ಹೊಸ OTP ಸ್ಕ್ಯಾಮ್ ನಿಂದ ನಿದ್ದೆಗೆಟ್ಟ ಬೆಂಗಳೂರಿಗರು!

|

ಒಂದು ವೇಳೆ OTP ಅಥವಾ ಒನ್-ಟೈಮ್- ಪಾಸ್ ವರ್ಡ್ ಎಸ್ಎಂಎಸ್ ನಿಮ್ಮ ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಸೇಫ್ ಆಗಿ ಇಡುತ್ತದೆ ಎಂದು ನೀವು ಭಾವಿಸಿದರೆ ಖಂಡಿತ ಅದು ನಿಮ್ಮ ತಪ್ಪು ಕಲ್ಪನೆ. ಆದರೆ OTP ಹ್ಯಾಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ ಮತ್ತು ಸಾಮಾನ್ಯ ಪಾಸ್ ವರ್ಡ್ ಗಳಿಗಿಂತ ಇದು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ OTP ಸ್ಕ್ಯಾಮ್ ನಿಂದ ನಿದ್ದೆಗೆಟ್ಟ ಬೆಂಗಳೂರಿಗರು!

ಆದರೆ ಹೊಸ ರೀತಿಯ OTP ಸ್ಕ್ಯಾಮ್ ಬೆಂಗಳೂರಿಗರ ನಿದ್ದೆಗೆಡಿಸಿದೆ. ಈ ಸ್ಕ್ಯಾಮ್ ನ ಬೆಸ್ಟ್ ವಿಚಾರವೇನೆಂದರೆ ಫ್ರಾಡ್ ಮಾಡುವವರು ಹೇಗೆ ಮೋಸಗೊಳಿಸಿದರು ಎಂಬ ಸಣ್ಣ ಕ್ಲೂ ಕೂಡ ಬಿಡುವುದಿಲ್ಲ. ಹೊಸ ರೀತಿಯ ಈ ಸ್ಕ್ಯಾಮ್ ನಿಂದಾಗಿ ಹಲವಾರು ಮಂದಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ ಮತ್ತು ಬೆಂಗಳೂರು ಸೈಬರ್ ಪೋಲೀಸರು ಈ ನಿಟ್ಟಿನಲ್ಲಿ ಇದೀಗ ಜಾಗೃತಿ ವಹಿಸುತ್ತಿದ್ದಾರೆ. ಹಾಗಾದ್ರೆ ಈ OTP ಸ್ಕ್ಯಾಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ ನೋಡಿ.

OTP ಕಳ್ಳತನ

OTP ಕಳ್ಳತನ

ಆನ್ ಲೈನ್ ಬ್ಯಾಂಕ್ ಟ್ರಾನ್ಸ್ ಫರ್ ಸೇರಿದಂತೆ ಇತರೆ ಕೆಲವು ಟ್ರಾನ್ಸ್ಯಾಕ್ಷನ್ ಗಳಿಗಾಗಿ OTP ಗಳ ಅಗತ್ಯವಿದೆ. ಈ ಹೊಸ ಸ್ಕ್ಯಾಮ್ ನಲ್ಲಿ ಸರಳವಾಗಿ ಅಪರಿಚಿತ ಟ್ರಾನ್ಸ್ಯಾಕ್ಷನ್ ಗಾಗಿ ಈ OTP ಗಳನ್ನು ಕದಿಯಲಾಗುತ್ತದೆ .

ಫೇಕ್ ಕಾಲ್ ಮತ್ತು ಮಾಲ್ವೇರ್ ಗಳು:

ಫೇಕ್ ಕಾಲ್ ಮತ್ತು ಮಾಲ್ವೇರ್ ಗಳು:

ವಿಕ್ಟಿಮ್ ಫೋನ್ ಗೆ ಮಾಲ್ವೇರ್ ಪ್ಲ್ಯಾಂಟ್ ಮಾಡುವ ಮೂಲಕ ಇದನ್ನು ಕದಿಯಲಾಗುತ್ತದೆ ಅಥವಾ ಬ್ಯಾಂಕ್ ಉದ್ಯೋಗಿ ಮಾಡುತ್ತಿರ ಕರೆ ಎಂದು ಹೇಳಲಾಗುವ ಫೇಕ್ ಕಾಲ್ ಸೆಂಟರ್ ಕರೆಯ ಮೂಲಕ ನಡೆಸಲಾಗುತ್ತದೆ.

