ಪೊಕೊ M5 ಫೋನ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌; ಈ ಫೋನಿನ ಫೀಚರ್ಸ್‌ ಏನು?

|

ಪೊಕೊ ಮೊಬೈಲ್‌ ಸಂಸ್ಥೆಯು ನೂತನವಾಗಿ ಪೊಕೊ M5 (POCO M5) ಸ್ಮಾರ್ಟ್‌ಫೋನ್‌ ಅನ್ನು ಗ್ಲೋಬಲ್‌ ಆಗಿ ಇದೇ ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನ್ ಪೊಕೊ M4 ಸರಣಿಯ ಮುಂದುವರಿದ ಭಾಗವಾಗಿದ್ದು, ಕೆಲವೊಂದು ಆಕರ್ಷಕ ಅಪ್‌ಡೇಟ್‌ಗಳನ್ನು ಒಳಗೊಂಡಿರಲಿದೆ. ಪೊಕೊ M4 ಫೋನ್ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಪವರ್‌ನಲ್ಲಿರಲಿದೆ ಎನ್ನಲಾಗಿದೆ.

ಕಾಲಮಾನ

ಹೌದು, ಪೊಕೊ ಕಂಪನಿಯು ಪೊಕೊ M5 ಸ್ಮಾರ್ಟ್‌ಫೋನ್‌ ಅನ್ನು ಸೆಪ್ಟೆಂಬರ್ 5 ರಂದು, ಭಾರತೀಯ ಕಾಲಮಾನ ಸಂಜೆ 5:30 ಗಂಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ಬಿಡುಗಡೆ ಕಾರ್ಯಕ್ರಮವನ್ನು ಪೊಕೊ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್‌ ಮೂಲಕ ಲೈವ್‌ ಆಗಿ ವೀಕ್ಷಿಸಬಹುದು. ಸಂಸ್ಥೆಯು ತನ್ನ ವಿಭಾಗದಲ್ಲಿ ಪೊಕೊ M5 ಫೋನ್‌ 'ಅತ್ಯಂತ ಶಕ್ತಿಯುತ ಸ್ಮಾರ್ಟ್‌ಫೋನ್ ಅನ್ನು ಮೀರಿಸಲು ನಿರ್ಮಿಸಲಾಗಿದೆ' ಎಂದು ಪೊಕೊ ಕಂಪನಿಯು ಹೇಳಿಕೊಂಡಿದೆ. ಇನ್ನು ಪೊಕೊ M5 ಹಿಂಭಾಗದಲ್ಲಿ ದೊಡ್ಡ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ ಎಂದು ಟೀಸರ್ ವೀಡಿಯೊ ಖಚಿತಪಡಿಸುತ್ತದೆ.

ಹಿಂಭಾಗದಲ್ಲಿ

ಹಾಗೆಯೇ ಹಿಂಭಾಗದಲ್ಲಿ ಈ ಫೋನ್ ಡ್ಯುಯಲ್ ಟೋನ್ ಫಿನಿಶ್ ಅನ್ನು ಹೊಂದಿರುತ್ತದೆ. ಕ್ಯಾಮೆರಾ ಮಾಡ್ಯೂಲ್ ಕಪ್ಪು ಬಣ್ಣವನ್ನು ಇರಲಿದೆ. ಇನ್ನುಳಿದಂತೆ, ಪೊಕೊ M5 ಫೋನಿನ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು, ಭಾರತದಲ್ಲಿ ಯಾವಾಗ ಲಭ್ಯ ಎನ್ನುವ ಕೆಲವು ಸಂಗತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿರಲಿದೆ

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿರಲಿದೆ

ಪೊಕೊ M5 ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರುವ ಸಾದ್ಯತೆಯಿದೆ. ಇನ್ನು ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ವನ್ನು ಹೊಂದಿರಲಿದೆ. ಇದು 60 Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿರಲಿದೆ. ಜೊತೆಗೆ 394 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಹೊಂದಿರಲಿದೆ ಎಂದು ವರದಿಯಾಗಿದೆ.

ಯಾವ ಪ್ರೊಸೆಸರ್‌ ಕೆಲಸ ಮಾಡಲಿದೆ ?

ಯಾವ ಪ್ರೊಸೆಸರ್‌ ಕೆಲಸ ಮಾಡಲಿದೆ ?

ಪೊಕೊ M5 ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇದು ಆಂಡ್ರಾಯ್ಡ್‌ 12 ಔಟ್-ಆಫ್-ದಿ-ಬಾಕ್ಸ್ ನಲ್ಲಿ ರನ್ ಆಗಲಿದೆ ಎನ್ನಲಾಗಿದೆ. ಹಾಗೆಯೇ 6 GB RAM ಮತ್ತು 64 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಟ್ರಿಪಲ್‌ ಕ್ಯಾಮೆರಾ ರಚನೆ ಇರಲಿದೆಯಾ?

ಟ್ರಿಪಲ್‌ ಕ್ಯಾಮೆರಾ ರಚನೆ ಇರಲಿದೆಯಾ?

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿರಬಹುದು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿರಬಹುದು?

ಪೊಕೊ M5 ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, VoLTE ಬ್ಲೂಟೂತ್ v5.0, ವೈಫೈ, USB C v2.0, ಐಆರ್ ಬ್ಲಾಸ್ಟರ್ ಅನ್ನು ಬೆಂಬಲಿಸಲಿದೆ. ಪೊಕೊ M5 ಸ್ಮಾರ್ಟ್‌ಫೋನ್‌ ಭಾರತದಲ್ಲಿ 15,000 ರೂ. ಒಳಗಿನ ಬೆಲೆಯಲ್ಲಿ ದೊರೆಯುವ ಸಾದ್ಯತೆಯಿದೆ. ಇದು ಸೆಪ್ಟೆಂಬರ್ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ಸೆಪ್ಟೆಂಬರ್ 5 ರಂದು ನಡೆಯುವ ಈವೆಂಟ್‌ನಲ್ಲಿ ಪೊಕೊ M5 ಸ್ಮಾರ್ಟ್‌ಫೋನಿನ ಅಧಿಕೃತ ಬೆಲೆ ಮಾಹಿತಿಯನ್ನು ಪ್ರಕಟಿಸಲಾಗುವುದು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಇನ್ನು ಭಾರತದಲ್ಲಿ ಸುಮಾರು 13,000 - 15,000 ರೂ. ಗಳ ಆಸುಪಾಸಿನಲ್ಲಿ ಈ ಫೋನ್ ಲಭ್ಯವಾಗಬಹುದು ಎಂದು ಊಹಿಸಲಾಗಿದೆ.

Best Mobiles in India

English summary
POCO M5 Global Launch Set for September 5: Expected Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X