ಫೋನ್‌ಪೇ ನಲ್ಲಿ ಹೀಗೆ ಮಾಡಿದ್ರೆ ಸಿಗಲಿದೆ 2,500ರೂ. ಕ್ಯಾಶ್‌ಬ್ಯಾಕ್‌!

|

ಫೋನ್‌ಪೇ ಅಪ್ಲಿಕೇಶನ್‌ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ದೀಪಾವಳಿ ಸಂಭ್ರಮದ ಪ್ರಯುಕ್ತ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಭರ್ಜರಿ ಕ್ಯಾಶ್‌ ಬ್ಯಾಕ್‌ ನೀಡುವುದಾಗಿ ಘೋಷಣೆ ಮಾಡಿದೆ. ಫೋನ್‌ಪೇ ಗೋಲ್ಡನ್‌ ಡೇಸ್‌ ಅಭಿಯಾನದ ಭಾಗವಾಗಿ ಧಂತೇರಸ್ 2022 ಆಫರ್‌ ಅನ್ನು ನೀಡುತ್ತಿದೆ. ಅದರಂತೆ ಚಿನ್ನ ಬೆಳ್ಳಿ ಖರೀದಿಸುವವರು ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಜನಪ್ರಿಯ

ಹೌದು, ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಎನಿಸಿಕೊಂಡಿರುವ ಫೋನ್‌ಪೇ ತನ್ನ ಬಳಕೆದಾರರಿಗೆ ವಿಶೇಷ ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ಘೋಷಣೆ ಮಾಡಿದೆ. ಅದರಂತೆ ಫೋನ್‌ಪೇ ಬಳಕೆದಾರರು ಈ ಆಫರ್‌ನಲ್ಲಿ ಚಿನ್ನ ಖರೀದಿಸಿದರೆ 2,500ರೂ. ಕ್ಯಾಶ್‌ಬ್ಯಾಕ್‌ ಅನ್ನು ಪಡೆದುಕೊಳ್ಳಬಹುದು. ಅಲ್ಲದೆ ಬೆಳ್ಳಿ ಖರೀದಿಯ ಮೇಲೆ 500ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಫೋನ್‌ ಪೇ ಹೇಳಿದೆ. ಹಾಗಾದ್ರೆ ಫೋನ್‌ ಪೇ ಪ್ಲಾಟ್‌ಫಾರ್ಮ್‌ನಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ

ಫೋನ್‌ಪೇ ತನ್ನ ಬಳಕೆದಾರರಿಗೆ ದೀಪಾವಳಿಗೂ ಮುನ್ನ ಬರುವ ಧನ್ತೇರಾಸ್ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದರೆ ಬಿಗ್‌ ಕ್ಯಾಶ್‌ಬ್ಯಾಕ್‌ ನೀಡಲಿದೆ. ದನ್ತೇರಾಸ್‌ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದಕ್ಕೆ ಶುಭ ಸಮಯ ಎಂದು ನಂಬಲಾಗಿದೆ. ಇಂತಹ ಸಮಯದಲ್ಲಿ ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಚಿನ್ನ ಬೆಳ್ಳಿ ಖರೀದಿಸಿದರೆ ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಅಲ್ಲದೆ ಫೋನ್‌ಪೇ 1,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಚಿನ್ನ ಮತ್ತು ಬೆಳ್ಳಿಯ ಖರೀದಿಗಳಿಗೆ ಅತ್ಯಾಕರ್ಷಕ ರಿಯಾಯಿತಿಗಳನ್ನು ಕೂಡ ನೀಡುವುದಾಗಿ ಹೇಳಿದೆ.

ಡಿಜಿಟಲ್

ಇದಲ್ಲದೆ ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 26, 2022 ರ ನಡುವೆ ರಿವಾರ್ಡ್‌ ಮೂಲಕ ಪಡೆದಿರುವ ಡಿಜಿಟಲ್ ಕಾಯಿನ್ಸ್‌ ಗಳನ್ನು ಬೆಳ್ಳಿ ಖರೀದಿಗಳಿಗೆ ಪಾವತಿಸಿದರೆ ಕ್ಯಾಶ್‌ಬ್ಯಾಕ್ ಆಫರ್‌ ಸಿಗಲಿದೆ ಎನ್ನಲಾಗಿದೆ. ಇನ್ನು ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಗರಿಷ್ಠ 99.99% ಪರಿಶುದ್ಧತೆಯ 24K ಗೋಲ್ಡ್‌ ಮತ್ತು ಬೆಳ್ಳಿಯನ್ನು ಖರೀದಿಸುವುದಕ್ಕೆ ಅವಕಾಶ ನೀಡಲಾಗಿದೆ. ಚಿನ್ನದ ನಾಣ್ಯಗಳ ಪ್ರತಿ ಖರೀದಿ ಮಾಡಿದರೆ ಅದರ ಶುದ್ಧತೆಯ ಸೆರ್ಟಿಫಿಕೆಟ್‌ ಅನ್ನು ಕೂಡ ನೀಡಲಾಗುತ್ತದೆ ಎಂದು ಫೋನ್‌ಪೇ ಹೇಳಿದೆ.

