Subscribe to Gizbot

ಫೋನ್‌ ಕ್ಯಾಮೆರಾ ಬಳಸಿ ಯಾವುದೇ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

Written By:

ತಂತ್ರಜ್ಞಾನ ಮನುಷ್ಯನ ಎಲ್ಲಾ ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಸರಳಗೊಳಿಸುತ್ತಿದೆ. ಬಹುಸಂಖ್ಯಾತ ಯುವ ಜನತೆ ಪುಸ್ತಕಗಳನ್ನು ಇಂದು ಕೇವಲ ಆನ್‌ಲೈನ್‌ ಮೂಲಕವೇ ಓದುತ್ತಾರೆ. ಏಕೆ ಗೊತ್ತೇ?

ಕೆಲವೊಂದು ಪುಸ್ತಕಗಳನ್ನು ಖರೀದಿಸುವುದು ಹೆಚ್ಚು ವೆಚ್ಚದಾಯಕ. ಅಲ್ಲದೇ ಬಳಸಿದಂತೆಲ್ಲಾ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹೋದಲೆಲ್ಲಾ ಹೊತ್ತೋಯ್ಯುವುದು ಸಹ ಕಷ್ಟಾನೆ. ಆದ್ರೆ ಇಂದು ಆನ್‌ಲೈನ್ ರೀಡಿಂಗ್‌ ವೆಚ್ಚದಾಯಕವು ಅಲ್ಲ, ಕ್ಯಾರಿ ಮಾಡಲು ಕಷ್ಟವು ಅಲ್ಲ. ಅಲ್ಲದೇ ಒಮ್ಮೆ ಗೂಗಲ್‌ ಡ್ರೈವ್‌ನಲ್ಲಿ ಸೇವ್ ಮಾಡಿದರೆ ಆಯಿತು ಎಂದು ಹೇಳುವವರೇ ಹೆಚ್ಚು.

ಗೂಗಲ್ ಮ್ಯಾಪ್ಸ್ ಆಫ್‌ಲೈನ್ ಬಳಕೆ ಹೇಗೆ?

ಹಿಂದೆಲ್ಲಾ ಎಲ್ಲಾ ಭಾಷಿಗರು ಇಂಗ್ಲೀಷ್‌ ಪದಗಳ ಅರ್ಥ ತಿಳಿಯಲು ಕೈಯಲ್ಲಿ ಡಿಕ್ಷನರಿ ಹಿಡಿದು ಪದವನ್ನು ಹುಡುಕ ಬೇಕಿತ್ತು. ಆದರೆ ಇಂದು ಒಮ್ಮೆ ಸ್ಮಾರ್ಟ್‌ಫೋನ್‌ಗಳಿಗೆ ಆಫ್‌ಲೈನ್ ಡಿಕ್ಷನರಿ ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡಿದರೆ ಪದಗಳ ಅರ್ಥವನ್ನು ಬಹುಬೇಗ ತಿಳಿಯಬಹುದು.

ಸ್ವಲ್ಪ ತಿಂಗಳ ಹಿಂದಿನ ಡಿಕ್ಷನರಿಗಳು ಕೇವಲ ಇಂಗ್ಲೀಷ್‌ ಪದಗಳ ಅರ್ಥವನ್ನು ಅವರವರ ಸ್ಥಳೀಯ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದ್ದವು. ಆದರೆ ಇಂದು ಸ್ಮಾರ್ಟ್‌ಫೋನ್‌ ಕ್ಯಾಮೆರಾ ಬಳಸಿ ನೀವು ನೋಡಿದ ಯಾವುದೇ ಭಾಷೆಯ ಪದದ ಅರ್ಥವನ್ನು ನಿಮ್ಮ ಭಾಷೆಯಲ್ಲಿ ತಿಳಿಯಬಹುದಾಗಿದೆ. 103 ಭಾಷೆಗಳನ್ನು ಟೈಪ್‌ ಮಾಡುವುದರ ಮುಖಾಂತರ ಭಾಷಾಂತರಿಸಬಹುದು. 52 ಭಾಷೆಗಳನ್ನು ಇಂಟರ್ನೆಟ್‌ ಇಲ್ಲದೆಯು ಸಹ ಭಾಷಾಂತರಿಸಬಹುದು.

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಬಳಸಿ ಯಾವುದೇ ಭಾಷೆಯ ಪದವನ್ನು ತಮ್ಮ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನೀವು ಲೇಟೆಸ್ಟ್‌ 'ಗೂಗಲ್‌ ಟ್ರ್ಯಾನ್ಸ್‌ಲೇಟ್‌' ಅಪ್ಲಿಕೇಶನ್ ಅನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಫೋನ್‌ಗಳಲ್ಲಿ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಹಂತ 2

ಹಂತ 2

ಆಪ್‌ ಇನ್‌ಸ್ಟಾಲ್‌ ಆದ ನಂತರ ಪ್ರಾಥಮಿಕವಾಗಿ ನೀವು ಒಂದು ಸೆಟ್ಟಿಂಗ್‌ ವ್ಯವಸ್ಥೆ ಮಾಡಬೇಕು. ಚಿತ್ರದಲ್ಲಿ ಕಾಣುವಂತೆ ಪೇಜ್‌ ಓಪನ್‌ ಆದಾಗ ಪ್ರೈಮರಿ ಭಾಷೆಯಾಗಿ ನೀವು ಅರ್ಥ ಮಾಡಿಕೊಳ್ಳುವ ಭಾಷೆಯನ್ನು, ಎರಡನೇಯದಾಗಿ ನೀವು ಯಾವ ಭಾಷೆಯನ್ನು ಭಾಷಾಂತರಿಸಬೇಕು ಎಂದುಕೊಂಡಿದ್ದೀರೋ ಅದನ್ನು ವ್ಯವಸ್ಥೆಗೊಳಿಸಿ.

ಹಂತ 3

ಹಂತ 3

ನಂತರ 'Finished' ಬಟನ್‌ ಕ್ಲಿಕ್‌ ಮಾಡಿ

ಹಂತ 4

ಹಂತ 4

ಆಪ್‌ ಓಪನ್‌ ಮಾಡಿ ಕ್ಯಾಮೆರಾ ಬಟನ್‌ ಮೇಲೆ ಕ್ಲಿಕ್‌ ಮಾಡಿ ನೀವು ಯಾವ ಭಾಷೆಯ ಪದವನ್ನು ಭಾಷಾಂತರಿಸಬೇಕು ಎಂದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್‌ ಮಾಡಿ.

ಹಂತ 5

ಹಂತ 5

ನೀವು ಶೀಘ್ರವಾಗಿ ನಿಮ್ಮ ಭಾಷೆಯಲ್ಲಿ ಭಾಷಾಂತರಿಸಿದ ಪದವನ್ನು ಕಾಣಬಹುದು. ಚಿತ್ರ ನೋಡಿ.

ಹಂತ 6

ಹಂತ 6

ಗೂಗಲ್‌ ಟ್ರ್ಯಾನ್ಸ್‌ಲೇಟ್‌ ಆಪ್‌ ಬಳಕೆದಾರರಿಗೆ ಇತರೆ ರಾಜ್ಯಗಳಿಗೆ, ವಿದೇಶಕ್ಕೆ ಹೋದಾಗಲಂತೂ ಅತ್ಯಧಿಕ ಉಪಯೋಗವಾಗುತ್ತದೆ. ಕಾರಣ ಯಾವುದೇ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಆಪ್‌ನ ಇತರ ಉಪಯೋಗಗಳನ್ನು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಗೂಗಲ್‌ ಟ್ರ್ಯಾನ್ಸ್‌ಲೇಟ್‌ ಆಪ್‌ ಇತರೆ ಉಪಯೋಗಗಳು

ಗೂಗಲ್‌ ಟ್ರ್ಯಾನ್ಸ್‌ಲೇಟ್‌ ಆಪ್‌ ಇತರೆ ಉಪಯೋಗಗಳು

* 103 ಭಾಷೆಗಳ ನಡುವೆ ಭಾಷಾಂತರ
* 52 ಭಾಷೆಗಳನ್ನು ಇಂಟರ್ನೆಟ್‌ ಇಲ್ಲದೇಯು ಭಾಷಾಂತರಿಸಬಹುದು
* 29 ಭಾಷೆಗಳನ್ನು ಶೀಘ್ರವಾಗಿ ಕ್ಯಾಮೆರಾ ಬಳಸಿ ಭಾಷಾಂತರಿಸಬಹುದು
* ಉತ್ತಮ ಮಟ್ಟದಲ್ಲಿ 37 ಭಾಷೆಗಳ ಭಾಷಾಂತರಕ್ಕಾಗಿ ಕ್ಯಾಮೆರಾ ಮೋಡ್‌ ಬಳಸಬಹುದು
* 32 ಭಾಷೆಗಳಲ್ಲಿ ಮಾತನಾಡುವ ಮೂಲಕ ಭಾಷಾಂತರ
* 93 ಭಾಷೆಗಳನ್ನು ಕೀಬೋರ್ಡ್‌ ಬಳಸದೇ ಡ್ರಾಯಿಂಗ್‌ ಮಾಡುವ ಮುಖಾಂತರ ಭಾಷಾಂತರಿಸಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How To Use Smartphone Camera To Translate Anything. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot