ಭಾರತದಲ್ಲಿ 5G ಸೇವೆಗೆ ಅಧಿಕೃತ ಚಾಲನೆ ನೀಡಿದ ಪ್ರಧಾನಿ ಮೋದಿ! ಎಲ್ಲೆಲ್ಲಿ ಲಭ್ಯ!

|

ಭಾರತದಲ್ಲಿ ಬಹು ನಿರೀಕ್ಷಿತ 5G ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದ 5G ಸೇವೆ ಇಂದಿನಿಂದ ಭಾರತದಲ್ಲಿ ಅಧಿಕೃತವಾಗಿದೆ. ಭಾರತದಲ್ಲಿ 5G ಸೇವೆಯನ್ನು ಇಂಡಿಯನ್‌ ಮೊಬೈಲ್‌ ಕಾಂಗ್ರೆಸ್‌ 2022ರಲ್ಲಿ ಉದ್ಘಾಟಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಮಿಂಚಿನ ವೇಗದ ಅಂತರ್ಜಾಲ ಸೇವೆ ನೀಡುವ 5G ಯುಗ ಪ್ರಾರಂಭವಾಗಿದೆ. ಹಾಗಂತ 5G ಸೇವೆ ಈ ಕ್ಷಣದಿಂದಲೇ ಲಭ್ಯವಾಗುವುದಿಲ್ಲ ಅನ್ನೊದು ಕೂಡ ಇಲ್ಲಿ ಗಮನಿಸಬೇಕಾದ ವಿಚಾರ.

ಮೋದಿ

ಹೌದು, ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾರಂಭದಲ್ಲಿ ಭಾರತದಲ್ಲಿ 5G ಸೇವೆಗೆ ಪ್ರಧಾನಿ ಮೋದಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ಕ್ವಾಲ್‌ಕಾಮ್‌ ಕಂಪೆನಿಗಳು ತಮ್ಮ 5G ಸೇವೆಗಳು ಮತ್ತು ಅದರ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರದರ್ಶನವನ್ನು ಮಾಡಿವೆ. ಇನ್ನು ಭಾರತದಲ್ಲಿ ದೀಪಾವಳಿ ವೇಳೆಗೆ 5G ಸೇವೆಗಳು ಪ್ರಮುಖ ಮಹಾನಗರಗಳಲ್ಲಿ ಲಭ್ಯವಾಗಲಿವೆ.

ಮೋದಿ

5G ಸೇವೆಗೆ ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಮೂಲಕ ಹೊಸ ತಲೆಮಾರಿನ ಇಂಟರ್‌ನೆಟ್‌ ಸೇವೆಯನ್ನು ಪರಿಚಯಿಸಿದ್ದಾರೆ. ಮಿಂಚಿನ ವೇಗದಲ್ಲಿ ಅಂತರ್ಜಾಲ ಸೇವೆ ನೀಡುವ 5G ನೆಟ್‌ವರ್ಕ್‌ ದೀಪಾವಳಿ ವೇಳೆಗೆ ಲಭ್ಯವಾಗಲಿದೆ. ಇನ್ನು ಎಂಡ್-ಟು-ಎಂಡ್ 5G ಟೆಕ್ನಾಲಜಿ ಸೇವೆಯನ್ನು ಪ್ರಾರಂಭಿಕ ಹಂತದಲ್ಲಿ ಕೆಲವು ಮಹಾನಗರಗಳಲ್ಲಿ ಮಾತ್ರ ದೊರೆಯಲಿದೆ. ಇನ್ನು 5G ನೆಟ್‌ವರ್ಕ್ ಬಳಕೆದಾರರಿಗೆ ವೇಗವಾದ ಇಂಟರ್ನೆಟ್ ವೇಗವನ್ನು ನೀಡುವುದಲ್ಲದೆ, ವಿಪತ್ತು ನಿರ್ವಹಣೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಬೆಂಬಲವನ್ನು ನೀಡಲು ಸಹಾಯ ಮಾಡಲಿದೆ.

ಯಾವ ನಗರಗಳಲ್ಲಿ ಲಭ್ಯ?

ಯಾವ ನಗರಗಳಲ್ಲಿ ಲಭ್ಯ?

