ಪೊಕೊ ಡೇಸ್‌ ಸೇಲ್ ‌2020!..ಪೊಕೊ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿಯಿಂದ ಪ್ರತ್ಯೇಕವಾದ ನಂತರ ಪೊಕೊ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಪೊಕೊ ಕಂಪೆನಿ ಫ್ಲಿಪ್‌ಕಾರ್ಟ್‌ನಲ್ಲಿ ಪೊಕೊ ಡೇಸ್‌ ಸೇಲ್‌ ಅನ್ನು ಆಯೋಜಿಸಲಾಗಿದೆ. ನೀವು ಯಾವುದೇ ಪೊಕೊ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಯೋಚನೆ ಇದ್ದರೆ ಇದು ಸದಾವಕಾಶವಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಪೊಕೊ ಡೇಸ್‌ ಸೇಲ್‌ ಅನ್ನು ನಡೆಸುತ್ತಿದೆ. ಈ ಸೇಲ್‌ನಲ್ಲಿ ಪೊಕೊ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಇನ್ನು ಈ ಸೇಲ್‌ನಲ್ಲಿ ಪೊಕೊ C3, ಪೊಕೊ M2 ಪ್ರೊ, ಪೊಕೊ M2 ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯ ಬೆಲೆಗಳಿಗಿಂತ ಆಫರ್‌ನಲ್ಲಿ ಬೆಲೆ ಕಡಿತವನ್ನು ಪಡೆದುಕೊಂಡಿವೆ. ಎನ್ನಲಾಗಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗ:ಇಗೆ ಬೆಲೆ ಕಡಿತವನ್ನು ಮಾಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಪೊಕೊ X3

ಪೊಕೊ X3

ಪೊಕೊ X3 ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯಂಟ್‌ ಮೂಲ ಬೆಲೆ 16,999 ರೂ ಆಗಿದೆ. ಆದರೆ ಪೊಕೊ ಡೇಸ್‌ ಸೇಲ್‌ನಲ್ಲಿ ಇದರ ಬೆಲೆ 15,999 ರೂ ಆಗಿದ್ದು, 1,000 ರೂ.ಬೆಲೆ ಕಡಿತವನ್ನು ಹೊಂದಿದೆ. ಅಂತೆಯೇ, 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು ಮಾರಾಟದ ಸಮಯದಲ್ಲಿ 16,999 ರೂ., ಹಾಗೂ 8GB RAM ಹೊಂದಿರುವ ಟಾಪ್-ಎಂಡ್ ರೂಪಾಂತರವು 18,999 ರೂ. ಬೆಲೆಯನ್ನು ಹೊಂದಿದೆ.

ಪೊಕೊ C3

ಪೊಕೊ C3

ಇನ್ನು ಪೊಕೊ ಡೇಸ್‌ ಸೇಲ್‌ನಲ್ಲಿ ಪೊಕೊ C3 ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯೆಂಟ್‌ ಆಯ್ಕೆ 6,999ರೂ ಗೆ ಲಭ್ಯವಾಗಲಿದೆ. 4GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು 7,999 ರೂ.ಗೆ ಮಾರಾಟವಾಗುತ್ತಿದೆ.

ಪೊಕೊ M2 ಪ್ರೊ

ಪೊಕೊ M2 ಪ್ರೊ

ಪೊಕೊ M2 ಪ್ರೊ 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯೆಂಟ್‌ ಸ್ಮಾರ್ಟ್‌ಫೋನ್‌ 12,999 ರೂಗಳಿಗೆ ಲಭ್ಯವಾಗಲಿದೆ. ಇನ್ನು 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಇತರ ರೂಪಾಂತರವು 13,999 ರೂ. ಗೆ ಲಭ್ಯವಾಗಲಿದೆ. ಜೊತೆಗೆ 128GB ಸ್ಟೋರೇಜ್ ರೂಪಾಂತರದ ಸ್ಮಾರ್ಟ್‌ಫೋನ್‌ ಬೆಲೆ 15,999 ರೂ. ಆಗಿದೆ.

ಪೊಕೊ M2

ಪೊಕೊ M2

ಇನ್ನು ಪೊಕೊ M2 ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ಮಾಡೆಲ್‌ ಪೊಕೊ ಡೇಸ್‌ ಸೇಲ್‌ನಲ್ಲಿ 9,999 ರೂ. ಗೆ ಲಭ್ಯವಾಗಲಿದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ 10,999 ರೂಗಳಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Flipkart is offering up to Rs 1,000 off on several Poco smartphones. The Poco X3, M2 Pro and M2 are getting some considerable price cuts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X