ಪ್ರತಿದಿನ 3 ಹಗಲು, 3 ರಾತ್ರಿ ಸಂಭವಿಸುವ ಗ್ರಹ ಪತ್ತೆ!

By Suneel
|

ಭೂಮಿ ಮೇಲಿನ 24 ಗಂಟೆಗಳ ಸಮಯಕ್ಕೆ ಒಂದು ಹಗಲು, ಒಂದು ರಾತ್ರಿ. ಸೂರ್ಯ ಬೆಳಿಗ್ಗೆ ಮೂಡಿ ಸಂಜೆ ಮುಳುಗುತ್ತಾನೆ. ನಕ್ಷತ್ರ ಚಂದ್ರನ ಬೆಳಕು ರಾತ್ರಿ ವೇಳೆ ಬಂದರೂ ಸಹ ಅದು ರಾತ್ರಿನೇ ಹೊರತು ಹಗಲು ಎನ್ನಲು ಸಾಧ್ಯವಿಲ್ಲ.

ಫೋನ್‌ ಕ್ಯಾಮೆರಾ ಬಳಸಿ ಯಾವುದೇ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

24 ಗಂಟೆಗಳ ನಡುವೆ ಸಂಭವಿಸುವ ಈ ಹಗಲು ರಾತ್ರಿಗಳು ಕೆಲವರಿಗೆ 'ಟೈಮ್‌ ಸಾಕಾಗುತ್ತಿಲ್ಲ' ಎನ್ನುವ ಹಾಗೆ ಮಾಡಿದೆ. ಹಾಗಂತ ಎರಡು ದಿನಕ್ಕೆ ಒಂದು ಹಗಲು, ಒಂದು ರಾತ್ರಿ ಇರುವ ಗ್ರಹ ಪತ್ತೆ ಮಾಡಲು ಸಾಧ್ಯವಿಲ್ಲ. ಆದ್ರೆ ಇಂತಹ ಅಲೋಚನೆಗಳಿಗೆ ಅಚ್ಚರಿ ಉಂಟು ಮಾಡುವ ಮಾಹಿತಿಯೊಂದನ್ನು ಈ ಲೇಖನದಲ್ಲಿ ಓದಿರಿ.

"ಒಂದು ದಿನಕ್ಕೆ ಮೂರು ಹಗಲು, ಮೂರು ರಾತ್ರಿ ಒಂದೇ ಗ್ರಹದಲ್ಲಿ ಸಂಭವಿಸುತ್ತದೆ' ಎಂಬ ಮಾಹಿತಿ ಕೇಳಲು ಎಷ್ಟೊಂದು ಅಚ್ಚರಿ ಎನಿಸುತ್ತದೆ ಅಲ್ಲವೇ. ಹೌದು, ಅಂತಹ ಒಂದು ಗ್ರಹವನ್ನು ಖಗೋಳ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ. ಈ ಗ್ರಹ ಯಾವುದು, ಪತ್ತೆ ಹಚ್ಚಿದವರು ಯಾರು, ಅದು ಹೇಗಿದೆ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಬೆಂಗಳೂರಿನಲ್ಲಿ 4 ಲಕ್ಷ ವರ್ಷಗಳ ಹಿಂದೆಯೇ ಮಾನವರ ಅಸ್ತಿತ್ವ!

ಮೂರು ಸೂರ್ಯರಿರುವ ಗ್ರಹ ಪತ್ತೆ

ಮೂರು ಸೂರ್ಯರಿರುವ ಗ್ರಹ ಪತ್ತೆ

ಖಗೋಳ ವಿಜ್ಞಾನಿಗಳ ತಂಡವೊಂದು ಒಂದು ಗ್ರಹಕ್ಕೆ ಮೂರು ಸೂರ್ಯರು (ನಕ್ಷತ್ರಗಳು) ಇರುವ ಗ್ರಹವೊಂದನ್ನು ಇತರೆ ಗ್ರಹಗಳನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಅನ್ವೇಷಣೆ ಮಾಡಿದ್ದಾರೆ.

ದಿನಕ್ಕೆ 3 ಬಾರಿ ಸೂರ್ಯೋದಯ ಮತ್ತು 3 ಬಾರಿ ಸೂರ್ಯಾಸ್ತ

ದಿನಕ್ಕೆ 3 ಬಾರಿ ಸೂರ್ಯೋದಯ ಮತ್ತು 3 ಬಾರಿ ಸೂರ್ಯಾಸ್ತ

ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿರುವ ಗ್ರಹವು ಮೂರು ಸೂರ್ಯರ (ನಕ್ಷತ್ರಗಳ)ಸುತ್ತ ಸುತ್ತುವ ಗ್ರಹವಾಗಿದ್ದು ಇಲ್ಲಿ ಒಂದು ದಿನಕ್ಕೆ 3 ಬಾರಿ ಸೂರ್ಯೋದಯ ಮತ್ತು 3 ಬಾರಿ ಸೂರ್ಯಾಸ್ತವಾಗುತ್ತದೆ.

SPHERRE ನಿಂದ ಗ್ರಹ ಪತ್ತೆ

SPHERRE ನಿಂದ ಗ್ರಹ ಪತ್ತೆ

ದಕ್ಷಿಣ ಯೂರೋಪಿಯನ್‌ನ ಸ್ಪೇಸ್ ವೀಕ್ಷಣಾಲಯದ ಅತಿ ದೊಡ್ಡ ಟೆಲಿಸ್ಕೋಪ್ 'SPHERRE' (Spectro-Polarimetric High-Contrast Exoplanet Research Instrument) ಉಪಕರಣದಿಂದ ಈ ಗ್ರಹವನ್ನು ಪತ್ತೆಹಚ್ಚಲಾಗಿದೆ. ಇದರ ಹೆಸರೇನು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಎಚ್‌ಡಿ 131399

ಎಚ್‌ಡಿ 131399

ಮೂರು ಸೂರ್ಯೋದಯ ಮತ್ತು ಮೂರು ಸೂರ್ಯಾಸ್ತಗಳು ಆಗುವ ಈ ಗ್ರಹದ ಹೆಸರನ್ನು 'ಎಚ್‌ಡಿ 131399' ಎಂದು ಕರೆಯಲಾಗಿದೆ. ಅಲ್ಲದೇ ಗುರು ಗ್ರಹಕ್ಕಿಂತ 4 ಪಟ್ಟು ದೊಡ್ಡದಾಗಿದ್ದು, ಸೌರ ಮಂಡಲದಿಂದ ಹೊರವಲಯದಲ್ಲಿರುವ ಈ ಯುವ ಗ್ರಹವು 16 ದಶಲಕ್ಷ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು ಎಂದು ಖಗೋಳ ವಿಜ್ಞಾನಿಗಳು ಊಹಿಸಿದ್ದಾರೆ.

'ಎಚ್‌ಡಿ 131399' ಗ್ರಹದ ಉಷ್ಣತೆ

'ಎಚ್‌ಡಿ 131399' ಗ್ರಹದ ಉಷ್ಣತೆ

ಭೂಮಿಯಿಂದ 340 ಜ್ಯೋತಿರ್‌ ವರ್ಷಗಳಷ್ಟು ದೂರದಲ್ಲಿರುವ 'ಎಚ್‌ಡಿ 131399' ಗ್ರಹವು 580 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಹೊಂದಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯಿಂದ ಚಿತ್ರ ಸೆರೆ

ಭೂಮಿಯಿಂದ ಚಿತ್ರ ಸೆರೆ

'ಭೂಮಿಯಿಂದ ಫೋಟೋ ಕ್ಯಾಪ್ಚರ್‌ ಮಾಡಲು ಸಾಧ್ಯವಾದ ಕೆಲವು ಗ್ರಹಗಳಲ್ಲಿ ಇದು ಸಹ ಒಂದಾಗಿದೆ' ಎಂದು ಗ್ರಹ ಪತ್ತೆ ಹಚ್ಚಿದ ಅಮೆರಿಕ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್‌ ಅಪೈ'ರವರ ಸಂಶೋಧನ ತಂಡದಲ್ಲಿನ ಪಿಎಸ್.ಡಿ ವಿದ್ಯಾರ್ಥಿಯಾದ 'ಕೆವಿನ್‌ ವಾಗ್ನರ್' ಹೇಳಿದ್ದಾರೆ.