ಭಾರತದಲ್ಲಿ 5G ಸೇವೆಯನ್ನು ಕೆಲವು ಆಯ್ದ ಮೆಟ್ರೋ ನಗರಗಳಲ್ಲಿ ಪರಿಚಯಿಸಲಾಗುತ್ತಿದೆ. ಇದರಲ್ಲಿ ಭಾರತದಲ್ಲಿ 13 ಪ್ರಮುಖ ನಗರಗಳಾದ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಸೇರಿವೆ. ಈ ನಗರಗಳಲ್ಲಿ 5G ಸೇವೆ ದೀಪಾವಳಿ ಸಮಯದಲ್ಲಿ ಆರಂಭವಾಗಲಿದೆ. ಇದರಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಮೊದಲು ತಮ್ಮ 5G ಸೇವೆ ಪ್ರಾರಂಭಿಸಲಿವೆ.

5G

ಇನ್ನು 5G ಸೇವೆ ಆಯ್ದ ಮೆಟ್ರೋ ನಗರಗಳಲ್ಲಿ ಪ್ರಾರಂಭವಾದರೂ ಕೂಡ ಎಲ್ಲರಿಗೂ ಕೂಡ ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಆದರೆ ಕೆಲವು ಭಾಗಗಳಲ್ಲಿ ಬಳಕೆದಾರರು ಕನಿಷ್ಠ 5G ನೆಟ್‌ವರ್ಕ್ ಅನ್ನು ಆನಂದಿಸಲು ಸಾಧ್ಯವಾಗುತ್ತದೆ. ನಂತರದ ದಿನಗಳಲ್ಲಿ ಭಾರತದ ಉಳಿದ ನಗರಗಳು, ಪಟ್ಟಣಗಳು ​​ಮತ್ತು ಹಳ್ಳಿಗಳು ಕೂಡ 5G ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇದಕ್ಕಾಗಿ ಕನಷ್ಠ ಎರಡರಿಂದ ಮೂರು ವರ್ಷಗಳ ಅವಧಿ ಬೇಕಾಗಲಿದೆ ಎಂದು ಹೇಳಲಾಗಿದೆ.

5G ನೆಟ್‌ವರ್ಕ್‌ನ ವಿಶೇಷತೆ ಏನು?

5G ನೆಟ್‌ವರ್ಕ್‌ನ ವಿಶೇಷತೆ ಏನು?

ಇನ್ನು 5G ಸೇವೆ 4G ಗಿಂತ 10 ಪಟ್ಟು ವೇಗದ ಇಂಟರ್ನೆಟ್ ವೇಗವನ್ನು ನೀಡಲಿದ್ದು, ಇದು ಸೆಕೆಂಡಿಗೆ 20Gbps ವರೆಗೆ ಅಥವಾ ಸೆಕೆಂಡಿಗೆ 100Mbps ಗಿಂತ ಹೆಚ್ಚಿನ ಡೇಟಾ ವರ್ಗಾವಣೆ ವೇಗವನ್ನು ನೀಡಲಿದೆ. ಪ್ರಸ್ತುತ 4G ಸೇವೆಯಲ್ಲಿ 1Gbps ವೇಗವನ್ನು ಕಾಣಬಹುದಾಗಿದೆ. ಇನ್ನು 5G ಸೇವೆಯನ್ನು ಪಡೆಯುವುದಕ್ಕಾಗಿ 5G ಪ್ಲಾನ್‌ಗಳಿಗೆ ಹೆಚ್ಚು ಹಣವನ್ನು ಪಾವತಿಸಬೇಕಾದ ಅಗತ್ಯವಿಲ್ಲ. 5G ಸೇವೆಗಳನ್ನು ಕೂಡ ಕೈಗೆಟುಕುವ ಬೆಲೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಭಾರತ ಸರ್ಕಾರ ಈಗಾಗಲೇ ದೃಢಪಡಿಸಿದೆ.

ಡಿಜಿಟಲ್

ಭಾರತದಲ್ಲಿ 5G ಸೇವೆಗಳು 'ಡಿಜಿಟಲ್ ಇಂಡಿಯಾ'ಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ಭಾರತದ ಆರ್ಥಿಕತೆಯು 2023 ಮತ್ತು 2040 ರ ನಡುವೆ ಅಂದಾಜು 3,64,000 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎನ್ನಲಾಗಿದೆ. ಇನ್ನು 5G ಸೇವೆಗಳು ಭಾರತದಲ್ಲಿ ಇ-ಹೆಲ್ತ್, ವರ್ಧಿತ ರಿಯಾಲಿಟಿ, ಸ್ವಯಂಚಾಲಿತ ವಾಹನಗಳು, ಸುಧಾರಿತ ಮೊಬೈಲ್ ಕ್ಲೌಡ್ ಗೇಮಿಂಗ್ ಸಲ್ಯೂಶನ್‌ಗಳಿಗೆ ಪ್ರಯೋಜನಕಾರಿಯಾಗಲಿದೆ.

Best Mobiles in India

English summary
PM modi launches 5G network in India: here are the details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X