Subscribe to Gizbot

ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

Written By:

ವ್ಯಕ್ತಿಯ ಜನಪ್ರಿಯತೆ ಹೆಚ್ಚಿದಂತೆ ಅವರ ಕುರಿತಾದ ಅಪಪ್ರಚಾರಗಳೂ ಹಾಗೂ ಸುಳ್ಳು ವದಂತಿಗಳು ಕೂಡಾ ಹೆಚ್ಚುತ್ತಾ ಹೋಗುವುದು ಸಾಮಾನ್ಯ. ಈ ರೀತಿಯ ಸುಳ್ಳು ವದಂತಿಗಳು ಜುಕರ್‌ಬರ್ಗ್‌ ಕುರಿತಾಗಿ ವಿಶ್ವದೆಲ್ಲೆಡೆ ಹರಡಿದೆ. ಜುಕರ್‌ಬರ್ಗ್ ಕುರಿತಾಗಿ ಸಾಕಷ್ಟು ಮಿಥ್‌ಗಳು ಇಂದು ತಲೆ ಎತ್ತಿವೆ. ಅದಕ್ಕಾಗಿಯೇ ಗಿಜ್‌ಬಾಟ್ ಇಂದು ಜುಕರ್‌ಬರ್ಗ್‌ ಕುರಿತಾಗಿ ಹರಡಿರುವಂತಹ ಆಪಾದನೆಗಳು ಮತ್ತು ಅವರ ಕುರಿತಾದ ಆಸಕ್ತಿಕರ ಸುದ್ದಿಗಳನ್ನು ತಂದಿದೆ.

ಓದಿರಿ: ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

ಅದಾಗ್ಯೂ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಂತಹ ಸಂಸ್ಥೆಯನ್ನು ಕಟ್ಟಿ ಇಂದು ವಿಶ್ವದಲ್ಲಿಯೇ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ. ತಮ್ಮ ಮೇಲಿನ ಅಪಪ್ರಚಾರಗಳನ್ನು ಯಶಸ್ಸಿನ ಬುನಾದಿಯಾಗಿ ಪರಿವರ್ತಿಸಿಕೊಂಡು ಇಂದು ವಿಶ್ವದಲ್ಲೇ ಮಾರ್ಕ್ ಜುಕರ್‌ಬರ್ಗ್ ಗುರುತಿಸಿಕೊಂಡಿದ್ದಾರೆ.

ಓದಿರಿ: 11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ಇಂದಿನ ಲೇಖನದಲ್ಲಿ ಇವರನ್ನು ಕುರಿತ ಕೆಲವೊಂದು ಆಸಕ್ತಿಕರ ಅಂಶಗಳನ್ನು ನಾವು ತಿಳಿದುಕೊಳ್ಳೋಣ. ಈ ಸಂಗತಿಗಳು ಮಾರ್ಕ್ ಜುಕರ್‌ಬರ್ಗ್ ಕುರಿತಾ ಕೆಲವೊಂದು ಅಪರೂಪದ ಅಂಶಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದು ಇವರ ಸಂಪೂರ್ಣ ಪರಿಚಯವನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಂಬರ್‌ ಒನ್‌ ಸ್ಥಾನ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ

ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅದರಲ್ಲಿಯೂ ತಾಂತ್ರಿಕ ಲೋಕದ ಯುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ಮಾತ್ರವಷ್ಟೇ ಅಗ್ರಪಟ್ಟಿಯಲ್ಲಿ ಕಾಣಸಿಗುತ್ತಾರೆ.2012 ರಲ್ಲಿ ಅತ್ಯಧಿಕ ಆದಾಯ ಪಡೆದಿರುವ ಸಿಇಓಗಳ ಪಟ್ಟಿಯಲ್ಲಿ ಜುಕರ್‌ಬರ್ಗ್‌ ನಂಬರ್‌ ಒನ್‌ ಸ್ಥಾನಪಡೆದಿದ್ದಾರೆ.

