ಆನ್‌ಲೈನ್‌ ಬಳಕೆ ಸುರಕ್ಷತೆ ಕಡಿಮೆ

By Suneel
|

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರು ಸದಾಕಾಲ ಯಾವುದಾರರೊಂದು ಮಾಹಿತಿಯನ್ನು ಹರಿಯಬಿಡುತ್ತಿರುತ್ತಾರೆ. ಯಾವುದೇ ಮಾಹಿತಿ ಪ್ರಸಾರ ಸಂಪರ್ಕಕ್ಕೆ ಇಂಟರ್ನೆಟ್‌ ಬಹಳ ಮುಖ್ಯವಾಗಿದೆ ಎಂಬುದು ನಿಮಗೆಲ್ಲಾ ತಿಳಿದಿರುವ ವಿಷಯ. ಆದರೆ ಅದೇ ಸಮಯದಲ್ಲಿ ಎಲ್ಲರೂ ತಿಳಿಯಲೇ ಬೇಕಾದ ಮುಖ್ಯ ಮಾಹಿತಿ ಒಂದಿದೆ.

ಓದಿರಿ: 2030 ಕ್ಕೆ ಮಾನವನ ಕೈಯಲ್ಲಿ ಈ ಕ್ರಾಂತಿಕಾರಿ ಟೆಕ್‌ಗಳು

ನಾವು ಬಳಸುತ್ತಿರುವ ಟೆಲಿಕಾಂ ಸಂಪರ್ಕಗಳು ನಮಗೆ ಎಷ್ಟು ಸುರಕ್ಷತೆ ನೀಡುತ್ತಿವೆ. ಹ್ಯಾಕರ್‌ಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ವಯಕ್ತಿಕ ಮಾಹಿತಿಗಳನ್ನು ಇಂಟರ್ನೆಟ್‌ ಸೇವೆ ಕಂಪನಿಗಳು ಎಷ್ಟು ಸುರಕ್ಷತೆ ನೀಡುತ್ತವೆ ಎಂಬುದನ್ನು ತಿಳಿದಿರಬೇಕಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಆನ್‌ಲೈನ್‌ ಹಾಗೂ ವೆಬ್‌ಸೈಟ್‌ ಬಳಕೆದಾರರನ್ನು ಯಾವ ಯಾವ ಮೇಲ್‌ಗಳು , ಸಾಮಾಹಿಕ ಜಾಲತಾಣಗಳು, ಟೆಲಿಕಾಂ ಸೇವೆಗಳು ತಮ್ಮ ಬಳಕೆದಾರರಿಗೆ ಎಷ್ಟು ಸುರಕ್ಷತೆ ಒದಗಿಸಿವೆ ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳಿ.

ಇಂಟರ್ನೆಟ್‌ ಮತ್ತು ಟೆಲಿಕಾಂ ಸೇವೆ.

ಇಂಟರ್ನೆಟ್‌ ಮತ್ತು ಟೆಲಿಕಾಂ ಸೇವೆ.

ಬೃಹತ್‌ ಇಂಟರ್ನೆಟ್‌ ಸೇವೆ ಕಂಪನಿಗಳು ಮತ್ತು ಟೆಲಿಕಾಂ ಸೇವೆಗಳು ತಮ್ಮ ಬಳಕೆದಾರ ವಯಕ್ತಿಕ ಮಾಹಿತಿ ಗೌಪ್ಯತೆ ಕಾಪಾಡುವಲ್ಲಿ ಮತ್ತು ಅಭಿವ್ಯಕ್ತಿ ಸ್ವತಂತ್ರ ರಕ್ಷಿಸುವ ಸ್ವಲ್ಪ ಮಟ್ಟಿಗೆ ಅನುತ್ತೀರ್ಣಗೊಂಡಿವೆ.

ಸುರಕ್ಷತೆ ಅಧ್ಯಯನ

ಸುರಕ್ಷತೆ ಅಧ್ಯಯನ

ಆನ್‌ಲೈನ್‌ ವಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವತಂತ್ರ ಕಾಪಾಡುವಲ್ಲಿ 8 ಪ್ರಮುಖ ಇಂಟರ್ನೆಟ್‌ ಸೇವೆ ಕಂಪನಿಗಳು, 8 ಟೆಲಿಕಂಮ್ಯೂನಿಕೇಷನ್‌ ಕಂಪನಿಗಳಿಗೆ ಸುರಕ್ಷತೆಯ ಪ್ರಮಾಣದ ಬಗ್ಗೆ ಅಧ್ಯಯನ ಒಂದು ರೇಟಿಂಗ್‌ ನೀಡಿದೆ.

