ಭಾರತದಲ್ಲಿ ಪೋರ್ಟ್ರೋನಿಕ್ಸ್ ಪ್ರೊಜೆಕ್ಟ್‌ರ ಲಾಂಚ್‌!..ಮನೆಯಲ್ಲೇ ಥೀಯೆಟರ್‌ ಫೀಲ್‌!

|

ಪ್ರಮುಖ ಪೋರ್ಟಬಲ್ ಗ್ಯಾಜೆಟ್‌ಗಳ ತಯಾರಕ ಸಂಸ್ಥೆ ಪೋರ್ಟ್ರೋನಿಕ್ಸ್ ಭಾರತದಲ್ಲಿ ನೂತನವಾಗಿ ಪೋಟ್ರಾನಿಕ್ಸ್‌ ಬೀಮ್‌ 300 (Portronics BEEM 300) ಎಂಬ ಹೆಸರಿನ ಹೊಸ ಪೋರ್ಟಬಲ್ ವೈ-ಫೈ ಮಲ್ಟಿಮೀಡಿಯಾ LED ಪ್ರೊಜೆಕ್ಟರ್ ಅನ್ನು ಬಿಡುಗಡೆ ಮಾಡಿದೆ. ಇದು ಬರೋಬ್ಬರಿ 200 ಇಂಚಿನ 1080P ಪ್ರೊಜೆಕ್ಷನ್ ಹೊಂದಿದ್ದು, 250 ANSI ಲುಮೆನ್ಸ್ ಅಲ್ಟ್ರಾ-ಲೈಟ್ ಬೀಮ್, 10 ವ್ಯಾಟ್‌ಗಳ ಹೈ-ಫಿಡೆಲಿಟಿ ಆಡಿಯೊ ಬ್ಲಿಸ್ ಮತ್ತು ಇನ್ನೂ ಹೆಚ್ಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸಾಧನವು

ಹೌದು, ನೂತನ ಪೋರ್ಟ್ರೋನಿಕ್ಸ್ ಬೀಮ್‌ 300 ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಸಾಧನವು ಪೂರ್ಣ ಹೆಚ್‌ಡಿ ಗುಣಮಟ್ಟದ ವಿಡಿಯೋ ಉತ್ಪಾದಿಸುವ LED ಪ್ರೊಜೆಕ್ಟರ್ ಆಗಿದೆ. ಇದು ದೃಶ್ಯಗಳನ್ನು 16:9 ಅಥವಾ 4:3 ಆಕಾರ ಅನುಪಾತದಲ್ಲಿ ಬಿತ್ತರಿಸುವುದು. ಈ ಪೋಟ್ರಾನಿಕ್ಸ್‌ ಬೀಮ್‌ 300 ಸಾಧನವನ್ನು ಬಳಕೆದಾರರು ಸ್ಮಾರ್ಟ್‌ಫೋನ್, ಪಿಸಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಗೇಮ್ ಕನ್ಸೋಲ್‌ಗೆ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದು.

ಫುಟ್‌ಪ್ರಿಂಟ್

ಈ ಸಾಧನವು ಕಾಂಪ್ಯಾಕ್ಟ್ ಫುಟ್‌ಪ್ರಿಂಟ್ ಪ್ರೊಜೆಕ್ಟರ್ ಅನ್ನು ಹೆಚ್ಚು ಪೋರ್ಟಬಲ್ ಮಾಡುತ್ತದೆ ಮತ್ತು ನೀವು 50 ರಿಂದ 200 ಇಂಚುಗಳ ವರೆಗಿನ ಡಿಸ್‌ಪ್ಲೇ ಗಾತ್ರವನ್ನು ಯೋಜಿಸಬಹುದು. ಮೂಲೆಗೆ (35 ಡಿಗ್ರಿ ವರೆಗೆ) ಮತ್ತು ಲಂಬವಾದ (45 ಡಿಗ್ರಿ ವರೆಗೆ) ಕೀಸ್ಟೋನ್ ಹೊಂದಾಣಿಕೆಗಳಿಗೆ ಪ್ರೊಜೆಕ್ಟರ್‌ನ ನಾಲ್ಕು-ಪಾಯಿಂಟ್ ಟ್ರೆಪೆಜಾಯ್ಡಲ್ ಫ್ರಂಟ್ ಪ್ರೊಜೆಕ್ಷನ್ ಯಾವುದೇ ತೊಂದರೆಗಳಿಲ್ಲದೆ ಯಾವುದೇ ಸ್ಥಾನದಲ್ಲಿ ಇರಿಸಲು ಅವಕಾಶ ನೀಡುತ್ತದೆ ಎಂದು ಪೋರ್ಟ್ರೋನಿಕ್ಸ್ ಹೇಳುತ್ತದೆ.

ಸ್ಮಾರ್ಟ್‌ಫೋನ್

ಇದು ಇನ್-ಬಿಲ್ಟ್ 10W ಹೈ ಫಿಡೆಲಿಟಿ ಸ್ಪೀಕರ್‌ಗಳಿಂದ ವಾಯಿಸ್‌ ಗುಣಮಟ್ಟವನ್ನು ಒದಗಿಸಲಾಗಿದೆ ಮತ್ತು ಯಾವುದೇ ಹೆಚ್ಚುವರಿ ಆಡಿಯೊ ಸೆಟ್‌ಅಪ್ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ಬಳಕೆದಾರರು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಪ್ರೊಜೆಕ್ಟರ್‌ಗೆ ಕಂಟೆಂಟ್‌ ಅನ್ನು ಸ್ಟ್ರೀಮ್ ಮಾಡಲು ಸ್ಕ್ರೀನ್ ಮಿರರಿಂಗ್ ಸಹಾಯ ಮಾಡುತ್ತದೆ. ಈ ಸಾಧನವು ವೈ-ಫೈ ಮತ್ತು ಸ್ಕ್ರೀನ್ ಮಿರರಿಂಗ್ ಜೊತೆಗೆ, ಬೀಮ್‌ 300 AUX 3.5mm ಪೋರ್ಟ್, ಮೈಕ್ರೋ-SD ಅಥವಾ ಟ್ರಾನ್ಸ್‌ಫ್ಲ್ಯಾಶ್‌ ಕಾರ್ಡ್ ಸ್ಲಾಟ್ ಮತ್ತು AV ಪೋರ್ಟ್ ಅನ್ನು ಹೊಂದಿದೆ.

ಪೋರ್ಟಬಲ್

ಪೋರ್ಟ್ರೋನಿಕ್ಸ್ ತನ್ನ ಹೊಸ BEEM 300, ಪೋರ್ಟಬಲ್ ವೈಫೈ ಮಲ್ಟಿಮೀಡಿಯಾ ಎಲ್ಇಡಿ ಪ್ರೊಜೆಕ್ಟರ್ 10 ವ್ಯಾಟ್‌ಗಳ ಹೈ-ಫಿಡೆಲಿಟಿ ಆಡಿಯೊದೊಂದಿಗೆ ಬರುತ್ತದೆ. ಪೋರ್ಟಬಲ್ ಪ್ರೊಜೆಕ್ಟರ್ ನಿಮ್ಮ ಲೀವಿಂಗ್ ರೂಮ್‌, ಬೆಡ್‌ ರೂಮ್‌, ಪ್ಲೇ ರೂಮ್‌ ಅಥವಾ ಕಚೇರಿಗೆ ಉತ್ತಮ ಸೇರ್ಪಡೆಯಾಗಬಹುದು.

ಪ್ರೊಜೆಕ್ಟರ್ ಬೆಲೆ ಮತ್ತು ಲಭ್ಯತೆ

ಪ್ರೊಜೆಕ್ಟರ್ ಬೆಲೆ ಮತ್ತು ಲಭ್ಯತೆ

ಪೋರ್ಟ್ರೋನಿಕ್ಸ್ ಬೀಮ್‌ 300 (Portronics BEEM 300) ಪೋರ್ಟಬಲ್ Wi-Fi ಮಲ್ಟಿಮೀಡಿಯಾ LED ಪ್ರೊಜೆಕ್ಟರ್ 19,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದು ಸ್ಟ್ಯಾಂಡರ್ಡ್ 1 ವರ್ಷದ ವಾರಂಟಿಯೊಂದಿಗೆ ಲಭ್ಯವಿದೆ. ಇನ್ನು ಈ ಉತ್ಪನ್ನವು Portronics.com, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಮತ್ತು ಇತರ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್‌ ವ್ಯಾಪಾರಿಗಳ ಮೂಲಕ ಖರೀದಿಗೆ ಲಭ್ಯವಿದೆ.

ಫಿಲಿಪ್ಸ್‌ ಪ್ರೊಜೆಕ್ಟರ್‌ (Philips Pico PPX4010)

ಫಿಲಿಪ್ಸ್‌ ಪ್ರೊಜೆಕ್ಟರ್‌ (Philips Pico PPX4010)

ಫಿಲಿಪ್ಸ್‌ ಕಂಪನಿಯ ಈ ಪ್ರೊಜೆಕ್ಟರ್‌ 70 x 70 x 20mm ಸುತ್ತಳತೆಯನ್ನು ಹೊಂದಿದ್ದು, 0.5 m - 3.7 m ಪ್ರೊಜೆಕ್ಟರ್‌ ಅಂತರವನ್ನು ಪಡೆದಿದೆ. ಸುಮಾರು 100 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಕಾಂಟ್ರಾಸ್ಟ್‌ ರೇಶಿಯೋವು 1500:1 ಆಗಿದೆ. HDMI, VGA ವಿಡಿಯೊ ಇನ್‌ಪುಟ್ಸ್‌ ಆಯ್ಕೆ ಜೊತೆಗೆ ಅಲ್ಟ್ರಾ ಲೈಟ್‌ ರಚನೆಯನ್ನು ಪಡೆದಿದ್ದು, ಪಾಕೆಟ್‌ ಮಾದರಿಯಲ್ಲಿದೆ.

ಎಪ್ಸನ್‌ ಪ್ರೊಜೆಕ್ಟರ್‌ (Epson EB-S04)

ಎಪ್ಸನ್‌ ಪ್ರೊಜೆಕ್ಟರ್‌ (Epson EB-S04)

ಎಪ್ಸನ್‌ EB-S04 ಪ್ರೊಜೆಕ್ಟರ್‌ 297‎ x 234 x 77mm ಸುತ್ತಳತೆಯನ್ನು ಹೊಂದಿದ್ದು, ಕಾಂಪೊನೆಟ್‌, ಕಾಂಪೊಸೈಟ್‌ HDMI S Video USB ಇನ್‌ಪುಟ್‌ ಆಯ್ಕೆಯನ್ನು ಹೊಂದಿದೆ. LCD ಮಾದರಿ ಪ್ರೊಜೆಕ್ಟರ‌ ಸಿಸ್ಟಮ್‌ ಜೊತೆ 800 x 600 ಪಿಕ್ಸಲ್‌ ಪಿಚ್ಚರ್‌ ರೆಸಲ್ಯೂಶನ್‌ ಇದ್ದು, ಸುಮಾರು 3000 ಬ್ರೈಟ್ನೆಸ್‌ ಲ್ಯುಮಿನಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಕಾಂಟ್ರಾಸ್ಟ್‌ ರೇಶಿಯೋವು 1500:1 ಆಗಿದೆ.

Best Mobiles in India

English summary
Portronics BEEM 300 Wi-Fi Multimedia LED Projector launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X