ವಾಸ್ತವದಲ್ಲಿ ಸೌಮ್ಯ ಸ್ವಭಾವ

ದುರಹಂಕಾರಿ ಹಾಗೂ ಹಟವಾದಿ

ಮಾರ್ಕ್ ಜುಕರ್‌ಬರ್ಗ್‌ ಕುರಿತಾಗಿ ಹಬ್ಬಿರುವ ಮತ್ತೊಂದು ವದಂತಿ ಆತ ಮಾಹಾನ್‌ ದುರಹಂಕಾರಿ ಹಾಗೂ ಹಟವಾದಿ.ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಈ ಸ್ವಭಾವ ಹೊಂದಿಲ್ಲ. ಕಾಲೇಜು ಸಹಪಾಟಿಗಳ ಪ್ರಕಾರ ಜುಕರ್‌ಬರ್ಗ್‌ ತೀರಾ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದಾರೆ.

ವಿದ್ಯಾರ್ಥಿ

ಉದ್ಯಮಿ

ಮಾರ್ಕ್‌ ಜುಕರ್‌ಬರ್ಗ್‌ ಮೊದಲಿನಿಂದಲೂ ಓರ್ವ ಉದ್ಯಮಿ ಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಓರ್ವ ಸಾಮಾನ್ಯ ವಿದ್ಯಾರ್ಥಿ ಆಗಿದ್ದರು ಫೇಸ್‌ಬುಕ್‌ ಸಂಸ್ಥೆಯ ಯಶಸ್ಸಿನ ಬಳಿಕವಷ್ಟೇ ಅವರು ಶ್ರೀಮಂತ ಉದ್ಯಮಿಯಾಗಿ ಪ್ರಸಿದ್ದರಾಗಿದ್ದಾರೆ.

ಕೀಟಲೇ ವ್ಯಕ್ತಿ

ಗೆಳೆಯರ ಸಂಖ್ಯೆ ಅಧಿಕ

ಜುಕರ್‌ಬರ್ಗ್‌ ಸಾಮಾನ್ಯವಾಗಿ ಯಾರೊಂದಿಗೂ ಹೆಚ್ಚಿನ ಬಾಂಧವ್ಯ ಇಟ್ಟು ಕೊಳ್ಳದ ವ್ಯಕ್ತಿ ಎನ್ನುವ ಮಾತಿದೆ. ಆದರೆ ಇದು ಶುದ್ಧ ಸುಳ್ಳು. ಜುಕರ್‌ಬರ್ಗ್‌ ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ದೊಡ್ಡ ಪ್ರಮಾಣದ ಗೆಳೆಯರನ್ನು ಹೊಂದಿದ್ದರು ಹಾಗೂ ತರಲೇ ಸ್ವಭಾವದ ವ್ಯಕ್ಯಿಯಾಗಿದ್ದರು.

ಹೆಚ್ಚು ಆದಾಯ

ಶಿಕ್ಷಣಕ್ಕೆ ಗುಡ್‌ಬೈ

ಹಾವಾರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕಲಿಯುತ್ತಿರುವಾಗ ಅರ್ಧದಲ್ಲಿ ಗುಡ್‌ಬೈ. ಕಾಲೇಜ್‌ ಬಿಟ್ಟ ನಂತರ ಸ್ನೇಹಿತ ಡಸ್ಟಿನ್‌ ಜೊತೆ ಸೇರಿ ಫೇಸ್‌ಬುಕ್‌ ಸ್ಥಾಪನೆ. ಕಳೆದ ವರ್ಷದ ಜುಕರ್‌ಬರ್ಗ್ ಆದಾಯ 13.3 ಬಿಲಿಯನ್‌ ಡಾಲರ್‌

ಅಮೆರಿಕದ ಜನತೆಗೆ ಮಾತ್ರ ಅವಕಾಶ

ಸಂದೇಶಕ್ಕಾಗಿ ನೂರು ಡಾಲರ್‌

ನೀವು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ ಬರ್ಗ್‌ಗೆ ಸಂದೇಶ ಕಳುಹಿಸಬಹುದು. ನೂರು ಡಾಲರ್‌ ಖರ್ಚು ಮಾಡಿ ಜುಕರ್‌ಬರ್ಗ್‌ ಇನ್‌ಬಾಕ್ಸ್‌ಗೆ ಸಂದೇಶ ಕಳುಹಿಸಬಹುದು. ಅಮೆರಿಕದ ಜನತೆಗೆ ಮಾತ್ರ ಈ ಅವಕಾಶ ಲಭ್ಯವಿದೆ.

