೀಡಿದೆ. ಇದರಿಂದ ಫ್ಲಿಪ್‌ಕಾರ್ಟ್ ವಿಶ್‌ಮಾಸ್ಟರ್ ಡೆಲಿವರಿ ಸಮಯದಲ್ಲಿ ಉತ್ಪನ್ನವನ್ನು ಗ್ರಾಹಕರ ಮುಂದೆ ತೆರೆಯುತ್ತಾರೆ. ತಮ್ಮ ಆರ್ಡರ್ ಉತ್ತಮ ಸ್ಥಿತಿಯಲ್ಲಿದ್ದತೆ ಮಾತ್ರ ಗ್ರಾಹಕರು ಆರ್ಡರ್‌ ಅನ್ನು ಸ್ವೀಕರಿಸಬಹುದಾಗಿದೆ. ಈ ಓಪನ್‌ ಬಾಕ್ಸ್‌ ಡೆಲಿವರಿ ಭಾರತದಲ್ಲಿನ ಆಯ್ದ ಪಿನ್ ಕೋಡ್‌ಗಳಿಗೆ ಮಾತ್ರ ಅನ್ವಯಿಸಲಿದೆ.

ಫ್ಲಿಪ್‌ಕಾರ್ಟ್‌ನ

ಇದಲ್ಲದೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಸಮಯದಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ 10% ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಹಕರು ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಸೇಲ್‌ ಟೈಂನಲ್ಲಿ ಹೆಡ್‌ಫೋನ್‌ಗಳು, ವಾಯರ್‌ಲೆಸ್ ಇಯರ್‌ಫೋನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಪಡೆದುಕೊಳ್ಳುವುದು ಪಕ್ಕಾ ಆಗಿದೆ.

ಫ್ಲಿಪ್‌ಕಾರ್ಟ್‌

ಇದರೊಂದಿಗೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ಮಿ, ಪೊಕೊ, ವಿವೋ, ಆಪಲ್‌ ಮತ್ತು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಕೂಡ ಬಿಗ್‌ ಡಿಸ್ಕೌಂಟ್‌ಗಳನ್ನು ನೀಡಲಿದೆ ಎಂದು ವರದಿಯಾಗಿದೆ. ಇದಲ್ಲದೆ ಎಲೆಕ್ಟ್ರಾನಿಕ್ಸ್, ಪರಿಕರಗಳು, ಟಿವಿಗಳು ಮತ್ತು ಉಪಕರಣಗಳ ಮೇಲೆ ಖರೀದಿದಾರರು 80% ವರೆಗೆ ರಿಯಾಯಿತಿ ಪಡೆಯಬಹುದು. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಅನ್ನು 69,999 ರೂಗಳಿಗೆ ಸೇಲ್‌ ಮಾಡುತ್ತಿದೆ. ನೀವು HDFC ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, 2000ರೂ. ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಾಗಲಿದೆ.

Best Mobiles in India

English summary
Paytm to offer massive cashback during Flipkart big billion days

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X