 'ಎಚ್‌ಡಿ 131399'

'ಎಚ್‌ಡಿ 131399'

" 'ಎಚ್‌ಡಿ 131399' ಗ್ರಹವು ಮೂರು ನಕ್ಷತ್ರಗಳ ಸುತ್ತ ಸುತ್ತುತ್ತಿದ್ದು, 'ಎಚ್‌ಡಿ 131399' ಗ್ರಹಕ್ಕೆ ಎರಡು ನಕ್ಷತ್ರಗಳು ತುಂಬಾ ಹತ್ತಿರದಲ್ಲಿದ್ದು, ಅವುಗಳು ಸಹ ಪರಸ್ಪರ ಸುತ್ತುತ್ತ ಪ್ರಧಾನ ನಕ್ಷತ್ರದ ಸುತ್ತ ತಿರುಗುತ್ತಿರುತ್ತವೆ. ಪ್ರತಿ ದಿನವು ಸಹ ಅಲ್ಲಿ ಮೂರು ಹಗಲು ಮೂರು ರಾತ್ರಿಗಳು ಸಂಭವಿಸುತ್ತವೆ", ಎಂದು ಗ್ರಹ ಪತ್ತೆ ಹಚ್ಚಿದ ವಾಗ್ನರ್‌ ಹೇಳಿದ್ದಾರೆ.

 'ಎಚ್‌ಡಿ 131399' ಸುತ್ತುವ ನಕ್ಷತ್ರಗಳು ಯಾವುದು?

'ಎಚ್‌ಡಿ 131399' ಸುತ್ತುವ ನಕ್ಷತ್ರಗಳು ಯಾವುದು?

'ಎಚ್‌ಡಿ 131399' ಗ್ರಹ ಸುತ್ತುವ ಮೂರು ನಕ್ಷತ್ರಗಳನ್ನು ಎಚ್‌ಡಿ 131399ಎ, ಎಚ್‌ಡಿ 131399ಬಿ, ಎಚ್‌ಡಿ 131399ಸಿ ಎಂದು ಗುರುತಿಸಲಾಗಿದ್ದು, ಎಚ್‌ಡಿ 131399ಎ ಪ್ರಧಾನ ನಕ್ಷತ್ರವಾಗಿದ್ದು ಸೂರ್ಯನಿಗಿಂತ ಶೇಕಡ 80 ರಷ್ಟು ದೊಡ್ಡದಾಗಿದೆ ಎಂದು ವಾಗ್ನರ್‌ ಹೇಳಿದ್ದಾರೆ.

rn

ಎಚ್‌ಡಿ 131399

'ಎಚ್‌ಡಿ 131399' ಗ್ರಹವು, ಎಚ್‌ಡಿ 131399ಎ ಸುತ್ತ ಸುತ್ತುತ್ತಿದ್ದು, ಸೌರವ್ಯೂಹಕ್ಕೆ ಹೋಲಿಸಿದ್ದಲ್ಲಿ ಪ್ಲೂಟೊ ಕಕ್ಷೆಯ ಎರಡರಷ್ಟು ಇದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಎಚ್‌ಡಿ 131399ಬಿ ಮತ್ತು ಎಚ್‌ಡಿ 131399ಸಿ ನಕ್ಷತ್ರಗಳ ನಡುವಿನ ಅಂತರ ಸೂರ್ಯ ಮತ್ತು ಶನಿ ಗ್ರಹದ ನಡುವೆ ಇರುವ ದೂರದಷ್ಟು ಅಂತರವಿದೆ. ವೀಡಿಯೊ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!

ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಇಂಜಿನಿಯರಿಂಗ್‌ ಮೀಮ್ಸ್‌ಗಳು!ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಇಂಜಿನಿಯರಿಂಗ್‌ ಮೀಮ್ಸ್‌ಗಳು!

Best Mobiles in India

Read more about:
English summary
Planet Found with Three Suns has Triple Sunsets and Sunrises. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X