ಅತ್ಯುತ್ತಮ ಬಾಸ್‌

ಆನ್‌ಲೈನ್‌ ತಾಣ ಗ್ಲಾಸ್‌ಡೂರ್

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌ ಈ ವರ್ಷದ ಅತ್ಯುತ್ತಮ ಬಾಸ್‌ ಪಟ್ಟ ಮಾರ್ಕ್ ಜುಕರ್‌ರ್ಗ್‌ಗೆ ಒಲಿದಿದೆ. ಫೇಸ್‌ಬುಕ್‌ನ ಶೇ.99 ರಷ್ಟು ಉದ್ಯೋಗಿಗಳು ಜ್ಯುಕರ್‌ಬರ್ಗ್ ಬಾಸ್‌ ಸ್ಥಾನಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ.

ಅಭಿಪ್ರಾಯ ಮಂಡನೆ

ಸಂವಾದ ನಡೆಸು

ಪ್ರತೀ ಶುಕ್ರವಾರ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಉದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ಜುಕರ್‌ಬರ್ಗ್ ಜೊತೆ ಹೇಳುತ್ತಾರೆ.

ಫಾಲೋವರ್ಸ್

ಅಧಿಕೃತ ಖಾತೆ

ಫೇಸ್‌ಬುಕ್‌ನಲ್ಲಿರುವ ಮಾರ್ಕ್‌ ಜುಕರ್‌ಬರ್ಗ್ ಅಧಿಕೃತ ಖಾತೆಯನ್ನು 17,930,812 ಮಂದಿ ಫಾಲೋ ಮಾಡುತ್ತಿದ್ದಾರೆ.

ಜುಕರ್‌ಬರ್ಗ್ ವಿವಾಹ

ವಿಶ್ವದಲ್ಲಿ ಚರ್ಚೆ

ಮಾರ್ಕ್ ಜುಕರ್‌ಬರ್ಗ್ ಮದುವೆಯ ವಿಚಾರ ಯಾರಿಗೂ ತಿಳಿಸಿದೇ ಕೊನೆ ಕ್ಷಣದಲ್ಲಿ ಪಾರ್ಟಿಯಲ್ಲಿ ಕಾಲೇಜ್‌ ಗೆಳತಿ ಪ್ರಿಸಿಲ್ಲಾ ಚಾನ್ಳನ್ನು ವಿವಾಹವಾಗಿದ್ದರು. ಪ್ರೈವೆಸಿ ಸೆಟ್ಟಿಂಗ್ಸನಲ್ಲಿ ಬದಲಾವಣೆ ಮಾಡಿಕೊಂಡು ಜುಕರ್‌ಬರ್ಗ್ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡಿದ್ದರು. ಈ ರೀತಿ ಯಾರಿಗೂ ತಿಳಿಸದೇ ಮದುವೆಯಾಗಿದ್ದು ವಿಶ್ವದಲ್ಲಿ ಚರ್ಚೆಯಾಗಿತ್ತು.

ಫೇಸ್‌ಬುಕ್‌ಗೆ ಹ್ಯಾಕರ್ ಸಂದೇಶ

ಹ್ಯಾಕರ್ ಸಂದೇಶ

ಪ್ಯಾಲೆಸ್ಟೈನ್‌ ಖಾಲಿ ಶ್ರೀಥ್‌(Khalil Shreateh) ಎನ್ನುವ ಹ್ಯಾಕರ್‌ ಫೇಸ್‌ಬುಕ್‌ನಲ್ಲಿ ಬಳಕೆದಾರರ ಅಕೌಂಟ್‌ ಹ್ಯಾಕ್‌ ಮಾಡಿ ಅವರ ವಾಲ್‌ನಲ್ಲಿ ಬೇರೊಬ್ಬರು ಮಾಹಿತಿಯನ್ನು ಪೋಸ್ಟ್‌ ಮಾಡಬಹುದು ಎಂದು ಫೇಸ್‌ಬುಕ್‌ಗೆ ತಿಳಿಸಿದ್ದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this Article we can see the Unknown facts about facebook founder Mark zuckerberg.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot