ಫೇಕ್ ವೆಬ್‌ಸೈಟ್‌ನಿಂದ ಬ್ಯಾಂಕ್‌ ಖಾತೆಯ ಹಣ ಉಳಿಸಿ

By Suneel
|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಖರೀದಿ, ಆನ್‌ಲೈನ್‌ ಬ್ಯಾಂಕಿಂಗ್‌ ಹೆಚ್ಚಾಗುತ್ತಿದ್ದಂತೆ ನಕಲಿ (ಫೇಕ್) ವೈಬ್‌ಸೈಟ್‌ಗಳು ಸಹ ಹೆಚ್ಚಾಗಿವೆ. ಇವುಗಳು ನಿಮ್ಮ ಇ-ಮೇಲ್‌ ಖಾತೆ ಮತ್ತು ಬ್ಯಾಂಕ್‌ ಖಾತೆಗಳ ವಯಕ್ತಿಕ ಮಾಹಿತಿಯನ್ನು ಹ್ಯಾಕ್‌ ಮಾಡುವ ಮುಖಾಂತರ ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣ ನಿಮಗೆ ತಿಳಿಯದಂತೆ ಕಡಿಮೆ ಆಗುತ್ತಾ ಹೋಗುತ್ತದೆ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳಾದ ಕಂಪ್ಯೂಟರ್, ಸ್ಮಾರ್ಟ್‌ಫೋನ್‌ ಬಳಸುವವರೆಲ್ಲಾ ಫೇಕ್‌ ವೆಬ್‌ಸೈಟ್‌ಗಳನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ತಿಳಿಯಲೇಬೇಕು.

ಓದಿರಿ: ನಿಮ್ಮ SMS ಗಳನ್ನು ಇತರರ ಮೊಬೈಲ್‌ನಲ್ಲೂ ಡಿಲೀಟ್‌ಮಾಡಿ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಕಲಿ(ಫೇಕ್) ವೆಬ್‌ಸೈಟ್‌ಗಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ತಿಳಿಸುತ್ತಿದೆ.

ನಿಮ್ಮ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿ.

ನಿಮ್ಮ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿ.

ಹಲವು ಸಾಫ್ಟ್‌ವೇರ್‌ ಮತ್ತು ಹೊಸ ಬ್ರೌಸರ್‌ಗಳು ಸಹ ಹೆಚ್ಚಿನ ಸೆಕ್ಯೂರಿಟಿ ಫಂಕ್ಷನ್ ಹೊಂದಿದ್ದು, ಅಪ್‌ಡೇಟ್‌ ಮಾಡುವುದರಿಂದ ಫೇಕ್‌ ಮತ್ತು ಸ್ಕ್ಯಾಮ್ ವೆಬ್‌ಸೈಟ್‌ಗಳಿಂದ ರಕ್ಷಿಸಿ ನಿಮಗೂ ಸಹ ಎಚ್ಚರಿಕೆ ನೀಡುತ್ತವೆ.

ಡೊಮೈನ್‌ (ಸ್ವತ್ತು) ಹೆಸರುಗಳು

ಡೊಮೈನ್‌ (ಸ್ವತ್ತು) ಹೆಸರುಗಳು

ಕೆಲವು ವೆಬ್‌ಸೈಟ್‌ಗಳು ಬ್ರ್ಯಾಂಡ್‌ ಮತ್ತು ಪಾಪುಲರ್ ಹೆಸರುಗಳನ್ನು ವೆಬ್‌ ವಿಳಾಸದಲ್ಲಿ ಬಳಸಿರುತ್ತಾರೆ.
ಉದಾಹರಣೆಗೆ- www.davidmarkexpress.com, www.mtnnigeriapromos.com
ಮೊದಲನೇ ವೆಬ್‌ ವಿಳಾಸದಲ್ಲಿ DaividMKark ನೈಜೀರಿಯಾದಲ್ಲಿ ಹೆಚ್ಚು ಪಾಪುಲರ್ ಹೆಸರು.

 ಯಾವುದೇ ಸಂಪರ್ಕ ಮಾಹಿತಿ ಇರುವುದಿಲ್ಲ.

ಯಾವುದೇ ಸಂಪರ್ಕ ಮಾಹಿತಿ ಇರುವುದಿಲ್ಲ.

ಯಾವುದೇ ಕಂಪನಿಗಳು ತಮ್ಮ ನಿರ್ದಿಷ್ಟ ಸ್ಥಳದ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಹೆಸರಿಸುತ್ತವೆ. ಸಂಪರ್ಕ ವಿಳಾಸವಿಲ್ಲದಿದ್ದಲ್ಲಿ ಅವುಗಳು ಫೇಕ್‌ ವೆಬ್‌ಸೈಟ್‌ ಎಂದೇ ತಿಳಿಯಬೇಕು.

ಗ್ರ್ಯಾಮರ್ ಮತ್ತು ಸ್ಪೆಲ್ಲಿಂಗ್

ಗ್ರ್ಯಾಮರ್ ಮತ್ತು ಸ್ಪೆಲ್ಲಿಂಗ್

ಹೆಚ್ಚಿನ ಸಂಖ್ಯೆಯ ಫೇಕ್‌ ವೆಬ್‌ಸೈಟ್‌ಗಳು ಇಂಗ್ಲೀಷ್‌ ಗ್ರ್ಯಾಮರ್ ಮತ್ತು ಸ್ಪೆಲ್ಲಿಂಗ್‌ ಮಿಸ್‌ಟೇಕ್‌ನಿಂದ ಕೂಡಿರುತ್ತವೆ. ಆದರೆ ಹೆಸರಾಂತ ಕಂಪನಿಗಳು ಗ್ರ್ಯಾಮರ್ ತಪ್ಪುಗಳನ್ನು ಸರಿಪಡಿಸಲು ಹೆಚ್ಚು ಸಮಯ ವ್ಯಯಿಸುತ್ತವೆ.

ಸಂಪರ್ಕ ಮಾಹಿತಿಯನ್ನು ಪರೀಕ್ಷಿಸಿ.

ಸಂಪರ್ಕ ಮಾಹಿತಿಯನ್ನು ಪರೀಕ್ಷಿಸಿ.

ಫೇಕ್‌ ವೆಬ್‌ಸೈಟ್‌ ಕ್ರಿಯೇಟರ್ಸ್‌ ಇದನ್ನು ಓದಿದಲ್ಲಿ ಹೆಸರಾಂತ ಕಂಪನಿಗಳ ಸಂಪರ್ಕ ವಿಳಾಸ ಮತ್ತು ದೂರವಾಣಿ ಸಂಪರ್ಕ ನಂಬರ್ ಸಹ ನೀಡಬಹುದು. ಆದರೆ ಹೆಸರಾಂತ ಕಂಪನಿಗಳು ಗ್ರಾಹಕ ಸೇವೆಯನ್ನು ಹೊಂದಿರುತ್ತವೆ. ಇದನ್ನು ಪರೀಕ್ಷಿಸಿ.

ವಿಮರ್ಶೆಗಳನ್ನು ಪರಿಶೀಲಿಸಿ.

ವಿಮರ್ಶೆಗಳನ್ನು ಪರಿಶೀಲಿಸಿ.

ಫೇಕ್‌ ವೆಬ್‌ಸೈಟ್‌ ಕಂಡುಹಿಡಿಯಲು ಉತ್ತಮ ಮಾರ್ಗವೆಂದರೆ ಗೂಗಲ್ ಸರ್ಚ್‌ ಇಂಜಿನ್‌ನಲ್ಲಿ ವೆಬ್‌ವಿಳಾಸ ಟೈಪ್‌ ಮಾಡಿ ಅದರ ಮುಂದೆ Reviews ಎಂದು ಟೈಪ್‌ ಮಾಡಿ.

ಇ-ಮೇಲ್‌ನಲ್ಲಿ ಎಚ್ಚರ.

ಇ-ಮೇಲ್‌ನಲ್ಲಿ ಎಚ್ಚರ.

ನಿಮ್ಮ ಇಮೇಲ್‌ಗಳಿಗೆ ಬರುವ ಕೆಲವು ಮೇಲ್‌ಗಳು ವಿದೇಶಿ ಬ್ಯಾಂಕ್‌ನಲ್ಲಿ ಬಹುಮಾನ ದೊರೆತಿದೆ. ಅದನ್ನು ಪಡೆಯಲು ನಿಮ್ಮ ಸಂಪೂರ್ಣ ವಿಳಾಸ ಮತ್ತು ಬ್ಯಾಂಕ್‌ ಖಾತೆ ನಂಬರ್‌ ಕಳುಹಿಸಿ ಎಂದು ಕೇಳಿರುತ್ತಾರೆ. ಇಂತಹ ಇಮೇಲ್‌ಗಳಿಗೆ ಉತ್ತರಿಸದಿರಿ.

ಮೊಬೈಲ್‌ ಮೆಸೇಜ್‌ಗಳ ಎಚ್ಚರ

ಮೊಬೈಲ್‌ ಮೆಸೇಜ್‌ಗಳ ಎಚ್ಚರ

ಹಲವರ ಮೊಬೈಲ್‌ಗಳಿಗೆ ಈಗಾಗಲೇ ಕೆಲವು ಮೆಸೇಜ್‌ಗಳು ''ನಿಮ್ಮ ಮೊಬೈಲ್‌ ನಂಬರ್ 1 ಲಕ್ಷ ರೂಪಾಯಿ ಹಣ ಗೆದ್ದಿದೆ, ಕೂಪನ್‌ ಗೆದ್ದಿದೆ, ಈ ಹಣ ಪಡೆಯಲು ನಿಮ್ಮ ವಿಳಾಸ ಮತ್ತು ಬ್ಯಾಂಕ್‌ ಖಾತೆ ನಂಬರ್‌ ಅನ್ನು ನಮ್ಮ ವಿಳಾಸಕ್ಕೆ ಕಳುಹಿಸಿ ಎಂದು ವೆಬ್‌ ವಿಳಾಸ ನೀಡಿರುತ್ತಾರೆ'' ಇಂತಹ ಮಸೇಜ್‌ಗಳ ಮೇಲೆ ok ಎಂದು ಕ್ಲಿಕ್ಕಿಸ ಬೇಡಿ ಮತ್ತು ಯಾವುದೇ ರೀತಿಯ ರೀಪ್ಲೇ ಮಾಡಬೇಡಿ.

Best Mobiles in India

English summary
websites often look very convincing and original making it difficult for users to spot the difference between the real or original sites, there have been report of buyers paying for Services or goods without seeing the goods they paid for arrive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X