ಬ್ಯಾಂಕ್ ಉದ್ಯೋಗಿ

ಬ್ಯಾಂಕ್ ಉದ್ಯೋಗಿ

ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಳ್ಳುವ ಫೇಕ್ ಕರೆಗಳ ಮೂಲಕ ನಡೆಸಲಾಗುತ್ತಿರುವ ಸ್ಕ್ಯಾಮ್ ಇದು.

ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಕಾರ್ಡ್

ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಕಾರ್ಡ್

ನಿಮ್ಮ ಬಳಿ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಕಾರ್ಡ್ ರಿನ್ಯೂ ಮಾಡುವುದಕ್ಕಾಗಿ ನಾವು ಬ್ಯಾಂಕಿನಿಂದ ಕರೆಯನ್ನು ಮಾಡುತ್ತಿರುವುದಾಗಿ ಈ ಕಳ್ಳರು ಕರೆಗಳನ್ನು ಮಾಡುತ್ತಾರೆ.

ಕಾರ್ಡ್ ಮಾಹಿತಿ ಕೇಳುವ ಕಳ್ಳರು:

ಕಾರ್ಡ್ ಮಾಹಿತಿ ಕೇಳುವ ಕಳ್ಳರು:

ಮೋಸಗಾರರು ನಿಮ್ಮ ಬಳಿ ಡೆಬಿಟ್/ಕ್ರೆಡಿಟ್ ಕಾರ್ಡಿನ ನಂಬರ್ ನ್ನ ಕೇಳುತ್ತಾರೆ, ಸಿವಿವಿ ನಂಬರ್, ನಿಮ್ಮ ಕಾರ್ಡಿನ ಎಕ್ಸ್ ಪೈರಿ ಡೇಟ್ ನ್ನು ಕೇಳಿ ನಿಮ್ಮ ಕಾರ್ಡ್ ನ್ನು ಹೊಸ ಕಾರ್ಡಿಗೆ ಅಪ್ ಗ್ರೇಡ್ ಮಾಡಲಾಗುತ್ತದೆ ಎಂದು ನಿಮ್ಮನ್ನ ನಂಬಿಸುತ್ತಾರೆ.

ಉತ್ತಮ ಬೆನಿಫಿಟ್ ಗಳನ್ನು ಬ್ಯಾಂಕಿನಿಂದ ನೀಡುವ ಸಲುವಾಗಿ ಬ್ಯಾಂಕಿನವರು ಹೊಸ ಕಾರ್ಡ್ ನ್ನು ನೀಡುತ್ತಾರೆ ಎಂದು ಜನರು ನಂಬಿ ಬಿಡುತ್ತಾರೆ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

ಇದಾದ ನಂತರ ನಿಮಗೊಂದು ಎಸ್ಎಂಎಸ್ ಬರುತ್ತದೆ ಇದು ನಿಮ್ಮ ಕಾರ್ಡ್ ಬದಲಾವಣೆಗೆ ಖಾತ್ರಿ ಮಾಡುವಿಕೆಯ ಪ್ರೊಸೀಜರ್ ಎಂದು ನಿಮ್ಮನ್ನ ಕಳ್ಳರು ನಂಬಿಸುತ್ತಾರೆ.

