ಪೋರ್ಟ್ರೋನಿಕ್ಸ್‌ನಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ; ಇನ್‌ಬಿಲ್ಟ್‌ ಸ್ಪೀಕರ್ ಆಯ್ಕೆ!

|

ಪೋರ್ಟ್ರೋನಿಕ್ಸ್ ಇತ್ತೀಚಿನ ತಂತ್ರಜ್ಙಾನ ಇರುವ ಸ್ಪೀಕರ್ಸ್‌, ಹೆಡ್‌ಫೋನ್‌ಗಳು, ಯುಎಸ್‌ಬಿ ಹಬ್‌ಗಳು, ಚಾರ್ಜರ್‌‌ ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿಕೊಂಡು ಬರುತ್ತಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ವಿಭಾಗದಲ್ಲೂ ಕೂಡ ಪೋರ್ಟ್ರೋನಿಕ್ಸ್ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ ಈಗ ಭಾರತದಲ್ಲಿ ಹೊಸ ಪೋರ್ಟ್ರೋನಿಕ್ಸ್ ಕ್ರೋನೋಸ್ X4 ಸ್ಮಾರ್ಟ್ ವಾಚ್ (Portronics Kronos X4 smartwatch) ಅನ್ನು ಅನಾವರಣ ಮಾಡಲಾಗಿದೆ.

ಕ್ರೋನೋಸ್

ಹೌದು, ಭಾರತದಲ್ಲಿ ಪೋರ್ಟ್ರೋನಿಕ್ಸ್ ಕ್ರೋನೋಸ್ X4 ಸ್ಮಾರ್ಟ್ ವಾಚ್‌ ಅನ್ನು ಲಾಂಚ್ ಮಾಡಲಾಗಿದ್ದು, ಈ ವಾಚ್‌ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಜೊತೆಗೆ 100 ಕ್ಕೂ ಹೆಚ್ಚಿನ ವಾಚ್ ಫೇಸ್‌ಗಳು, ಇನ್‌ಬಿಲ್ಟ್‌ HD ಸ್ಪೀಕರ್ ಹಾಗೂ ಮೈಕ್ರೊಫೋನ್‌ ಆಯ್ಕೆ ಪಡೆದುಕೊಂಡಿದೆ. ಹಾಗಿದ್ದರೆ ಇದರ ಇನ್ನಿತರೆ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಕ್ರೋನೋಸ್ X4 ಸ್ಮಾರ್ಟ್ ವಾಚ್ 1.85 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ಇದರಲ್ಲಿರುವ ಸಿಲಿಕೋನ್ ಪಟ್ಟಿಗಳು ಹೆಚ್ಚು ಆಕರ್ಷಕವಾಗಿವೆ. ಹಾಗೆಯೇ ಕ್ರೋನೋಸ್ X4 100+ ವಾಚ್ ಫೇಸ್‌ಗಳ ಆಯ್ಕೆ ಪಡೆದುಕೊಂಡಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಪೋರ್ಟ್ರೋನಿಕ್ಸ್ ಕ್ರೋನೋಸ್ X4 ಸ್ಮಾರ್ಟ್ ವಾಚ್, ಬ್ಲೂಟೂತ್ ಕಾಲಿಂಗ್ ಪೀಚರ್ಸ್‌ ಜೊತೆಗೆ ಆರೋಗ್ಯ ಮತ್ತು ಇತರೆ ಬಳಕೆದಾರರ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡಲಾದ ಮಾಹಿತಿಯನ್ನು ನೀಡುತ್ತದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕ (SpO2) ಮಟ್ಟವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.

ವಾಚ್‌

ಇನ್ನು ಈ ವಾಚ್‌ ಮೂಲಕ ನಿಮ್ಮ ನಿದ್ರೆ ಮತ್ತು ವಿಶ್ರಾಂತಿ ವಿವರವನ್ನು ಟ್ರ್ಯಾಕ್ ಮಡಲಿದ್ದು,ಇದರಿಂದ ದೇಹ ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಾಯಕವಾಗಲಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್ ಮಲ್ಟಿ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್‌ ಆಗಿ ನೀವು ಯಾವುದೇ ಚಟುವಟಿಕೆ ನಡೆಸಿದರೂ ಅದನ್ನು ಟ್ರ್ಯಾಕ್‌ ಮಾಡಿ ವಿವರ ಸಂಗ್ರಹಿಸಿಕೊಳ್ಳುತ್ತದೆ.

