ಏರ್‌ಟೆಲ್, ವೊಡಾಫೋನ್ ಉಳಿಸಲು ಗ್ರಾಹಕರಿಗೆ ಶಾಕ್ ನೀಡುತ್ತಿದೆ ಕೇಂದ್ರ ಸರ್ಕಾರ!

|

ಇಲ್ಲಿಯವರೆಗೂ ಅಗ್ಗವಾಗಿ ಡೇಟಾ ಮತ್ತು ಉಚಿತ ಕರೆಗಳನ್ನು ಬಳಸುತ್ತಿದ್ದವರಿಗೆ ಇದು ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಇದೇ ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಶೇ.30 ರಿಂದ 40 ರಷ್ಟು ಏರಿಸಲಿವೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಐಡಿಯಾ ವೊಡಾಫೋನ್ ನಂತರ ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ ಟ್ಯಾರಿಫ್ ಬೆಲೆಗಳನ್ನು ಏರಿಸುವುದು ಬಹುತೇಕ ಖಚಿತವಾಗಿದ್ದು, ಜಿಯೋ ಬೆಲೆ ಹೆಚ್ಚಳಕ್ಕೆ ಸರ್ಕಾರದ ಒತ್ತಡವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.!

ವೊಡಾಫೋನ್ ಐಡಿಯಾ

ಹೌದು, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪೆನಿಗಳು ನಷ್ಟದಿಂದ ಹೊರಬರಲು ಹೆಚ್ಚು ಆದಾಯ ಬೇಕಿದೆ. ಆದರೆ, ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಯೋಜನೆಗಳಿಂದಾಗಿ ಆ ಕಂಪೆನಿಗಳು ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜಿಯೋ ಕೂಡ ದರಗಳನ್ನು ಹೆಚ್ಚಿಸುವಂತೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿವೆ. ಹೀಗೆ ಮಾಡಿದರೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ನಷ್ಟದಿಂದ ಮೇಲೆದ್ದು ದೇಶದ ಟೆಲಿಕಾಂ ಸ್ಥಿರವಾಗಬಹುದು ಎಂದು ಸರ್ಕಾರ ಯೋಜಿಸಿದೆ ಎಂದು ಹೇಳಲಾಗುತ್ತಿದೆ.

ಟೆಲಿಕಾಂ ಕ್ಷೇತ್ರ

ಟೆಲಿಕಾಂ ಕ್ಷೇತ್ರದ ತಜ್ಞರ ಪ್ರಕಾರ, ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಬಹುತೇಕ ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿದ್ದು, ಪ್ರಸ್ತುತ ಯಾವುದೇ ಟೆಲಿಕಾಂ ಕಂಪೆನಿ ಮುಚ್ಚದಿರುವಂತೆ ನೋಡಿಕೊಳ್ಳುವ ಸಲುವಾಗಿ ಟೆಲಿಕಾಂ ಬೆಲೆಗಳು ಹೆಚ್ಚಳವಾಗುವಂತೆ ಸರ್ಕಾರವೇ ನೋಡಿಕೊಳ್ಳುತ್ತಿದೆ.

ಡಿಸೆಂಬರ್ 1 ರಿಂದ

ಡಿಸೆಂಬರ್ 1 ರಿಂದ ಟ್ಯಾರಿಫ್ ಪ್ಲ್ಯಾನ್​ ಹೆಚ್ಚಿಸುವುದಾಗಿ ತಿಳಿಸಿರುವ ಟೆಲಿಕಾಂ ಕಂಪೆನಿಗಳು, ದರಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತಿರುವುದಾಗಿ ತಿಳಿಸಿಲ್ಲ. ಆದರೆ, ಟೆಲಿಕಾಂನಲ್ಲಿನ ಬೆಲೆಗಳು ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂದರೆ, ಇದೀಗ 300 ರೂ.ಗೆ ಸಿಗುತ್ತಿರುವ ಯೋಜನೆಗಳ ಬೆಲೆ 50೦ ರೂ. ವರೆಗೆಗೆ ಏರಿಕೆಯಾಗಬಹುದು ಅಥವಾ ಇದೀಗ ಮೂರು ತಿಂಗಳು ಲಭ್ಯವಿರುವ ಯೋಜನೆಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು ಎರಡು ತಿಂಗಳಿಗೆ ಇಳಿಯಬಹುದು ಎಂದು ಹೇಳಲಾಗುತ್ತಿದೆ.

ಜಿಯೋಗೆ ಸ್ಪರ್ಧೆ

ದೇಶದ ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಭಾರೀ ನಷ್ಟವನ್ನು ಅನುಭವಿಸಿವೆ. ವೊಡಾಫೋನ್ ಐಡಿಯಾ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳ ದಾಖಲೆಯಷ್ಟು ನಷ್ಟವನ್ನು ಅನುಭವಿಸಿದ್ದರೆ, ಭಾರ್ತಿ ಏರ್ಟೆಲ್ ಕೂಡ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಇವೆಲ್ಲದರ ಪರಿಣಾಮದಿಂದಾಗಿ ಈ ಟೆಲಿಕಾಂ ಕಂಪೆನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿ ಸಹಾಯಮಾಡಲು ಮುಂದಾಗಿದೆ.

Best Mobiles in India

English summary
While this could mark the long-awaited beginning of price recovery for telecom firms, the extent of gains could be decided by the quantum of hike and govt relief

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X