ಮೊಬೈಲ್ ಹುಚ್ಚು ಬಿಡಿಸಲು ಬಂದಿದೆ ಮತ್ತೊಂದು ಮೊಬೈಲ್..!

|

ಮೊಬೈಲ್ ಬಳಕೆ ಇಂದಿನ ದಿನದಲ್ಲಿ ಚಟವಾಗಿದ್ದು, ಕ್ಷಣಮಾತ್ರವೂ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಇರಲಾಗದ ಸ್ಥಿತಿಯನ್ನು ತಲುಪಿದ್ದಾರೆ. ಈ ಮಾದರಿಯ ಸ್ಮಾರ್ಟ್‌ಫೋನ್ ಚಟವನ್ನು ಬಿಡಿಸುವ ಸಲುವಾಗಿ ಹೊಸದೊಂದು ಮಾದರಿಯ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎನ್ನಲಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಚಟವನ್ನು ನಿವಾರಿಸಲಿದೆ.

ಮೊಬೈಲ್ ಹುಚ್ಚು ಬಿಡಿಸಲು ಬಂದಿದೆ ಮತ್ತೊಂದು ಮೊಬೈಲ್..!

ಓದಿರಿ: ಬಿಟ್‌ಕಾಯಿನ್‌ಗಿಂತಲೂ ಹೆಚ್ಚಿನ ಲಾಭಕ್ಕಾಗಿ ಲಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ..!

ಸುಮ್ಮಸುಮ್ಮನೆ ಯಾವುದೇ ಕರೆ ಬಂದಿಲ್ಲವಾದರೂ, ಮೇಸೆಜ್ ಇಲ್ಲವಾದರೂ ಸ್ಕ್ರೀನ್ ಮೇಲೆ ಕೈಯಾಡಿಸುವುದು, ಸ್ವೈಪ್ ಮಾಡುವುದನ್ನು ನಾವು ನೋಡಬಹುದಾಗಿದೆ. ಇಂಥ ಮೊಬೈಲ್‌ ಗೀಳು ಇಟ್ಟುಕೊಂಡಿರುವವರಿಗೆಂದೇ ನಕಲಿ ಫೋನೊಂದು ರೂಪಿತಗೊಂಡಿದೆ. ಇದು ನೋಡಲು ಸಾಮಾನ್ಯ ಫೋನಿನಂತೆ ಕಾಣಿಸಿಕೊಂಡಿದ್ದು, ಕೈನಲ್ಲಿ ಹಿಡಿದರೆ ಮೊಬೈಲ್ ಹಿಡಿದ ಅನುಭವನ್ನು ನೀಡಲಿದೆ.

ಫಿಜೆಟ್ ಸ್ಪಿನ್ನರ್‌ ಮಾದರಿಯಲ್ಲಿ:

ಫಿಜೆಟ್ ಸ್ಪಿನ್ನರ್‌ ಮಾದರಿಯಲ್ಲಿ:

ಸ್ಮಾರ್ಟ್‌ಫೋನ್ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುವ ಸಾಲುವಾಗಿ ಒತ್ತಡ ನಿವಾರಿಸುವ ಸಲುವಾಗಿ ಕಾಣಿಸಿಕೊಂಡ ಫಿಜೆಟ್ ಸ್ಪಿನ್ನರ್‌ ಮಾದರಿಯಲ್ಲಿ ಈ ನಕಲಿ ಫೋನ್ ಅನ್ನು ನಿರ್ಮಾಣ ಮಾಡಲಾಗಿದೆ. ವಿಯೆನ್ನಾ ಮೂಲದ ಕೆಲ್ಮೆನ್ ಶಿಲ್ಲಿಂಜರ್ ಎನ್ನುವವರು ಈ ನಕಲಿ ಸ್ಮಾರ್ಟ್‌ಫೋನ್ ವಿನ್ಯಾಸ ಮಾಡಿದ್ದಾರೆ ಎನ್ನಲಾಗಿದೆ.

ಪ್ಲಾಸಿಕ್ ಫೋನ್:

ಪ್ಲಾಸಿಕ್ ಫೋನ್:

ನಕಲಿ ಸ್ಮಾರ್ಟ್‌ಫೋನ್ ಅನ್ನು ಪ್ಲಾಸ್ಟಿಕ್ ನಿಂದ ಮಾಡಲಾಗಿದ್ದು, ಈ ಫೋನಿಗೆ ಮೆಸೇಜ್, ಕರೆಗಳು ಬರುವುದಿಲ್ಲ, ಮೇಸೆಜ್ ಸ್ವೀಕರಿಸುವುದಿಲ್ಲ, ಸ್ಕ್ರೀನ್ ಇಲ್ಲ, ನಂಬರ್ ಪ್ಯಾಡ್ ಇಲ್ಲ, ಸ್ಮಾರ್ಟ್‌ಫೋನ್ ಅಲ್ಲವೇ ಅಲ್ಲ ಆದರೆ ಸ್ಮಾರ್ಟ್‌ಫೋನ್‌ನಷ್ಟೇ ತೂಕ ಹಾಗೂ ಫೋನ್ ಹಿಡಿದಂತೆಯೇ ಅನುಭವ ನೀಡುತ್ತದೆ.

ಒತ್ತಡ ನಿವಾರಿಸಲು ಮಣಿಗಳಿದೆ:

ಒತ್ತಡ ನಿವಾರಿಸಲು ಮಣಿಗಳಿದೆ:

ಈ ಮೊಬೈಲ್‌ನಲ್ಲಿ ನೀವು ಲಾಕ್ ಸ್ವೇಪ್ ಮಾಡುವ ಜಾಗದಲ್ಲಿಜ ಮಣಿಗಳನ್ನು ಅಳವಡಿಸಲಾಗಿದ್ದು, ಈ ಮಣಿಗಳ ಮೇಲೆ ಬೆರಳಾಡಿಸಿದರೆ, ಮೊಬೈಲ್‌ನ ಮೇಲೆ ಸ್ವೈಪ್ ಮಾಡಿದಂತೆಯೇ ಅನುಭವ ನೀಡುತ್ತದೆ. ಹಾಗೆಯೇ ಮಾಡುತ್ತಾ ನೀವು ಫೋನ್ ಬಳಕೆಯನ್ನು ಮಾಡಿದ ಅನುಭವನ್ನು ಪಡೆಯುವುದಲ್ಲದೇ ನಿಮ್ಮ ಒತ್ತಡವನ್ನು ನಿವಾರಿಸಲಿದೆ.

Best Mobiles in India

English summary
Phone artfully satisfies your compulsion to swipe and scroll. To knwo more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X