ಕೊರೊನಾ ಎಫೆಕ್ಟ್‌ ಅಮೆಜಾನ್‌ ಪ್ರೈಮ್‌ ವಿಡಿಯೋದಿಂದ ರಿಯಾಯಿತಿಯ ಸುಗ್ಗಿ!

|

ಮಾರಾಕ ವೈರಸ್‌ ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬಿಳಿಸಿರೋದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಈಗಾಗ್ಲೆ ಹಲವು ದೇಶಗಳ ಹಲವಾರು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಮಾಡಿ ಅಂತಾ ಹೇಳಿದ್ದಾರೆ. ಭಾರತದಲ್ಲೂ ಕೂಡ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನ ಮೆರೆಯುತ್ತಿರೊದ್ರಿಂದ ಇಲ್ಲಿಯು ಸಹ ಬಹುತೇಕ ಕಂಪೆನಿಗಳು ವರ್ಕ್ ಫ್ರಮ್‌ ಹೋಮ್‌ ಅನ್ನು ಕರುಣಿಸಿವೆ. ಜೊತೆಗೆ ಎಲ್ಲಾ ರಾಜ್ಯಗಳನ್ನು ಲಾಕ್‌ ಡೌನ್ ಮಾಡಿ ಆಗಿದೆ. ಹೀಗಾಗಿ ಮನೆಯಲ್ಲಿಯೇ ಇದ್ದು ಕೆಲಸ ಮಾಡುವುದಕ್ಕೆ ಮನೆಯಲ್ಲಿನ ಮಕ್ಕಳ ಕಾಟ ಬೇರೆ ಇರುತ್ತೆ. ಮಕ್ಕಳು ಕೂಡ ಹೊರಗಡೆ ಬಾರೋದಕ್ಕೆ ಆಗೋದಿಲ್ಲ. ಇದಕ್ಕಾಗಿ ಇದೀಗ ಅಮೆಜಾನ್‌ ಫ್ರೈಮ್‌ ಭರ್ಜರಿ ಆಫರ್‌ ಒಂದನ್ನ ಪರಿಚಯಿಸಿದೆ.

ಹೌದು

ಹೌದು, ವರ್ಕ್‌ ಫ್ರಮ್‌ ಹೋಮ್‌ ಮಾಡುವ ಉದ್ಯೋಗಿಗಳ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಅಮೆಜಾನ್‌ ಫ್ರೈಮ್‌ ವಿಡಿಯೋ ಭರ್ಜರಿ ಆಫರ್‌ ಒಂದನ್ನ ನೀಡಿದೆ. ಕೊರೊನಾ ವೈರಸ್‌ ಬೀತಿಯಿಂದಾಗಿ ಮನೆಯಲ್ಲಿಯೇ ಇದ್ದು ಎಲ್ಲಿಯೂ ಕೂಡ ಹೋಗಲು ಸಾಧ್ಯವಿಲ್ಲದೆ ಇರುವ ಮಕ್ಕಳನ್ನ ಸಂತೋಷವಾಗಿರಿಸಲು ಸಂಸ್ಥೆ ಮುಂದಾಗಿದೆ. ಇದರ ಅನ್ವಯ ಈಗಾಗ್ಲೆ ಮನೆಯಿಂದಲೇ ಕೆಲಸ ಮಾಡಲು ಮುಂದಾಗಿರುವ ಮನೆಯ ಮಕ್ಕಳಿಗೆ ತನ್ನ ಕಾರ್ಯಕ್ರಮಗಳನ್ನ ಯಾವುದೇ ಶುಲ್ಕವಿಲ್ಲದೆ ನೊಡುವುದಕ್ಕೆ ಅವಕಾಶ ಕಲ್ಪಿಸಿದೆ.

ನಿಜ

ನಿಜ, ಸದ್ಯ ಭಾರತದಲ್ಲಿ ಹೆಚ್ಚು ಸೌಂಡ್‌ ಮಾಡ್ತಿರೋ ಅಮೆಜಾನ್‌ ಪ್ರೈಮ್‌ ವಿಡಿಯೋ ಸೇವೆ ಇದೀಗ ಮಕ್ಕಳ ಸಂತೋಷಕ್ಕಾಗಿ ಕೆಲವು ಸೇವೆಗಳನ್ನ ಉಚಿತವಾಗಿ ನೀಡುವುದಕ್ಕೆ ಮುಂದಾಗಿದೆ. ಇದರ ಅನ್ವಯ ಅಮೆಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ಮಕ್ಕಳ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ನರ್ಸರಿ ಪದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾದ ಅವಕಾಶವನ್ನ ಕಲ್ಪಿಸಲು ನೀಡಲು ನಿರ್ಧರಿಸಿದೆ. ಅದರಲ್ಲಿ ಪೆಪ್ಪಾ ಪಿಗ್, ಇನ್ಸ್‌ಪೆಕ್ಟರ್ ಚಿಂಗಮ್, ಕಲಾರಿ ಕಿಡ್ಸ್, ota ೋಟಾ ಭೀಮ್ ಮತ್ತು ಸೂಪರ್ ಭೀಮ್ ಚಲನಚಿತ್ರಗಳು ಮತ್ತು ಅಮೆಜಾನ್ ಮೂಲಗಳಾದ ದಿ ಸ್ಟಿಂಕಿ & ಡರ್ಟಿ ಶೋ, ಜಸ್ಟ್ ಆಡ್ ಮ್ಯಾಜಿಕ್, ಮತ್ತು ದಿ ಡೇಂಜರಸ್ ಬುಕ್ ಫಾರ್ ಬಾಯ್ಸ್ ಸೇರಿವೆ.

ಕಾರ್ಯಕ್ರಮಗಳು

ಇನ್ನು ಈ ಕಾರ್ಯಕ್ರಮಗಳು ಪ್ರದೇಶವಾರು ಬದಲಾಗಲಿದ್ದು, ವಲಯವಾರು ಹೇಗೆ ಕಾರ್ಯನಿರ್ವಹಿಸಲಿವೆಯೋ ಅದರ ಮೇಲೆ ಇದು ನಿರ್ಧರಿತವಾಗಲಿದೆ. ಜೊತೆಗೆ ಈ ಕಾರ್ಯಕ್ರಮಗಳನ್ನ ಬಿಟ್ಟು ಇತರೆ ಬೇರೆ ಕಾರ್ಯಕ್ರಮಗಳನ್ನ ಮಕ್ಕಳು ನೋಡಲು ಬಯಸಿದರೆ ಆ ಶುಲ್ಕ ಪ್ರಮಾಣದಲ್ಲಿಯೂ ಬದಲಾವಣೆ ತರುವ ಸಾಧ್ಯತೆ ಇದೆ. ಅಲ್ಲದೆ ಪ್ರೈಮ್ ವೀಡಿಯೊದಲ್ಲಿ ನೀವು ಮಕ್ಕಳಿಗೆ ಸಂಬಂಧಿಸಿದ ವಿಷಯವನ್ನು ಉಚಿತವಾಗಿ ವೀಕ್ಷಿಸಲು ನಿವು ಅಮೆಜಾನ್‌ ಖಾತೆಯನ್ನ ಹೊಂದಿರಬೇಕು. ಹಾಗಂತ ಸದ್ಯದ ಮಟ್ಟಿಗೆ ನೀವು ಸಕ್ರಿಯ ಬಳಕೆದಾರರ ಮೆಂಬರ್‌ಶಿಪ್‌ ಅವಶ್ಯಕತೆಯೂ ಕೂಡ ಇರುವುದಿಲ್ಲ. ಜೊತೆಗೆ ಸದ್ಯ ಲಭ್ಯವಿರುವ ಎಲ್ಲಾ ಉಚಿತ ವಿಷಯವು ಪ್ರೈಮ್ ವೀಡಿಯೊದ ಹೊಸ ಪ್ರೊಫೈಲ್‌ಗಳ ಫೀಚರ್ಸ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಮನೆಯಲ್ಲಿ

ಇದಲ್ಲದೆ ಮನೆಯಲ್ಲಿ ಅನೇಕ ಮಕ್ಕಳನ್ನು ಹೊಂದಿರುವವರಿಗೆ ಅಮೆಜಾನ್ ಲ್ಯಾಂಡಿಂಗ್ ಪುಟವನ್ನು ನೀಡಲಾಗಿದೆ ಇದು ನೀವು ಉಚಿತವಾಗಿ ವೀಕ್ಷಿಸಬಹುದಾದ ಎಲ್ಲ ಸಂಗತಿಗಳನ್ನು ತೋರಿಸುತ್ತದೆ. ಪ್ರಿಸ್ಕೂಲ್, 6 - 11 ವರ್ಷ ವಯಸ್ಸಿನ ಮಕ್ಕಳು, ಜನಪ್ರಿಯ ಪ್ರದರ್ಶನಗಳು ಮತ್ತು ಚಲನಚಿತ್ರಗಳು, ನರ್ಸರಿ ಪದ್ಯಗಳು, ಜೊತೆಗೆ ಚಲನಚಿತ್ರಗಳ ವಿಭಾಗದಲ್ಲಿ, ಭೀಮ್ ಫ್ರ್ಯಾಂಚೈಸ್ ಮೀರಿ, ಕಿಡ್ ಕ್ರಿಶ್, ಟೇಲ್ಸ್ ಆಫ್ ಶಿವಾ, ಮೈಟಿ ರಾಜು ಮತ್ತು ಸ್ನೋ ಕ್ವೀನ್ ಕಾರ್ಯಕ್ರಮಗಳನ್ನ ನೋಡಬಹುದಾಗಿದೆ. ಸದ್ಯ ವರ್ಕ್‌ ಫ್ರಮ್‌ ಹೋಮ್‌ ಹಾಗೂ ಲಾಕ್‌ಡೌನ್‌ ಸಂಬಂಧ ಮನೆಯಲ್ಲಿಯೇ ಬಂಧಿ ಆಗಿರುವ ಮಕ್ಕಳಿಗೆ ಅಮೆಜಾನ್‌ ನಿಡಿರುವ ಸೇವೆ ನಿಜಕ್ಕೂ ಉತ್ತಮ ನಿರ್ಧಾರವಾಗಿದೆ.

Most Read Articles
Best Mobiles in India

English summary
Amazon Prime Video Gives Free Access to Kids’ Content to Help Parents Working From Home.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X