Subscribe to Gizbot

ಜಿಯೋಗಿಂತಲೂ ಬೆಸ್ಟ್ ಪ್ಲಾನ್ ಇಲ್ಲಿದೆ...!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ದರ ಸಮರ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಯಾವ ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ಕಂಪನಿಗಳು ಬೆಸ್ಟ್ ಆಫರ್ ನೀಡುತ್ತಿವೆ ಎಂಬುದನ್ನು ತಿಳಿಸಿದುಕೊಳ್ಳುವುದು ಮುಖ್ಯವಾಗಿದೆ. ಒಂದೊಂದು ಕಂಪನಿಗಳಲ್ಲಿ ಒಂದೊಂದು ಬೆಸ್ಟ್ ಆಫರ್ ಗಳು ಇದೆ.

ಜಿಯೋಗಿಂತಲೂ ಬೆಸ್ಟ್ ಪ್ಲಾನ್ ಇಲ್ಲಿದೆ...!

ಹೀಗಾಗಿ ಗ್ರಾಹಕರಲ್ಲಿ ಮನೆ ಮಾಡಿರುವ ಗೊಂದಲವನ್ನು ನಿವಾರಸಿಸುವ ಸಲುವಾಗಿ, ಸದ್ಯ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಬೆಸ್ಟ್ ಪ್ಲಾನ್ ಗಳ ಕುರಿತ ಮಾಹಿತಿ ನೀಡುವ ಪ್ರಯತ್ನ ಇದಾಗಿದೆ. ಇಲ್ಲಿ ನಿಮಗೆ ಬೇಕಾದ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ರೂ.244 ಪ್ಲಾನ್:

ಏರ್‌ಟೆಲ್ ರೂ.244 ಪ್ಲಾನ್:

ಏರ್‌ಟೆಲ್ ತನ್ನ ಗ್ರಾಹಕರಿಗೆ 70 ದಿನಗಳ ಕಾಲ ಪ್ರತಿ ದಿನ ಒಂದು GB 4G ಡೇಟಾವನ್ನು ನೀಡಲಿದೆ. ಅಲ್ಲದೇ ಪ್ರತಿ ನಿತ್ಯ ಏರ್ ಟೆಲ್ ಟು ಏಲ್ ಟೆಲ್ 300 ನಿಮಿಷಗಳ ಕಾಲ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಪ್ರತಿ ವಾರ 1200 ನಿಮಿಷಗಳ ಕಾಲ ಬೇರೆ ನೆಟ್ ವರ್ಕ್ ಗೆ ಕರೆ ಮಾಡಬಹುದಾಗಿದೆ.

ರಿಲಯನ್ಸ್ ಜಿಯೋ ರೂ.309 ಆಫರ್:

ರಿಲಯನ್ಸ್ ಜಿಯೋ ರೂ.309 ಆಫರ್:

ಧನ್ ಧನಾ ಧನ್ ಹೆಸರಿನಲ್ಲಿ ಜಿಯೋ ತನ್ನ ಗ್ರಾಹಕರಿಗೆ ರೂ. 309ಕ್ಕೆ ಒಂದು GB 4G ಡೇಟಾವನ್ನು ನೀಡಲಿದೆ. ಇದರೊಂದಿಗೆ ಪ್ರತಿ ದಿನ ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಿದೆ. ಅದುವೇ 84 ದಿನಗಳ ವ್ಯಾಲಿಡಿಟಿಗೆ.

ಬಿಎಸ್‌ಎನ್ಎಲ್ ರೂ.333 ಪ್ಲಾನ್:

ಬಿಎಸ್‌ಎನ್ಎಲ್ ರೂ.333 ಪ್ಲಾನ್:

ಬಿಎಸ್‌ಎನ್ಎಲ್ 90 ದಿನಗಳ ಕಾಲದ ವ್ಯಾಲಿಡಿಟಿಯನ್ನು ಹೊಂದಿರುವ ಟ್ರಿಪಲ್ ಎಸಿಇ ಪ್ಲಾನ್ ಇದಾಗಿದ್ದು, ಪ್ರತಿ ನಿತ್ಯ ಮೂರು GB ಡೇಟಾವನ್ನು 3G ವೇಗದಲ್ಲಿ ನೀಡಲಿದೆ ಎನ್ನಲಾಗಿದೆ.

ಏರ್‌ಟೆಲ್ ರೂ.345 ಪ್ಲಾನ್:

ಏರ್‌ಟೆಲ್ ರೂ.345 ಪ್ಲಾನ್:

ಏರ್‌ಟೆಲ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿ ನಿತ್ಯ 2GB 4G ಡೇಟಾ ದೊರೆಯಲಿದೆ. ಅಲ್ಲದೇ ಉಚಿತ ಕರೆ ಮಾಡುವ ಅವಕಾಶವ ಅದುವೇ ಯಾವುದೇ ಮಿತಿ ಇಲ್ಲದೇ.

ಬಿಎಸ್‌ಎನ್ಎಲ್ ರೂ.349 ಪ್ಲಾನ್:

ಬಿಎಸ್‌ಎನ್ಎಲ್ ರೂ.349 ಪ್ಲಾನ್:

ಬಿಎಸ್‌ಎನ್ಎಲ್ ಡಿಲ್ ಕೋಲ್ ಕೆ ಬೋಲೊ ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಪ್ರತಿ ನಿತ್ಯ 29 ದಿನಗಳ ವ್ಯಾಲಿಡಿಟಿಗೆ 2 GB 3G ಡೇಟಾವನ್ನು ನೀಡಲಿದೆ. ಅಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ನೀಡಿದೆ.

ವೊಡೋಪೋನ್ ರೂ.346 ಪ್ಲಾನ್:

ವೊಡೋಪೋನ್ ರೂ.346 ಪ್ಲಾನ್:

ಈ ಎಲ್ಲದರ ನಡುವೆ ವೊಢೋಫೋನ್ ಸಹ ಒಂದು ಪ್ಲಾನ್ ಘೋಷನೆ ಮಾಡಿದೆ. 56 ದಿನಗಳ ವ್ಯಾಲಿಡಿಟಿಗೆ ಪ್ರತಿನಿತ್ಯ 1GB 4G ಡೇಟಾವನ್ನು ನೀಡಲಿದ್ದು, ಅಲ್ಲದೇ ಅನ್ ಲಿಮಿಟೆಡ್ ಲೋಕಲ್ ಕಾಲ್ ಮತ್ತು 300 ನಿಮಿಷಗಳ ಎಸ್‌ಟಿಡಿ ಕರೆ ಮಾಡುವ ಅವಕಾಶವನ್ನು ನೀಡಲಿದೆ.

ರಿಲಯನ್ಸ್ ಜಿಯೋ ರೂ.509 ಪ್ಲಾನ್:

ರಿಲಯನ್ಸ್ ಜಿಯೋ ರೂ.509 ಪ್ಲಾನ್:

ಜಿಯೋ ಧನ್ ಧನಾ ಧನ್ ಆಫರ್ ನಲ್ಲೇ ಮತ್ತೊಂದು ಆಯ್ಕೆ ದೊರೆಯಲಿದೆ. ಇದುವೇ ಪ್ರತಿ ನಿತ್ಯ ಅತೀ ವೇಗದ 4G ಡೇಟಾವನ್ನು 2 GB ನೀಡಲಿದೆ. ಅಲ್ಲದೇ ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Since the inception of the Reliance Jio 4G service, there is a boom in the 4G usage all over the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot