ನಿಮಗಾಗಿಯೇ ಬಂತು PUBG ಮೊಬೈಲ್ ಲೈಟ್‌..! ದುರ್ಬಲ ನೆಟ್‌ವರ್ಕ್‌ನಲ್ಲೂ ಆಡಿ..!

By Gizbot Bureau
|

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗೇಮಿಂಗ್‌ ಕ್ಷೇತ್ರದಲ್ಲಿ ಭಾರೀ ಕ್ರೇಜ್‌ ಹುಟ್ಟಿಸಿದ್ದ PUBG ಗೇಮ್‌ನ ಮೊಬೈಲ್ ಆವೃತ್ತಿ ಬಿಡುಗಡೆಯಾಗಿದೆ. ಗೇಮ್‌ ಪ್ರಸಿದ್ಧವಾಗಿದ್ದರೂ ಭಾರೀ ಗಾತ್ರದ ಫೈಲ್‌ ಹೊಂದಿರುವ ಕಾರಣ ಪ್ಲೇ ಸ್ಟೋರ್‌ಗಳಲ್ಲಿ PUBG ಸಿಗದೇ ಬಹಳಷ್ಟು ಜನ ನಿರಾಶೆಗೊಳಗಾಗಿದ್ದರು. ಆದರೆ, ಈಗ PUBG ಮೊಬೈಲ್‌ ಲೈಟ್‌ ಆಪ್‌ನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ. ಹೌದು, ಚೀನಾದ ಟೆಕ್‌ ಮತ್ತು ಮನರಂಜನಾ ದೈತ್ಯ PUBGಯ ಲೈಟ್‌ ಪಿಸಿ ಆವೃತ್ತಿ ಬಿಡುಗಡೆಯ ನಂತರ ಭಾರತದಲ್ಲಿ ಟೆನ್ಸೆಂಟ್‌ ಗೇಮ್ಸ್‌ PUBG ಮೊಬೈಲ್‌ ಲೈಟ್‌ ಆಪ್‌ನ್ನು ಹೊರತಂದಿದೆ.

400MB ಗಾತ್ರ

400MB ಗಾತ್ರ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸಿಗುವ PUBG ಮೊಬೈಲ್‌ ಲೈಟ್‌ ಆಪ್‌ನ ಗಾತ್ರ ಸುಮಾರು 400 MB ಮತ್ತು ಇದು 2GBಗಿಂತ ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಬಹುದು. ಲೈಟ್ ಆವೃತ್ತಿಯಲ್ಲಿ ಬಳಕೆದಾರರು ನಕ್ಷೆಯನ್ನು ಪಡೆಯುತ್ತಾರೆ. ಇದು PUBG ಮೊಬೈಲ್‌ಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿದ್ದು, 60 ಆಟಗಾರರು 10 ನಿಮಿಷಗಳವರೆಗೆ ಸ್ಪರ್ಧಿಸಬಹುದಾಗಿದೆ.

ದುರ್ಬಲ ನೆಟ್‌ವರ್ಕ್‌ನಲ್ಲೂ ಆಟ

ದುರ್ಬಲ ನೆಟ್‌ವರ್ಕ್‌ನಲ್ಲೂ ಆಟ

ಕೇವಲ ಗಾತ್ರ ತಗ್ಗಿರುವುದು ಅಲ್ಲದೇ, PUBG ಮೊಬೈಲ್‌ ಲೈಟ್‌ನ್ನು ದುರ್ಬಲ ನೆಟ್‌ವರ್ಕ್‌ನಲ್ಲೂ ಆಡಬಹುದಾಗಿದೆ. ಸುಧಾರಿತ ಗುರಿ ಸಹಾಯದೊಂದಿಗೆ PUBG ಮೊಬೈಲ್ ಲೈಟ್ ಆಪ್‌ ಬಂದಿದ್ದು, ಆಟಗಾರರ ಕ್ರಾಲ್ ಮತ್ತು ನಿಂತಿರುವ ಸ್ಥಾನಗಳ ಸಮಯದಲ್ಲಿ ತೀವ್ರತೆ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. PUBG ಮೊಬೈಲ್ ಲೈಟ್‌ಗೆ ಸೇರುವ ಹೊಸ ಆಟಗಾರರು ಹೊಸ ಗೇರ್‌, ವಾಹನಗಳ ರೂಪದಲ್ಲಿ ವಿವಿಧ ರೀವಾರ್ಡ್‌ಗಳನ್ನು ಪಡೆಯುತ್ತಾರೆ.

ಹಲವು ಸುಧಾರಣೆ

ಹಲವು ಸುಧಾರಣೆ

PUBG ಮೊಬೈಲ್ ಲೈಟ್ ಆಟಗಾರರಿಗೆ ಸ್ಪಷ್ಟವಾಗಿ ಗುರಿಯಿಡಲು ಸಹಕಾರಿಯಾಗುತ್ತದೆ. ಏಕೆಂದರೆ, ಈ ಆವೃತ್ತಿಯ PUBG ಯಾವುದೇ ಬುಲೆಟ್ ಡ್ರಾಪ್ ಪರಿಣಾಮವಿಲ್ಲದೆ ಬುಲೆಟ್ ವೇಗಕ್ಕೆ ಹೆಚ್ಚಿನ ಬಲ ತುಂಬುತ್ತದೆ. ಕಂಪನಿ ಹೇಳುವ ಪ್ರಕಾರ ಈ ಗೇಮ್‌ನಲ್ಲಿ ಕೊಲ್ಲುವ ಸಮಯ ದೀರ್ಘ ಕಾಲದವರೆಗೆ ಇರುತ್ತದೆ. ಮತ್ತು ಫೈರ್‌ಫೈಟ್‌ ಸಮಯದಲ್ಲಿ ಆಟಗಾರರ ಬದುಕುಳಿಯುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆಕ್ರಮಣಕಾರಿ ಆಟವನ್ನು ಉತ್ತೇಜಿಸುತ್ತದೆ.

PUBG ಮೊಬೈಲ್ ಸೀಸನ್ 8

PUBG ಮೊಬೈಲ್ ಸೀಸನ್ 8

ಶಸ್ತ್ರಾಸ್ತ್ರ ಕಸ್ಟ್‌ಮೈಜೇಶನ್‌, ಬಟ್ಟೆ, ರೀವಾರ್ಡ್‌ಗಳು, ಹೊಸ ಥೀಮ್ ಹಾಗೂ ಹೊಸ ವೈಶಿಷ್ಟ್ಯಗಳೊಂದಿಗೆ ಕಳೆದ ವಾರ PUBG ಮೊಬೈಲ್ ಸೀಸನ್ 8 ಬಿಡುಗಡೆ ಮಾಡಲಾಯಿತು. ಹೊಸ ಸೀಸನ್‌ ಈಗಾಗಲೇ ಪ್ರಾರಂಭವಾಗಿದ್ದು, ಹೆಚ್ಚಿನ ಇಷ್ಟಪಡುವ ಅಂಶಗಳು ಈ ಸೀಸನ್‌ನಲ್ಲಿ ಸೇರಿವೆ. ಅದರಲ್ಲೂ, ವಿಶೇಷವಾಗಿ 'ಪವರ್ ಆಫ್ ದಿ ಓಷನ್' ಥೀಮ್, ಬಿಜೋನ್‌ ಗನ್ ಮತ್ತು ಗನ್ ಲ್ಯಾಬ್‌ನಲ್ಲಿನ SCAR-Lಗಾಗಿ 'ವಾಟರ್ ಬ್ಲಾಸ್ಟರ್' ಸ್ಕಿನ್‌ ಪ್ರಮುಖವಾಗಿವೆ.

PUBG ಪಿಸಿ ಲೈಟ್‌ ಬಿಡುಗಡೆ

PUBG ಪಿಸಿ ಲೈಟ್‌ ಬಿಡುಗಡೆ

ಭಾರತದಲ್ಲಿ ಇತ್ತೀಚೆಗಷ್ಟೇ ಹೈ ಎಂಡ್‌ ಗೇಮಿಂಗ್‌ ಕಂಪ್ಯೂಟರ್ ಹೊಂದಿರದ ಜನರಿಗೆ PUBG ಆಡಲು ಅನುಕೂಲವಾಗಲೆಂದು ಪಿಸಿ ಲೈಟ್‌ ಆವೃತ್ತಿಯನ್ನು ಅನಾವರಣಗೊಳಿಸಲಾಯಿತು. ಆದಾಗ್ಯೂ, ಭಾರತದಲ್ಲಿ PUBG ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವುದರಿಂದ ಪ್ರಸಿದ್ಧಿಯಾಗಿದೆ. ಆದ್ದರಿಂದ, PUBG ಮೊಬೈಲ್‌ನಿಂದ PUBG Liteಗೆ ಶಿಫ್ಟ್‌ ಆದಾದ ಕಂಪ್ಯೂಟರ್‌ಗಳಲ್ಲಿ ನಿಯಂತ್ರಣಗಳು ವಿಭಿನ್ನವಾಗಿರುತ್ತವೆ.

Best Mobiles in India

Read more about:
English summary
PUBG Lite Released In India For Smartphones With Less Than 2GB RAM

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X