ಪೋರ್ಟ್ರೋನಿಕ್ಸ್ ಸೌಂಡ್ ಸ್ಲಿಕ್ IV, ಸೌಂಡ್ ಸ್ಲಿಕ್ V ಸೌಂಡ್‌ಬಾರ್‌ ಲಾಂಚ್‌: ಬೆಲೆ ಎಷ್ಟು ?

|

ಪ್ರಮುಖ ಗ್ಯಾಜೆಟ್‌ಗಳನ್ನು ವಿವಿಧ ಫೀಚರ್ಸ್‌ ಒಳಗೊಂಡಂತೆ ಮಾರುಕಟ್ಟೆಗೆ ಪರಿಚಯಿಸಿರುವ ಕಂಪೆನಿಯಲ್ಲಿ ಪೋರ್ಟ್ರಾನಿಕ್ಸ್ ಕೂಡ ಪ್ರಮುಖವಾಗಿದೆ. ಅದರಲ್ಲೂ ಭಾರತದಲ್ಲಿ ಆಡಿಯೋ ಟೂಲ್ಸ್‌ಗೆ ಸಂಬಂಧಿಸಿದಂತೆ ವಿಷಯ ಮುನ್ನೆಲೆಗೆ ಬಂದರೆ ಪೋರ್ಟ್ರೋನಿಕ್ಸ್ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈ ಕಂಪೆನಿಯ ಇಯರ್‌ಪಾಡ್ಸ್‌, ಇಯರ್‌ಫೋನ್‌ ಹಾಗೂ ಸ್ಪೀಕರ್‌ ಹೆಚ್ಚಾಗಿ ಜನಪ್ರಿಯಗೊಂಡಿವೆ. ಇದರ ನಡುವೆ ಈಗ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಲಾಂಚ್‌ ಮಾಡಲಾಗಿದೆ.

ಸೌಂಡ್ ಸ್ಲಿಕ್

ಹೌದು, ಸೌಂಡ್ ಸ್ಲಿಕ್ IV ಮತ್ತು ಸೌಂಡ್ ಸ್ಲಿಕ್ V ಎಂಬ ಎರಡು ಸೌಂಡ್‌ಬಾರ್‌ಗಳನ್ನು ಪೋರ್ಟ್ರಾನಿಕ್ಸ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡೂ ಸೌಂಡ್‌ ಬಾರ್‌ಗಳು ಥಿಯೇಟರ್‌ನ ಅನುಭವ ನೀಡಲಿವೆ. ಹಾಗೆಯೇ ಹಲವು ರೀತಿಯಲ್ಲಿ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದ್ದು. ಸ್ಟಿರಿಯೊ ಸ್ಪೀಕರ್‌ ಆಯ್ಕೆ ಒಳಗೊಂಡಿವೆ.

ಸೌಂಡ್‌ಬಾರ್‌ಗಳು

ಈ ಸೌಂಡ್‌ಬಾರ್‌ಗಳು 1.85 ಕೆಜಿ ತೂಕ ಇದ್ದು, ಪ್ರೀಮಿಯಂ ನೋಟಕ್ಕಾಗಿ ಸ್ಕ್ರಾಚ್-ರೆಸಿಸ್ಟೆಂಟ್ ಸ್ಯಾಂಡ್-ಗ್ರೇನ್ ಫಿನಿಶ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇವು ಇನ್‌ಬಿಲ್ಟ್ ಸಬ್‌ ವೂಫರ್‌ ಆಯ್ಕೆಯನ್ನು ಪಡೆದಿದ್ದು, ಅದರಲ್ಲೂ ಪ್ರಮುಖವಾಗಿ ಸೌಂಡ್ ಸ್ಲಿಕ್ IV ಸೌಂಡ್‌ಬಾರ್‌ 30W ಸ್ಪೀಕರ್‌ಗಳು ಮತ್ತು ಇನ್‌ಬಿಲ್ಟ್ 60w ನ ಸಬ್ ವೂಫರ್ ಆಯ್ಕೆ ಹೊಂದಿದೆ. ಜೊತೆಗೆ ಇವೆರಡೂ ಸಹ 120w ಆಡಿಯೋ ಔಟ್‌ಪುಟ್‌ ನೀಡಲಿವೆ. ಇದರೊಂದಿಗೆ ವಿವಿಧ ಸೌಂಡ್‌ ಮೋಡ್‌ ಆಯ್ಕೆಯನ್ನೂ ನೀಡಲಾಗಿದ್ದು, ಗೇಮ್‌ ಆಡುವಾಗ, ಸಿನಿಮಾ ನೋಡುವಾಗ ಹಾಗೂ ಸಂಗೀತ ಆಲಿಸುವಾಗ ಆ ಸಮಯಕ್ಕೆ ಬೇಕಾದ ಸೌಂಡ್‌ಮೋಡ್‌ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಲ್ಟಿ ಕನೆಕ್ಟಿವಿಟಿ ಆಯ್ಕೆ

ಮಲ್ಟಿ ಕನೆಕ್ಟಿವಿಟಿ ಆಯ್ಕೆ

ಲಾಂಚ್‌ ಆಗಿರುವ ಈ ಎರಡೂ ಸೌಂಡ್‌ಬಾರ್‌ಗಳು USB ಟೈಪ್ C ಪೋರ್ಟ್ ಆಯ್ಕೆ ಪಡೆದಿದ್ದು, ಯಾವುದೇ ಟಿವಿ ಹಾಗೂ ಇನ್ನಿತರ ಡಿವೈಸ್‌ಗೆ ಸಪೋರ್ಟ್‌ ಮಾಡಲಿವೆ. ಅದರಲ್ಲೂ ಪ್ರಮುಖವಾಗಿ ನಿಮಗೆ ವಾಯರ್‌ ಮೂಲಕ ಸಂಪರ್ಕ ಬೇಕು ಎಂದರೆ ಅದನ್ನೂ ಬಳಕೆ ಮಾಡಬಹುದು ಹಾಗೆಯೇ ಬ್ಲೂಟೂತ್‌ ಆಗೂ ಇನ್ನಿತರೆ ಪೋರ್ಟ್‌ ಮೂಲಕವೂ ಸಂಪರ್ಕ ಕಲ್ಪಿಸಿಕೊಳ್ಳಬಹುದಾಗಿದೆ. ಟಿವಿಗಳಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳಿಗೂ ಈ ಸೌಂಡ್‌ಬಾರ್‌ಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದರ ಜೊತೆಗೆ ಆಡಿಯೋವನ್ನು ನೇರವಾಗಿ ಆಲಿಸಲು ಯುಎಸ್‌ಬಿಗೆ ಪೆನ್‌ಡ್ರೈವ್ ಅನ್ನು ಸಹ ಪ್ಲಗ್ ಮಾಡಬಹುದಾದ ಆಯ್ಕೆಯನ್ನು ನೀಡಲಾಗಿದೆ.

ರಿಮೋಟ್‌ ಮೂಲಕ ಸುಲಭ ನಿಯಂತ್ರಣ

ರಿಮೋಟ್‌ ಮೂಲಕ ಸುಲಭ ನಿಯಂತ್ರಣ

ಈ ಸೌಂಡ್‌ಬಾರ್‌ಗಳನ್ನು ನಿಯಂತ್ರಣ ಮಾಡಲು IR ರಿಮೋಟ್‌ ಆಯ್ಕೆ ನೀಡಲಾಗಿದೆ. ಸಾಮಾನ್ಯವಾಗಿ ತಿಳಿದಿರುವಂತೆ ಈ ರಿಮೋಟ್‌ ಮೂಲಕ ಮೋಡ್‌ಗಳನ್ನು ಬದಲಾಯಿಸುವುದರ ಜೊತೆಗೆ ಸಂಗೀತ ಆಲಿಸಬಹುದು, ಸ್ಟಾಪ್‌ ಮಾಡಬಹುದು ಹಾಗೆಯೇ ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ಪ್ರಮುಖವಾಗಿ EQ ಮೋಡ್‌ಗಳನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು.

ಸೌಂಡ್ ಸ್ಲಿಕ್

ಸೌಂಡ್ಸ್ಲಿಕ್ IV ಸೌಂಡ್‌ಬಾರ್‌ ಲಿವಿಂಗ್ ರೂಮ್‌ಗೆ ಉತ್ತಮವಾಗಿ ಹೊಂದಿಕೆಯಾಗಲಿದ್ದು, ಇದರಲ್ಲಿರುವ ಸ್ಟಿರಿಯೊ ಸ್ಪೀಕರ್‌ 30W ಹೈ-ಡೆಫಿನಿಷನ್ ಸರೌಂಡ್ ಸೌಂಡ್ ಮತ್ತು ಬೇಸ್‌ನೊಂದಿಗೆ ಇನ್‌ಬಿಲ್ಟ್‌ 60W ಸಬ್ ವೂಫರ್‌ ಫೀಚರ್‌ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದಾಗ ಆ ಸಂಭ್ರಮದ ವಾತಾವರಣವನ್ನು ಹೆಚ್ಚು ಮಾಡಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಪೋರ್ಟ್ರಾನಿಕ್ಸ್‌ನ ಈ ಸೌಂಡ್ ಸ್ಲಿಕ್ IV ಗೆ ಭಾರತದಲ್ಲಿ 5,499ರೂ. ಗಳು ಹಾಗೂ ಸೌಂಡ್ ಸ್ಲಿಕ್ Vಗೆ 3,499ರೂ. ಗಳನ್ನು ನಿಗದಿ ಮಾಡಲಾಗಿದೆ. ಇದಿಷ್ಟೇ ಅಲ್ಲದೆ ಎರಡೂ ಸೌಂಡ್‌ಬಾರ್‌ಗಳಿಗೂ 12 ತಿಂಗಳ ವಾರಂಟಿ ಸಹ ನೀಡಲಾಗಿದೆ. ಈ ಸೌಂಡ್‌ಬಾರ್‌ಗಳು ಪೋರ್ಟ್ರಾನಿಕ್ಸ್‌ ಸೈಟ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇದಲ್ಲದೆ, ಚಿಲ್ಲರೆ ಮಳಿಗೆಗಳಲ್ಲೂ ಈ ಸೌಂಡ್‌ಬಾರ್‌ಗಳು ಲಭ್ಯ ಇವೆ.

Best Mobiles in India

English summary
Portronics is also one of the leading companies in the market that has introduced leading gadgets with various features. Accordingly, it has now introduced two new soundbars.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X