ಎಸ್ಎಂಎಸ್

ಎಸ್ಎಂಎಸ್

ಎಸ್ಎಂಎಸ್ ನಲ್ಲಿ ಒಂದು ಲಿಂಕ್ ಬರುತ್ತದೆ ಮತ್ತು ಕಳ್ಳತನದ ಅರಿವಲ್ಲದ ಜನ ಇದನ್ನು ಕ್ಲಿಕ್ಕಿಸಿ ತಮ್ಮ ಕಾರ್ಡ್ ಅಪ್ ಗ್ರೇಡ್ ಆಗುತ್ತದೆ ಎಂದು ಭಾವಿಸುತ್ತಾರೆ,

ಎಸ್ಎಂಎಸ್ ನಲ್ಲಿರುವ ಲಿಂಕ್ ನಿಮ್ಮ ಫೋನಿನಲ್ಲಿ ಮಾಲ್ವೇರ್ ನ್ನು ಇನ್ಸ್ಟಾಲ್ ಮಾಡುತ್ತದೆ ಮತ್ತು ನಿಮ್ಮ ಮೊಬೈಲಿಗೆ ಬರುವ ಎಲ್ಲಾ ಓಟಿಪಿ ಮತ್ತು ಎಸ್ಎಂಎಸ್ ಗಳನ್ನು ಕಳ್ಳರ ಮೊಬೈಲಿಗೆ ಹೋಗುವಂತೆ ಮಾಡುತ್ತದೆ.

ಕೆಲವೊಮ್ಮೆ ಕಳ್ಳರು ಕಾರ್ಡ್ ಅಪ್ ಗ್ರೇಡ್ ಮಾಡುವುದನ್ನು ಖಾತ್ರಿಗೊಳಿಸಲು ಎಸ್ಎಂಎಸ್ ನ್ನು ರೀಸೆಂಡ್ ಮಾಡುವಂತೆ ಹೇಳುತ್ತಾರೆ.

ಕಾರ್ಡ್ ವಿವರ

ಕಾರ್ಡ್ ವಿವರ

ಈಗಾಗಲೇ ಕಾರ್ಡ್ ವಿವರಗಳನ್ನು ಕಳ್ಳರು ನಿಮ್ಮ ಫೋನಿನಲ್ಲಿ ತಿಳಿದುಕೊಂಡಿರುವುದರಿಂದಾಗಿ (ಸಿವಿವಿ, ಎಕ್ಸ್ ಪೈರಿ ಡೇಟ್, ಮತ್ತು ಕಾರ್ಡ್ ನಂಬರ್)ಅವರು ಅನಧಿಕೃತ ಟ್ರಾನ್ಸ್ಯಾಕ್ಷನ್ ನ್ನು ಮಾಡಿ ನಿಮ್ಮನ್ನ ಮೋಸಗೊಳಿಸಿ ನಿಮ್ಮ ಖಾತೆಯಲ್ಲಿನ ಹಣವನ್ನು ಲಪಟಾಯಿಸಿ ಬಿಡುತ್ತಾರೆ.

ಮಾಲ್ವೇರ್ ಗಳ ಸಹಾಯದಿಂದ ಅಥವಾ ನೀವೇ ಕಳುಹಿಸುವ ಎಸ್ಎಂಎಸ್ ಗಳ ಸಹಾಯದಿಂದ ಓಟಿಪಿ ಪಡೆದ ಕಳ್ಳಲು ಸುಲಭದಲ್ಲಿ ತಮ್ಮ ಫೋನಿನಲ್ಲಿ ಹಣ ಲಪಟಾಯಿಸುವ ಕೆಲಸವನ್ನು ಮಾಡಿಮುಗಿಸಿಕೊಳ್ಳುತ್ತಾರೆ.

ಒಮ್ಮೆ ಕಳ್ಳರ ಕೈಗೆ ಓಟಿಪಿ ಸಿಕ್ಕಿಬಿಟ್ಟರೆ ಟ್ರಾನ್ಸ್ಯಾಕ್ಷನ್ ನಡೆಸುವುದು ಕಷ್ಟವೇ ಆಗಿರುವುದಿಲ್ಲ.

ಈ ಟ್ರಿಕ್ ಬಳಸಿ ಈಗಾಗಲೇ ಹಲವು ಮಂದಿಯ ಬ್ಯಾಂಕ್ ಖಾತೆಯನ್ನು ಸೊನ್ನೆ ಇಳಿಸಿದ್ದಾರೆ ಕಳ್ಳರು. ಹಾಗಾಗಿ ನೀವು ಹುಷಾರಾಗಿರಿ.

Best Mobiles in India

Read more about:
English summary
People are losing lakhs to this dangerous OTP online banking scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X