ಕರೆ ಮಾಡಬಹುದು

ಕರೆ ಮಾಡಬಹುದು

ಡಿಸ್‌ಪ್ಲೇ ಮೇಲೆ ಮೆಸೆಜ್‌ ಹಾಗೂ ಕರೆಗಳ ಕುರಿತು ನೋಟಿಫಿಕೇಶನ್‌ ಪಡೆಯಬಹುದಾಗಿದ್ದು, ಸ್ಮಾರ್ಟ್ಫೊನ್‌ ಅನ್ನು ಬಳಕೆ ಮಾಡುವ ಪ್ರಮೇಯವೇ ಬರುವುದಿಲ್ಲ. ಹಾಗೆಯೇ ಸ್ಮಾರ್ಟ್‌ಫೋನ್ ಅನ್ನು ಹೊರತೆಗೆಯದೆಯೇ ನೇರವಾಗಿ ಈ ವಾಚ್‌ ಮೂಲಕವೇ ಕರೆಗಳನ್ನು ಮಾಡಬಹುದಾದ ಫೀಚರ್ಸ್‌ ನೀಡಲಾಗಿದೆ. ಇದಕ್ಕಾಗಿ ಈ ವಾಚ್‌ ಇನ್‌ಬಿಲ್ಟ್‌ ಹೆಚ್‌ಡಿ ಸ್ಪೀಕರ್ ಹಾಗೂ ಮೈಕ್ರೊಫೋನ್ ಅನ್ನು ಹೊಂದಿದೆ.

ಫೋನ್‌ ಕಂಟ್ರೋಲ್ ಮಾಡಬಹುದು

ಫೋನ್‌ ಕಂಟ್ರೋಲ್ ಮಾಡಬಹುದು

ನೀನೇನಾದರೂ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಮುಟ್ಟದೆಯೇ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡಬೇಕು ಎಂದರೆ ಅದಕ್ಕೂ ಅವಕಾಶ ನೀಡಲಾಗಿದೆ. ಇದರಲ್ಲಿ ನೀವು ಮ್ಯೂಸಿಕ್‌‌ ಟ್ರ್ಯಾಕ್‌ಗಳನ್ನು ಬದಲಾಯಿಸಬಹುದು, ವಾಲ್ಯೂಮ್ ಅನ್ನು ಸರಿಹೊಂದಿಸಬಹುದು ಹಾಗೂ ಇನ್ನೂ ಹಲವರು ಫೀಚರ್ಸ್‌ಗಳನ್ನು ನೀಡಲಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನ್ ಅನ್ನು ಮುಟ್ಟದೆಯೇ ಅದನ್ನು ನಿಯಂತ್ರಣ ಮಾಡಬಹುದಾಗಿದೆ.

ಎಲ್ಲಾ ಸಮಯದಲ್ಲೂ ಬಳಕೆ ಮಾಡಬಹುದು

ಎಲ್ಲಾ ಸಮಯದಲ್ಲೂ ಬಳಕೆ ಮಾಡಬಹುದು

ಪ್ರಮುಖವಾಗಿ ಈ ವಾಚ್‌ವಾಟರ್‌, ಸ್ವೆಟ್‌ ಹಾಗೂ ಡಸ್ಟ್‌ನಿಂದ ರಕ್ಷಣೆಗೆ ಒಳಪಡುತ್ತದೆ. ಇದಕ್ಕಾಗಿಯೇ ಈ ವಾಚ್‌ IP68 ಪ್ರಮಾಣೀಕೃತ ರೇಟಿಂಗ್‌ ಪಡೆದುಕೊಂಡಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಹಗಲು ಅಥವಾ ರಾತ್ರಿ ಜೊತೆಗೆ ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿಯೂ ಈ ವಾಚ್‌ ಅನ್ನು ಧರಿಸಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಪೋರ್ಟ್ರೋನಿಕ್ಸ್ ಕ್ರೋನೋಸ್ X4 ಸ್ಮಾರ್ಟ್‌ವಾಚ್‌ ಗೆ 2,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ವಾಚ್‌ಗೆ 1 ವರ್ಷದ ಖಾತರಿ ನೀಡಲಾಗುತ್ತಿದ್ದು, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಪೋರ್ಟ್ರೋನಿಕ್ಸ್ ಸೈಟ್‌ನಿಂದ ನೇರವಾಗಿ ಖರೀದಿ ಮಾಡಬಹುದಾಗಿದೆ. ಇದಲ್ಲದೆ ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಲಭ್ಯವಿದೆ.

Best Mobiles in India

English summary
Portronics Kronos X4 smartwatch launched; Inbuilt speaker, microphone option!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X