ಫೋನ್‌ಪೇ

ಇನ್ನು ಫೋನ್‌ಪೇ ಗ್ರಾಹಕರು ಉತ್ತಮ ಗುಣಮಟ್ಟದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಆರ್ಡರ್‌ ಕೂಡ ಮಾಡಬಹುದು. ಡೋರ್‌ ಡೆಲಿವರಿ ಆಯ್ಕೆ ಕೂಡ ನೀಡಲಾಗಿದೆ. ಇನ್ನು ಫೋನ್‌ಪೇ ಮೂಲಕ ನೀವು ಆರ್ಡರ್‌ ಮಾಡಿದ 24K ಗೋಲ್ಡ್‌ ಜಿರೋ ವೇಸ್ಟೆಜ್‌ ಶುಲ್ಕವನ್ನು ಹೊಂದಿರುತ್ತದೆ ಎನ್ನಲಾಗಿದೆ. ಅಲ್ಲದೆ ಫ್ರೀ ಮತ್ತು ಇನ್ಯುರೆನ್ಸ್‌ ಹೊಂದಿರುವ ಬ್ಯಾಂಕ್ ದರ್ಜೆಯ ಗೋಲ್ಡ್‌ ಲಾಕರ್‌ಗಳನ್ನು ಇದನ್ನು ಸ್ಟೋರೇಜ್‌ ಮಾಡಬಹುದಾಗಿದೆ.

ಕ್ಯಾಶ್‌ಬ್ಯಾಕ್‌ ಆಫರ್‌ ಲಭ್ಯವಾಗುವುದು ಹೇಗೆ?

ಕ್ಯಾಶ್‌ಬ್ಯಾಕ್‌ ಆಫರ್‌ ಲಭ್ಯವಾಗುವುದು ಹೇಗೆ?

ಫೋನ್‌ಪೇ ಘೋಷಣೆ ಮಾಡಿರುವ ಗೋಲ್ಡನ್‌ ಡೇಸ್‌ ಆಫರ್‌ನಲ್ಲಿ ಕ್ಯಾಶ್‌ಪಡೆಯಲು ನೀವು ಈ ವಿಚಾರವನ್ನು ಗಮನಿಸಲೇಬೇಕು. ಅದೆನೆಂದರೆ ನೀವು ಜ್ಯುವೆಲರ್ಸ್‌ನಲ್ಲಿ ಚಿನ್ನ ಖರೀದಿಸಿ ಫೋನ್‌ಪೇ ಮೂಲಕ ಪಾವತಿಸಿದರೆ ನಿಮಗೆ ಕ್ಯಾಶ್‌ಬ್ಯಾಕ್‌ ದೊರೆಯುವುದಿಲ್ಲ. ಬದಲಿಗೆ ನೀವು ಫೋನ್‌ಪೇ ಪ್ಲಾಟ್‌ಫಾರ್ಮ್‌ ಮೂಲಕ ಚಿನ್ನ ಬೆಳ್ಳಿ ಖರೀದಿಸಿದರೆ ಮಾತ್ರ ನಿಮಗೆ ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಇದಕ್ಕಾಗಿಯೇ ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಗೋಲ್ಡ್‌ ಮತ್ತು ಸಿಲ್ವರ್‌ ಖರೀದಿಸುವುದಕ್ಕೆ ಅವಕಾಶವಿದೆ.

ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಗೋಲ್ಡ್‌ ಖರೀದಿಸುವುದು ಹೇಗೆ?

ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಗೋಲ್ಡ್‌ ಖರೀದಿಸುವುದು ಹೇಗೆ?

ಹಂತ:1 ಫೋನ್‌ಪೇ ಮೇನ್‌ಪೇಜ್‌ನ ಕೆಳಭಾಗದಲ್ಲಿರುವ ವೆಲ್ತ್‌ (ಸಂಪತ್ತಿನ) ಐಕಾನ್ ಅನ್ನು ಕ್ಲಿಕ್ ಮಾಡಿ.
ಹಂತ:2 ನಂತರ, ನಿಮ್ಮ ಖರೀದಿಯ ಆದ್ಯತೆಯ ಆಧಾರದ ಮೇಲೆ ಚಿನ್ನ/ಬೆಳ್ಳಿ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ 'ಸ್ಟಾರ್ಟ್ ಅಕ್ಯುಮ್ಯುಲೇಟಿಂಗ್' ಖರೀದಿಸಿ' ಕ್ಲಿಕ್ ಮಾಡಿ.
ಹಂತ:4 ಇದಲ್ಲದೆ ಡೋರ್‌ ಡೆಲಿವರಿ ಆಯ್ಕೆ ಬಯಸಿದರೆ ಯಾವುದೇ ಚಿನ್ನ/ಬೆಳ್ಳಿ ನಾಣ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ಹಂತ:5 ಇದೀಗ ನೀವು ಖರೀದಿಸಿದ ಗೋಲ್ಡ್‌ನ ಮೊತ್ತವನ್ನು ನಮೂದಿಸಿ ಮತ್ತು 'ಪ್ರೊಸಿಡ್‌' ಕ್ಲಿಕ್ ಮಾಡಿ.
ಹಂತ:6 ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು 'ಪ್ರೊಸಿಡ್‌ ಟು ಪೇ' ಕ್ಲಿಕ್ ಮಾಡಿ.

ನೀವು ಹಣವನ್ನು ಪಾವತಿ ಮಾಡಿದ ತಕ್ಷಣ ನೀವು ಆಯ್ಕೆ ಮಾಡಿದ ಚಿನ್ನ ಮತ್ತು ಬೆಳ್ಳಿ ನೀವು ನೀಡಿದ ಮನೆಯ ವಿಳಾಸಕ್ಕೆ ಬರಲಿದೆ.

Best Mobiles in India

Read more about:
English summary
PhonePe has announced Dhanteras offers: get a cashback of up to Rs 2,500

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X