ಅಧ್ಯಯನ ಮುಖ್ಯಾಂಶ

ಅಧ್ಯಯನ ಮುಖ್ಯಾಂಶ

ಕೇವಲ 6 ಕಂಪನಿಗಳು ಶೇಕಡ 50 ರಷ್ಟು, ಹಾಗೂ 7 ಕಂಪನಿಗಳು ಶೇಕಡ 25 ಅಂಕಗಳಿಗಿಂತ ಕಡಿಮೆ ಸುರಕ್ಷತೆ ಪ್ರಮಾಣ ನೀಡುತ್ತಿರುವ ಬಗ್ಗೆ ಅಧ್ಯಯನ ಫಲಿತಾಂಶ ನೀಡಿದೆ.

ರಾಂಕಿಂಗ್‌ ಡಿಜಿಟಲ್‌ ರೈಟ್ಸ್‌ ಪ್ರಾಜೆಕ್ಟ್ಸ್‌

ರಾಂಕಿಂಗ್‌ ಡಿಜಿಟಲ್‌ ರೈಟ್ಸ್‌ ಪ್ರಾಜೆಕ್ಟ್ಸ್‌

ರಾಂಕಿಂಗ್‌ ಡಿಜಿಟಲ್ ರೈಟ್ಸ್‌ ಪ್ರಾಜೆಕ್ಟ್ಸ್‌ ಅಧ್ಯಯನವು ಎರಡು ವರ್ಷಗಳ ಕಾಲ ನೆಡೆದು ಅಧ್ಯಯನವು ಕಂಪನಿಗಳು ಸುರಕ್ಷತೆ ಪ್ರಮಾಣ ಕಡಿಮೆ ನೀಡುತ್ತಿರುವ ಬಗ್ಗೆ ಫಲಿತಾಂಶ ನೀಡಿದೆ.

ರೆಬೆಕ್ಕಾ ಮ್ಯಾಕ್ಕಿನ್ನಾನ್

ರೆಬೆಕ್ಕಾ ಮ್ಯಾಕ್ಕಿನ್ನಾನ್

ಅಧ್ಯಯನದ ನಿರ್ದೇಶಕರಾದ ರೆಬೆಕ್ಕಾ ಮ್ಯಾಕ್ಕಿನ್ನಾನ್, 'ರಾಂಕಿಂಕ್ ಪ್ರಕ್ರಿಯೆಯಲ್ಲಿ ಇಂಟರ್ನೆಟ್‌ ಸೇವೆ ನೀಡುವ ಬೃಹತ್ ಕಂಪನಿಗಳು ಮತ್ತು ಟೆಲಿಕಂಮ್ಯೂನಿಕೇಷನ್‌ ಕಂಪನಿಗಳಲ್ಲಿ ಯಾವ ಕಂಪನಿಗಳು ಸಹ ಅಧಿಕ ರಾಂಕ್‌ಗಳಿಸಿ ಗೆಲ್ಲಲಿಲ್ಲ' ಎಂದು ಹೇಳಿದ್ದಾರೆ.

ಗೂಗಲ್‌ ಟಾಪ್‌

ಗೂಗಲ್‌ ಟಾಪ್‌

ಅಧ್ಯಯನಕ್ಕೊಳಗಾಗಿದ್ದ 16 ಕಂಪನಿಗಳಲ್ಲಿ, ಮಾಹಿತಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಬಳಕೆದಾರರ ವಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವತಂತ್ರ ಕಾಪಾಡುವಲ್ಲಿ ಶೇಕಡ 65 ಪಾಯಿಂಟ್‌ ಸುರಕ್ಷತೆ ನೀಡುತ್ತದ್ದು, ಗೂಗಲ್‌ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವಲ್ಲಿ ಟಾಪ್‌ ಆಗಿದೆ.

ರಾಂಕಿಂಗ್‌ ಪಟ್ಟಿಯಲ್ಲಿ ಯಾಹೂ ದ್ವೀತೀಯ ಸ್ಥಾನ

ರಾಂಕಿಂಗ್‌ ಪಟ್ಟಿಯಲ್ಲಿ ಯಾಹೂ ದ್ವೀತೀಯ ಸ್ಥಾನ

ಇಂಟರ್ನೆಟ್‌ಸೇವೆ‌ ಕಂಪನಿಯಲ್ಲಿ 'ಯಾಹೂ' ಶೇಕಡ 58 ಪಾಯಿಂಟ್‌ ತೆಗೆದುಕೊಂಡು ತನ್ನ ಬಳಕೆದಾರರ ವಯಕ್ತಿಕ ಮಾಹಿತಿ ಗೌಪ್ಯತೆ ಕಾಪಾಡುವ ಮತ್ತು ಅಭಿವ್ಯಕ್ತಿ ಸ್ವತಂತ್ರ ರಕ್ಷಿಸುವಲ್ಲಿ ಎರಡನೇ ಸ್ಥಾನದಲ್ಲಿದೆ.

ಬಳಕೆದಾರರ ಸುರಕ್ಷತೆಯಲ್ಲಿ ಇತರೆ ಕಂಪನಿಗಳು

ಬಳಕೆದಾರರ ಸುರಕ್ಷತೆಯಲ್ಲಿ ಇತರೆ ಕಂಪನಿಗಳು

* ಮೈಕ್ರೋಸಾಫ್ಟ್‌ ಶೇಕಡ 56
* ಟ್ವಿಟರ್ ಶೇಕಡ 50
* ರಷ್ಯಾದ ಮೇಲ್‌.ರು ಶೇಕಡ 13
* ಚೀನಾ ಟೆಸೆಂಟ್ ಶೇಕಡ 16

ಟೆಲಿಕಾಂ ಸೇವೆಗಳು

ಟೆಲಿಕಾಂ ಸೇವೆಗಳು

ಟೆಲಿಕಾಂ ಸೇವೆಯಲ್ಲಿ ಬ್ರಿಟನ್‌ನ ವೋಡಾಫೋನ್‌ ಶೇಕಡ 54 ಪಾಯಿಂಟ್‌ ಗಳಿಸಿದೆ.

ಅಧ್ಯಯನದ ಮುಖ್ಯಾಂಶ

ಅಧ್ಯಯನದ ಮುಖ್ಯಾಂಶ

ಹೆಚ್ಚು ಕಂಪನಿಗಳು ಬಳಕೆದಾರರ ಮಾಹಿತಿ ಹಂಚಿಕೆ, ಸಂಗ್ರಹ, ಬಳಕೆ ಮಾಡುವ ವಿಷಯಗಳಲ್ಲಿ ಅಭಿವ್ಯಕ್ತಿ ಸ್ವತಂತ್ರ ಮಾಹಿತಿ ಹಂಚಿಕೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿವೆ.

ಮೂರನೇ ವ್ಯಕ್ತಿಗೆ ಮಾಹಿತಿ ಬಹಿರಂಗ

ಮೂರನೇ ವ್ಯಕ್ತಿಗೆ ಮಾಹಿತಿ ಬಹಿರಂಗ

ಹಲವು ಕಂಪನಿಗಳು ಬಳಕೆದಾರರ ವಯಕ್ತಿಕ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗ ಪಡಿಸಿವೆ.

ಕೆಲವು ಕಂಪನಿಗಳು ಮಾಹಿತಿ ಹಂಚುವಲ್ಲಿ ಅನುತ್ತೀರ್ಣಗೊಂಡಿವೆ.

ಕೆಲವು ಕಂಪನಿಗಳು ಮಾಹಿತಿ ಹಂಚುವಲ್ಲಿ ಅನುತ್ತೀರ್ಣಗೊಂಡಿವೆ.

ಕೆಲವು ಕಂಪನಿಗಳು ಮಾಹಿತಿ ಹಂಚುವಲ್ಲಿ ಅನುತ್ತೀರ್ಣಗೊಂಡಿವೆ.

 ಅಧ್ಯಯನ ಶಿಫಾರಸ್ಸು.

ಅಧ್ಯಯನ ಶಿಫಾರಸ್ಸು.

ಅಧ್ಯಯನವು ಅಭಿವ್ಯಕ್ತಿ ಸ್ವತಂತ್ರ ಮತ್ತು ವಯಕ್ತಿಕ ಮಾಹಿತಿ ಗೌಪ್ಯತೆಗೆ ಸಂಬಂಧಿಸಿದಂತೆ ಗೌರವ ಸೂಚಿಸುವಂತೆ ಕಾನೂನುಗಳು ರೂಪುಗೊಳ್ಳಬೇಕು ಎಂದು ಹೇಳಿದೆ.

Best Mobiles in India

English summary
The world's biggest internet and telecom companies are falling short in protecting privacy and online freedom of expression, a study released Tuesday showed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X