Subscribe to Gizbot

ನಿಮ್ಮ SMS ಗಳನ್ನು ಇತರರ ಮೊಬೈಲ್‌ನಲ್ಲೂ ಡಿಲೀಟ್‌ಮಾಡಿ

Written By:

ಟೆಕ್ನಾಲಜಿ ಎಲ್ಲರೂ ಇಷ್ಟ ಪಡುವ ಕ್ಷೇತ್ರ. ಹಲವು ಜನರ ಸ್ಮಾರ್ಟ್‌ನೆಸ್‌ಗೆ ಇಂದಿನ ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯ ಅತ್ಯುತ್ತಮ ಅಭಿವೃದ್ದಿ ಕಾರಣ. ಆದರೂ ಸಹ ಕೆಲವು ಬಾರಿ ಅದೇ ಟೆಕ್ನಾಲಜಿ ನಮಗೆ ಆಪತ್ತು ತಂದೊಡ್ಡುತ್ತದೆ. ಉದಾಹರಣೆಗೆ ಹಲವು ಬಾರಿ ನಾವು ಆಕಸ್ಮಿಕವಾಗಿ ಅಪರಿಚಿತರಿಗೆ ಕಳುಹಿಸುವ ಸಂದೇಶಗಳಾಗಿರಬಹುದು. ಒಮ್ಮೆ ಸೆಂಟ್‌ ಕೊಟ್ಟ ನಂತರದ ಕ್ಷಣದಲ್ಲಿಯೂ ಆ ಸಂದೇಶಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಈಗ ಟೆಕ್ನಾಲಜಿ ಅಂತಹ ಆಪತ್ತುಗಳನ್ನು ಸಹ ತಡೆಯುವಷ್ಟು ಅಭಿವೃದ್ದಿಗೊಂಡಿದೆ.

ಓದಿರಿ: ಮಂಗಳನ ಅಂಗಳ ಕಲರ್ ಕ್ಯಾಮೆರಾದಲ್ಲಿ

ಹೌದು, ಆಕಸ್ಮಿಕವಾಗಿ ಇತರರಿಗೆ ಕಳುಹಿಸಿದ ಸಂದೇಶವನ್ನು ಅಥವಾ ನೀವು ಇತರರೊಂದಿಗೆ ವಯಕ್ತಿಕವಾಗಿ ಕೈಗೊಂಡ ಚಾಟ್‌ ಸಂದೇಶಗಳನ್ನು ಕೇವಲ ಒಂದು ಅಪ್ಲಿಕೇಶನ್‌ ಸಹಾಯದಿಂದ ಅವರ ಮೊಬೈಲ್‌ಗಳಲ್ಲಿನ ಸಂದೇಶಗಳನ್ನು ನೀವು ಡಿಲೀಟ್‌ ಮಾಡಬಹುದಾಗಿದೆ. ಇದು ಹೇಗೆ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಪರ್ (Wiper)

ವೈಪರ್ (Wiper)

ಇದು ಸಹ ಒಂದು ಅಪ್ಲಿಕೇಶನ್‌ ಆಗಿದ್ದು, ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ.

ವೈಪರ್ (Wiper)

ವೈಪರ್ (Wiper)

ಈ ಅಪ್ಲಿಕೇಶನ್‌ ಬಳಕೆದಾರ ಇತರರೊಂದಿಗೆ ಚಾಟ್‌ ಮಾಡಿದ ಸಂದೇಶಗಳನ್ನು ಈತನ ಮತ್ತು ಸಂದೇಶ ಸ್ವೀಕೃತಿದಾರನ ಮೊಬೈಲ್‌ ಎರಡರಲ್ಲೂ ಸಂದೇಶಗಳನ್ನು ಡಿಲೀಟ್‌ ಮಾಡುವ ಅವಕಾಶ ಹೊಂದಿರುತ್ತಾನೆ.

ಟ್ಯಾಪ್‌ ಆನ್‌ ವೈಪ್‌

ಟ್ಯಾಪ್‌ ಆನ್‌ ವೈಪ್‌

ವೈಪ್‌ ಅಪ್ಲಿಕೇಶನ್‌ನಲ್ಲಿ ವೈಪ್‌ ಎಂಬಲ್ಲಿ ಟ್ಯಾಪ್‌ ಮಾಡಿದರೇ ಸಾಕು ಇಬ್ಬರ ಚಾಟ್ ಸಂದೇಶಗಳು ಡಿಲೀಟ್‌ ಆಗುತ್ತವೆ.

ವೈಪ್‌ ಸಂಶೋಧಕ

ವೈಪ್‌ ಸಂಶೋಧಕ

ಮನ್ಲಿಯೊ ರೋ ಕರ್ರೆಲಿ ಎಂಬಾತನು ಈ ಅಪ್ಲಿಕೇಶನ್‌ ಸಂಶೋಧಿಸಿದ್ದಾನೆ.

ಮೆಸೇಜಿಂಗ್ ಅಪ್ಲಿಕೇಶನ್‌

ಮೆಸೇಜಿಂಗ್ ಅಪ್ಲಿಕೇಶನ್‌

ಹಲವು ಮೆಸೇಜಿಂಗ್ ಅಪ್ಲಿಕೇಶನ್‌ಗಳು ಎಷ್ಟು ದಿನಗಳ ವರೆಗೆ ಸಂದೇಶ ಹಿಡಿದಿಟ್ಟು ಕೊಂಡಿರುತ್ತವೆ ಎಂಬುದು ಗೊತ್ತಿಲ್ಲ. ಆದರೆ ವೈಪ್‌ ಮೆಸೇಜಿಂಗ್ ಅಪ್ಲಿಕೇಶನ್‌ನಿಂದ ನಿಮ್ಮ ವಯಕ್ತಿಕ ಮಾಹಿತಿಯ ಮೇಲೆ ನೀವೇ ನಿಯಂತ್ರಣ ಹೊಂದಬಹುದು. ನಿಮ್ಮ ವೈಪ್ ಅಪ್ಲಿಕೇಶನ್‌ನಲ್ಲಿ ಡಿಲೀಟ್‌ ಮಾಡುವುದಲ್ಲದೇ ವೈಪರ್ ಸೇವೆ ನೀಡುವವರಿಂದಲೂ ಡಿಲೀಟ್‌ ಮಾಡಿ.

ಸಮಸ್ಯೆಗಳಿಂದ ಪಾರಾಗಿ

ಸಮಸ್ಯೆಗಳಿಂದ ಪಾರಾಗಿ

ವೈಪ್‌ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ನೀವು ಆಕಸ್ಮಿಕವಾಗಿ ರಾಂಗ್‌ ನಂಬರ್‌ಗಳಿಗೆ ಕಳುಹಿಸುವ ಸಂದೇಶಗಳನ್ನು ಡಿಲೀಟ್‌ ಮಾಡಿ ಸಮಸ್ಯೆಗಳಿಂದ ಪಾರಾಗಬಹುದು.

ಸ್ಕ್ರೀನ್‌ ಶಾಟ್‌ ಅಲರ್ಟ್‌

ಸ್ಕ್ರೀನ್‌ ಶಾಟ್‌ ಅಲರ್ಟ್‌

ನೀವು ಇತರರೊಂದಿಗೆ ಚಾಟ್‌ ಮಾಡಿದ ಸಂದೇಶಗಳನ್ನು ಸ್ವೀಕೃತದಾರ ಸ್ಕ್ರೀನ್‌ ಶಾಟ್‌ ತೆಗೆಯಲು ಪ್ರಯತ್ನಿಸಿದರು ವೈಪರ್ ಬಳಕೆದಾರ ಅಲರ್ಟ್‌ ಪಡೆಯಬಹುದಾಗಿದೆ.

ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಲಭ್ಯ

ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಲಭ್ಯ

ವೈಪರ್ ಅಪ್ಲಿಕೇಶನ್‌ 17 ಭಾಷೆಗಳಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all love technology and cherish how it has brought people together, but, there are certain times when one feels insecure due to the same advancements in technology.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot